ವಿಕ್ರಾಂತ್ ರೋಣ. ಸ್ಯಾಂಡಲ್ವುಡ್ನಲ್ಲಿ ಹೈ ವೋಲ್ಟೇಜ್ ಎಕ್ಸ್ಪೆಕ್ಟೇಷನ್ ಹುಟ್ಟು ಹಾಕಿರೋ ಕಿಚ್ಚ ಸುದೀಪ್ರ ಪವರ್ಫುಲ್ ಸಿನಿಮಾ. ಸಿನಿಮಾ ಲಾಂಚ್ ಆದ ಕ್ಷಣದಿಂದಲೂ ಅಭಿಮಾನಿ ಬಳಗದಲ್ಲಿ ಕ್ಯೂರಿಯಾಸಿಟಿ ಹೆಚ್ಚಿದೆ. ಆಗಾಗ ಅಪ್ಡೇಟ್ ಕೊಡೋ ಮೂಲಕ ಸ್ಯಾಂಡಲ್ವುಡ್ ಸುದ್ದಿ ಸಾಗರದಲ್ಲಿ ಸದ್ದು ಮಾಡೋ ವಿಕ್ರಾಂತ್ ರೋಣ ಮತ್ತೆ ಸುದ್ದಿಯಲ್ಲಿದ್ದಾನೆ. ಇಂದು (ಏಪ್ರಿಲ್ 15ಕ್ಕೆ) ಸರ್ಪ್ರೈಸ್ ನೀಡೋದಾಗಿ ಚಿತ್ರತಂಡ ಘೋಷಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಹೀರೋ ಕಿಚ್ಚ ಸುದೀಪ್ ಅಥವಾ ನಿರ್ದೇಶಕ ಅನೂಪ್ ಬಂಡಾರಿ ವಿಕ್ರಾಂತ್ ರೋಣ ಸಿನಿಮಾದ ಬಗ್ಗೆ ಅಪ್ಡೇಟ್ಸ್ ನೀಡೋ ಮೂಲಕ ಅಭಿಮಾನಿಗಳನ್ನ ಹುರಿದುಂಬಿಸ್ತಾರೆ. ತಮ್ಮ ಹೀರೋ ಸಿನಿಮಾದ ಅಪ್ಡೇಟ್ಗಾಗಿ ಕಾಯೋ ಫ್ಯಾನ್ಸ್ಗೆ ಆಗಾಗ ಸಿನಿಮಾದ ಸಕ್ರಿಯ ಸುದ್ಧಿಗಳನ್ನ ನೀಡೋ ಮೂಲಕ ವಿಕ್ರಾಂತ್ ರೋಣ ಸಿನಿಮಾ ತಂಡ ಅಭಿಮಾನಿಗಳನ್ನ ಟ್ಯೂನ್ ಮಾಡ್ತಿದೆ. ಈಗ ಮತ್ತೆ 15ನೇ ತಾರೀಖು ಬಿಗ್ ಸರ್ಪ್ರೈಸ್ ಕೊಡೋಕೆ ಸಿನಿಮಾ ತಂಡ ಮುಂದಾಗಿದೆ. ಈ ಹಿನ್ನೆಲೆ ವಿಕ್ರಾಂತ್ ರೋಣ ನೀಡ್ತಿರೋ ಸರ್ಪ್ರೈಸ್ ಏನು ಅನ್ನೋ ಬಿಗ್ ಪ್ರಶ್ನೆ ಅಭಿಮಾನಿಗಳ ವಲಯದಲ್ಲಿ ಹಾಗೂ ಸಿನಿಮಾ ರಂಗದಲ್ಲಿ ಕೇಳಿ ಬರ್ತಿದೆ.
ಇತ್ತೀಚೆಗಷ್ಟೇ ಬುರ್ಜ್ ಖಲೀಫಾದಲ್ಲಿ ಸಿನಿಮಾದ ಪೋಸ್ಟರ್ ಜೊತೆ ಕನ್ನಡದ ಬಾವುಟವನ್ನೂ ಹಾರಿಸಿ ದೊಡ್ಡ ಸೌಂಡ್ ಮಾಡಿದ್ದ ವಿಕ್ರಾಂತ್ ರೋಣ. ಈಗ ಏಪ್ರಿಲ್ 15ಕ್ಕೆ ಮತ್ತೆ ಸದ್ದು ಮಾಡೋಕೆ ರೆಡಿಯಾಗಿದ್ದಾನೆ. ಸಿನಿಮಾದ ಮತ್ತೊಂದು ಪೋಸ್ಟರ್ ರಿಲೀಸ್ ಆಗುತ್ತಾ, ಅಥವಾ ಹಾಡಿನ ಬಗ್ಗೆ ಏನಾದ್ರೂ ಮಾಹಿತಿ ಸಿಕ್ಕುತ್ತಾ… ಏನಿರ್ಬೋದು ಅಂತಾ ಅಭಿಮಾನಿಗಳು ನೂರಾರು ಪ್ರಶ್ನೆಗಳನ್ನ ಹಾಕೊಂಡು ಯೋಚನೆ ಮಾಡ್ತಿದ್ದಾರೆ. ಒಂದು ಮೂಲಗಳ ಪ್ರಕಾರ ಏಪ್ರಿಲ್ 15ಕ್ಕೆ ವಿಕ್ರಾಂತ್ ರೋಣ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗುತ್ತೆ ಎನ್ನಲಾಗ್ತಿದೆ.
ಈಗಾಗಲೇ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಸಿನಿಮಾ ಶುರುವಾಗಿ ಶೂಟಿಂಗ್ ನಡೆಯೋವಾಗ್ಲೇ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡೋದು ಸದ್ಯದ ಟ್ರೆಂಡ್ ಆಗಿದೆ. ಅದೇ ರೀತಿ ಇಂದು ವಿಕ್ರಾಂತ್ ರೋಣ ಸಿನಿಮಾದ ರಿಲೀಸ್ ಡೇಟ್ ರಿವೀಲ್ ಮಾಡಲಾಗುತ್ತೆ ಅಂತಾ ಹೇಳಲಾಗ್ತಿದೆ. ಒಟ್ಟಾರೆಯಾಗಿ ಸದ್ಯಕ್ಕೆ ವಿಕ್ರಾಂತ್ ರೋಣ ಸಿನಿಮಾ ಬಿಗ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಆ ಸರ್ಪ್ರೈಸ್ ಏನಿರ್ಬೋದು ಅಂತಾ ಇವತ್ತು 11 ಗಂಟೆ ನಂತರ ಖಂಡಿತಾ ಗೊತ್ತಾಗಲಿದೆ!