ಭಾರತೀಯ ಚಿತ್ರರಂಗದ ಇತಿಹಾಸವು ಹಿರಿಯ ತಲೆಮಾರಿನವರಿಗೆ ತಿಳಿದಿದೆ. ಆದರೆ ಪ್ರಸಕ್ತ ಯುವಜನಾಂಗಕ್ಕೆ ಅದರ ಬಗ್ಗೆ ಗೊತ್ತಿರುವುದಿಲ್ಲ. ಇದನ್ನು ಮನಗಂಡ ಸಿನಿಮಾ ಪತ್ರಕರ್ತ ಶಶಿಧರ್‌ಚಿತ್ರದುರ್ಗ ’ಚಿತ್ರಪಥ’ ಎನ್ನುವ ಸಿನಿಮಾ ಆರ್ಕೈವ್ ಪೋರ್ಟಲ್‌ನ್ನು ಹೊರ ತಂದಿದ್ದಾರೆ. ಇದರಲ್ಲಿ ನಾಸ್ಟಾಲ್ಜಿಯಾ, ನೆನಪು, ಮಾಹಿತಿ ವಿಶೇಷ, ವಿಡಿಯೋ, ಪೋಸ್ಟರ್ ಮಾಹಿತಿ, ಸಿನಿಮಾ ಅಂದು-ಇಂದು, ಚಿತ್ರಕತೆ, ಶೂಟಿಂಗ್ ಸೋಜಿಗ ಮತ್ತು ಅತಿಥಿ ಅಕ್ಷರ ಹೀಗೆ ಒಂಬತ್ತು ವಿಭಾಗಳಲ್ಲಿ ಅಯಾ ವಿಷಯಕ್ಕೆ ಸಂಬಂದಪಟ್ಟ ಮಾಹಿತಿಗಳನ್ನು ನೋಡಬಹುದಾಗಿದೆ. ಶನಿವಾರ ರಾಷ್ಟ್ರ ಪ್ರಶಸ್ತಿ ನಿರ್ದೇಶಕ ಗಿರೀಶ್‌ಕಾಸರವಳ್ಳಿ ಸದರಿ ಪೋರ್ಟಲ್‌ನ್ನು ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿ ಇಂತಹ ಸಾಧನೆ ಮಾಡಿದ್ದಕ್ಕೆ ಮೊದಲು ಶಶಿಧರ್ ಅವರನ್ನು ಅಭಿನಂದಿಸಬೇಕು. ಇತಿಹಾಸವನ್ನು ಕೇವಲ ಕುತೂಹಲದಿಂದ ನೋಡೋದಲ್ಲ. ಅದು ನಮಗೆ ಪಾಠವನ್ನು ಕೊಡುತ್ತೆ ಎಂಬುದಾಗಿ ಅರ್ಥ ಮಾಡಿಕೊಂಡರೆ, ಆಗ ಇತಿಹಾಸ, ಪರಂಪರೆ ಯಾಕೆ ನೋಡಬೇಕು? ಅಭ್ಯಸಿಸಬೆಕು ಎನ್ನುವ ಅರ್ಥ ಬರುತ್ತದೆ. ಗತಕಾಲದ ಸಿನಿಮಾ ’ಕಿತ್ತೂರು ಚೆನ್ನಮ್ಮ’ ಹುಟ್ಟಲು ಕಾರಣವಾದರೂ ಏನು ಅಂತ ತಿಳಿಯಲು ಇದು ಸಹಕಾರಿಯಾಗುತ್ತದೆ. ಇತಿಹಾಸವನ್ನು ವ್ಯಾಖ್ಯಾನಿಸುವಾಗ ಅದನ್ನು ಸುಳ್ಳು, ತಪ್ಪು ಅಂತ ಹೇಳೋಕೆ ಆಗುವುದಿಲ್ಲ. ಎರಡೂ ನಿಜವಾಗಿರುತ್ತದೆ. ನಮ್ಮ ಕಾಲದಲ್ಲಿ ಇಂತಹ ಮಾಹಿತಿಗಳು ಸಿಗುತ್ತಿರುಲಿಲ್ಲ.

ವರ್ಷಕ್ಕೊಮ್ಮೆ ಪತ್ರಿಕೆಯಲ್ಲಿ ಪ್ರಕಟವಾಗುವುದನ್ನೆ ಕಾಯುತ್ತಿದ್ದೇವು. ಈಗ ಎಲ್ಲವು ಡಿಜಿಟಲ್‌ಮಯ ವಾಗಿದ್ದರಿಂದ ಸುಲಭವಾಗಿ ಸಿಗುತ್ತದೆ. ಬಾಲಿವುಡ್ ಹಾಗೂ ಇತರೆ ಭಾಷೆಗಳಲ್ಲಿ ಇಂತಹ ಪೋರ್ಟಲ್‌ಗಳು ಇರುವುದನ್ನು ಕಂಡು ನಮ್ಮಲ್ಲಿ ಯಾಕಿಲ್ಲವೆಂಬ ನೋವು ಕಾಡುತ್ತಿತ್ತು. ಇದು ಬಂದ ಮೇಲೆ ನೋವು  ಪೂರ್ಣವಾಗಿದೆ. ಪೋರ್ಟಲ್ ನಮ್ಮ ಕನ್ನಡ ಸಂಸ್ಕ್ರತಿಗೆ ಉಪಯುಕ್ತವಲ್ಲ. ಕನ್ನಡ ನಾಡಿಗೆ ಅನುಕೂಲ. ಸಿನಿಮಾದಲ್ಲಿ ಸಾಧ್ಯವಾಗದೆ ಇರುವುದನ್ನು ಹಾಡಿನ ಸಾಹಿತ್ಯದಲ್ಲಿ ಹೇಳಬಹುದು. ಇತಿಹಾಸವನ್ನು ಕೆಣಕಿದಾಗ ನಟ,ನಟಿಯರ ವಿವರಗಳು ಸಿಗುತ್ತದೆ. ಅದೇ ಚಿತ್ರಪಥದಲ್ಲಿ  ತೆರೆ ಹಿಂದೆ ಕೆಲಸ ಮಾಡಿದವರ ತಂತ್ರಜ್ಘರ ಸಾಧನೆ ತಿಳಿದುಕೊಳ್ಳಬಹುದು.  ಶಶಿಧರ್ ಅವರ ಇಂತಹ ಪ್ರಯತ್ನ ನಿರಂತರವಾಗಿ ಸಾಗಲಿ ಎಂದು ಶುಭಹಾರೈಸಿದರು.

ನೋಡಬಲ್ಲ, ನೋಡಲೇಬೇಕಾದ ಹಾಗೂ ಕಣ್ಣು, ಮನಸ್ಸಿಗೆ ಮುದನೀಡಲಿದೆ ಅಂತ ಬಣ್ಣಸಿದ್ದು ನಿರ್ದೇಶಕ, ಸಾಹಿತಿ ಕವಿರಾಜ್. ಚಿತ್ರಪಥದಲ್ಲಿ ಸಂಕ್ಷಿಪ್ರವಾದ ಮಾಹಿತಿಗಳು ಲಭ್ಯವಿರುವುದರಿಂದ ಇಂದಿನ ಪೀಳಿಗೆಗೆ ಉಪಯುಕ್ತವಾಗುತ್ತದೆ. ಅಕಾಡಮಿಗೂ ಮಾಹಿತಿ ನೀಡಬಹುದು. ಕಪ್ಪು ಬಿಳುಪಿನ ಘಟನೆಗಳು ನೆನಪು ಮಾಡಿಕೊಡುತ್ತದೆಂದು ಸಂಚಾರಿ ವಿಜಯ್ ಹೇಳಿದರು.

ಇದೇ ಸಂದರ್ಭದಲ್ಲಿ 1960 ರಿಂದ ಮೂರು ದಶಕಗಳ ಕಾಲ ಸಿನಿಮಾ ಸ್ಥಿರ ಚಿತ್ರ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ್ದ ಭವಾನಿಲಕ್ಷೀನಾರಾಯಣ ಮತ್ತು ಪ್ರಗತಿ ಅಶ್ವತನಾರಾಯಣ ಅವರುಗಳನ್ನು ಗೌರವಿಸಲಾಯಿತು. ಆಸಕ್ತರು ’ಚಿತ್ರಪಥ ಡಾಟ್ ಕಾಮ್’ ವೆಬ್‌ಸೈಟ್‌ನ್ನು ವೀಕ್ಷಿಸಬಹುದು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕತ್ತಲು, ಕಾಡು, ರಕ್ತ, ರಾಕ್ಷಸರ ನಡುವೆ ಥ್ರಿಲ್ಲು ನೀಡುವ ಹೀರೋ!

Previous article

ಹುಲಿಯೊಂದಿಗೆ ಮಾಳವಿಕಾ!

Next article

You may also like

Comments

Leave a reply

Your email address will not be published. Required fields are marked *