ನವಿ ನಿರ್ಮಿತಿ’ ಸಂಸ್ಥೆ ವತಿಯಿಂದ ನಮಿತ ರಾವ್ ನಿರ್ಮಾಣದ ಹಾಗೂ ನಟನೆಯ ವಿಕ್ರಂ ಸೂರಿ ನಿರ್ದೇಶನದ “ಚೌಕಬಾರ” ಕಾದಂಬರಿ ಆಧಾರಿತ ಚಿತ್ರದ ಹಾಡು ‘ಯಾವ ಚುಂಬಕ’ (ರಚನೆ- ಬಿ ಆರ್ ಲಕ್ಷ್ಮಣ ರಾವ್) ಗೀತ ಸಾಹಿತ್ಯಕ್ಕೆ ಈ ಬಾರಿ 69ನೇ ಸೌತ್ ಫಿಲಂ ಫೇರ್ ಪ್ರಶಸ್ತಿ ದೊರೆತಿದೆ. ನಮಿತ ರಾವ್ ಹಾಗೂ ವಿಕ್ರಂ ಸೂರಿ ದಂಪತಿಗಳು ಮಾತನಾಡುತ್ತ ತಮ್ಮ ಚುಚ್ಚಲ ಚಿತ್ರಕ್ಕೆ ಈ ಗೌರವ ಲಭಿಸಿದ್ದಕ್ಕಾಗಿ ಹಾಗೂ ಇದರಿಂದ ತಮ್ಮ ಜವಾಬ್ದಾರಿ ಇನ್ನೂ ಹೆಚ್ಚಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕವಿ ಬಿ ಆರ್ ಲಕ್ಷ್ಮಣರಾವ್ ಅವರು ಮಾತನಾಡುತ್ತಾ ಈ ಹಿಂದೆ ತಮ್ಮ ಹಲವಾರು ಭಾವಗೀತೆಗಳನ್ನು ಅನೇಕ ಚಿತ್ರಗಳಲ್ಲಿ ಬಳಸಿಕೊಂಡಿದ್ದು, ಚಲನಚಿತ್ರಕ್ಕಾಗಿ ಗೀತೆಗಳನ್ನು ಸಹ ರಚಿಸಿದ್ದೇನೆ ಆದರೆ ನನ್ನ ವೃತ್ತಿ ಜೀವನದಲ್ಲಿ ಈಗ “ಚೌಕಬಾರ” ಚಿತ್ರದ ಮುಖೇನ ‘ಫಿಲಂ ಫೇರ್’ ಪ್ರಶಸ್ತಿ ಲಭಿಸಿದ್ದು ನನಗೆ ಸಂತೋಷ ತಂದಿದೆ ಎಂದು ಚಿತ್ರತಂಡಕ್ಕೆ, ಫಿಲಂ ಫೇರ್ ಸಮಿತಿಗೆ ಹಾಗೂ ಸಾಹಿತ್ಯ ರಸಿಕರಿಗೆ ಧನ್ಯವಾದಗಳು ತಿಳಿಸಿದರು.
No Comment! Be the first one.