ವಿಶ್ವದಾದ್ಯಂತ ಎಲ್ಲಾ ಉದ್ಯಮಗಳೂ covid-19 ನ ಹೊಡೆತದಿಂದ ನೆಲ ಕಚ್ಚಿವೆ. ಅದರಲ್ಲೂ ಸಿನಿಮೋದ್ಯಮಕ್ಕೆ ಅತ್ಯಂತ ಸಂಕಷ್ಟ ಕಾಲ. ಇದಕ್ಕೆ ಕನ್ನಡ ಚಿತ್ರರಂಗವೂ ಹೊರತಾಗಿಲ್ಲ. ಕಳೆದ ಎಂಟು ತಿಂಗಳಲ್ಲಿ ಚಿತ್ರರಂಗ ಅನುಭವಿಸುತ್ತಿರುವ ನಷ್ಟ ಹೇಳತೀರದು. ನಿರ್ಮಾಪಕ ನಿರ್ದೇಶಕರೂ ಸೇರಿದಂತೆ ಇಡೀ ಚಿತ್ರೋದ್ಯಮದ ಕಾರ್ಮಿಕರು ಕಂಗಾಲಾಗಿದ್ದಾರೆ. ಸರ್ಕಾರ ಚಿತ್ರ ಬಿಡುಗಡೆಗೆ ಅನುಮತಿ ನೀಡಿದ್ದರೂ ಜನ ಚಿತ್ರ ಮಂದಿರದತ್ತ ಬರಲು ಹಿಂದೇಟು ಹೊಡೆಯುತ್ತಿದ್ದಾರೆ. ಒಂದೆರಡು ಸಿನಿಮಾಗಳು ಥಿಯೇಟರುಗಳಿಗೆ ಬಿಡುಗಡೆಯಾಗಿದ್ದರೂ ಮತ್ತೆ ಕೋವಿಡ್ ಎರಡನೇ ಅಲೆ ಜನರು ಥಿಯೇಟರಿನತ್ತ ಮುಖಮಾಡಲು ಹಿಂಜರಿಯುವಂತೆ ಮಾಡುತ್ತಿದೆ. ಮುಂಬರುವ ಒಂದೆರಡು ವರುಷಗಳು ಈ ಸವಾಲನ್ನು ಎದುರಿಸುವ ಸಂಧಿಗ್ದತೆಯಲ್ಲಿ ಕನ್ನಡ ಸಿನಿಮೋದ್ಯಮ ಕೂಡಾ ಇದೆ.

ಇಂತಹ ಸಂಧಿಗ್ದ ಸಮಯದಲ್ಲಿ OTT ಫಾರ್ಮ್ಯಾಟ್ ಗಳು ಜನಮನ್ನಣೆ ಪಡೆದುಕೊಳ್ಳುತ್ತಿದ್ದು ಅದರಲ್ಲಿ ಕನ್ನಡಿಗರೇ ಸೇರಿ ನಿರ್ಮಿಸಿದ ಸ್ಟ್ರೀಮಿಂಗ್ ಫ್ಲಾಟ್ ಫಾರ್ಮ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ಈ ನೂತನ ಸ್ಟ್ರೀಮಿಂಗ್ ಫ್ಲಾಟ್ ಫಾರ್ಮ್ cinemanodi.in ಇದು ಬೇರೆಲ್ಲ OTT ಗಳಿಗಿಂತ ವಿಭಿನ್ನವಾಗಿದೆ ಮತ್ತು ವೀಕ್ಷಕಸ್ನೇಹಿಯಾಗಿದೆ. ಅಡ್ವಾನ್ಸ್ ಟೆಕ್ನಾಲಜಿಯನ್ನೊಳಗೊಂಡಿರುವ ಈ ಫ್ಲಾಟ್ ಫಾರ್ಮ್ ಜಾಹಿರಾತು ಮುಕ್ತವಾಗಿದ್ದು ಜನರಿಗೆ ನಿರಾಳವಾಗಿ ಸಿನಿಮಾ ನೋಡುವ ಅನುಭವವನ್ನು ನೀಡುತ್ತದೆ. ವೀಕ್ಷಕರು ಚಂದಾದಾರರಾಗಬೇಕಾದ ಅವಶ್ಯಕತೆಯಿಲ್ಲ.

ಇದು ಥಿಯೇಟರ್ ಕಾನ್ಸೆಪ್ಟ್ ಹೊಂದಿದ್ದು ಜನರು ತಮಗಿಷ್ಟವಾದ ಸಿನಿಮಾವನ್ನು ಆರಿಸಿ ಆ ಸಿನಿಮಾಗೆ ಮಾತ್ರವೇ ಹಣ ಪಾವತಿಸುವ ಅವಕಾಶ ಇಲ್ಲಿದೆ. ಒಂದು ಸಿನಿಮಾ ನೋಡಲು ತಿಂಗಳ ಪೂರ್ತಿ ಚಂದಾ ಹಣ ಪಾವತಿಸಬೇಕಾಗಿಲ್ಲ. ಅದೇ ಸಂದರ್ಭದಲ್ಲಿ ಇದು ನಿರ್ಮಾಪಕರಿಗೂ ಕೂಡಾ ಲಾಭದಾಯಕವಾದ ಅಂಶಗಳನ್ನು ಹೊಂದಿದ್ದು ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಥಿಯೇಟರ್ ಗೆ ಬಿಡುಗಡೆ ಮಾಡುವ ಸಂದರ್ಭದಲ್ಲಿಯೇ ಇಲ್ಲಿಯೂ ಬಿಡುಗಡೆ ಮಾಡಬಹುದಾಗಿದೆ. ಇದು ಭಾರತದಲ್ಲಿಯೇ ನೂತನ ಪ್ರಯತ್ನವಾಗಿದ್ದು ಇದು ನಿರ್ಮಾಪಕರ ಸಿನಿಮಾ ಹಕ್ಕುಗಳನ್ನು ಕೇಳುವುದಿಲ್ಲ. ಅವರು ತಮ್ಮ ಹಕ್ಕುಗಳನ್ನು ತಮ್ಮಲ್ಲಿಯೇ ಇರಿಸಿಕೊಂಡು ಥಿಯೇಟರ್ ಗೆ ಬರಲು ಸಾಧ್ಯವಾಗದ ಜನಗಳನ್ನೂ ಕೂಡಾ ಸಿನಿಮಾ ತಲುಪುವಂತೆ ಮಾಡುವ ಮೂಲಕ ಹೆಚ್ಚುವರಿ ಆದಾಯ ಪಡೆಯಬಹುದಾಗಿದೆ.

ಹೀಗೆ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ತಮ್ಮ ಕಂಟೆಂಟ್ ಸೆಕ್ಯೂರಿಟಿ ಬಗ್ಗೆ ಆತಂಕಗೊಳ್ಳಬೇಕಾಗಿಲ್ಲ. ಮಲ್ಟಿ DRM ಸೆಕ್ಯೂರಿಟಿ ತಂತ್ರಜ್ಞಾನವನ್ನು ಒದಗಿಸುವ ಮೂಲಕ ಅವರ ಕಂಟೆಂಟ್ ಗೆ ಭದ್ರತೆ ನೀಡುತ್ತದೆ. ಕ್ವಾಲಿಟಿಯಲ್ಲಿಯೂ ಇದು ಅಂತರಾಷ್ಟ್ರೀಯಮಟ್ಟದ ಗುಣಮಟ್ಟವನ್ನು ಹೊಂದಿದ್ದು FHD ಮತ್ತು 5.1 ಸರೌಂಡ್ ಸೌಂಡ್ ಸೌಲಭ್ಯವನ್ನು ಹೊಂದಿದೆ. ಡೋಲ್ಬಿ ವಿಷನ್ ಮತ್ತು ಡೋಲ್ಬಿ ಅಟ್ಮಾಸ್ ಗೂ ಕೂಡಾ ಅವಕಾಶವಿದೆ. ಹೊಸ ಸಿನಿಮಾ ಬಿಡುಗಡೆಯ ಜೊತೆಗೆ ಹಳೆಯ ಸಿನಿಮಾ ಲೈಬ್ರರಿ ಕೂಡಾ ಇಲ್ಲಿ ಲಭ್ಯವಿದೆ. ಹಳೆ ಸಿನಿಮಾ ದರ ರೂ.19 ಮತ್ತು ಹೊಸ ಸಿನಿಮಾ ದರ ರೂ. 100 ಆಗಿದೆ. ಹೊಸ ಸಿನಿಮಾ ಬಿಡುಗಡೆ ಮಾಡುವ ನಿರ್ಮಾಪಕರಿಗೆ ಅತ್ಯಂತ ಹೆಚ್ಚಿನ ಲಾಭಾಂಶ ನೀಡುವ ಮೂಲಕ ಅವರಿಗೆ ಹೊಸ ಆದಾಯವೊಂದರ ಭರವಸೆ ನೀಡುತ್ತದೆ. ಸಿನಿಪ್ರೇಮಿಗಳಿಗೆ ಮನೆಯಲ್ಲೇ ಕುಳಿತು ತಮ್ಮ ನೆಚ್ಚಿನ ಸಿನಿಮಾ ಕಣ್ತುಂಬಿಕೊಳ್ಳುವ ಅವಕಾಶವನ್ನು ಈ ವೇದಿಕೆ ನೀಡುತ್ತಿದೆ.

ಈ ವೇದಿಕೆ ಜಾಹಿರಾತು ಮುಕ್ತವಾಗಿ ಸಿನಿಮಾ ಹಾಡುಗಳನ್ನು 5.1 ಸರೌಂಡ್ ಸೌಂಡ್ ನೊಂದಿಗೆ ವೀಡಿಯೋ ಮೂಲಕ ನೋಡುವ ಅವಕಾಶವನ್ನೂ ಕೂಡಾ ಕೇವಲ 1 ರೂಪಾಯಿಗೆ ಒದಗಿಸಿಕೊಡುತ್ತಿದೆ. ಹೊಸ ಚಿತ್ರದ ಹಾಡುಗಳನ್ನು ಕೂಡಾ ಒಳ್ಳೆಯ ಕ್ವಾಲಿಟಿ ಜೊತೆ ಕೇವಲ 5 ರೂಪಾಯಿಗೆ ವೀಕ್ಷಿಸಬಹುದಾಗಿದೆ. ಇದೂ ಕೂಡಾ ಚಿತ್ರನಿರ್ಮಾಪಕರಿಗೆ ಹೊಸದೊಂದು ಆದಾಯವಾಗಿ ಅವರು ತಮ್ಮ ಹೊಸಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಬಹುದಾಗಿದೆ.

ಈ ಸ್ಟ್ರೀಮಿಂಗ್ ಫ್ಲಾಟ್ ಫಾರ್ಮ್ ನಲ್ಲಿ ಮೊಟ್ಟಮೊದಲ ಸಿನಿಮಾ ಆಗಿ ಅಣ್ಣಾವ್ರ ಕಸ್ತೂರಿ ನಿವಾಸ ವರ್ಣರಂಜಿತವಾಗಿ ಮೂಡಿಬರಲಿದ್ದು ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಗೊಂಡ ಡಾ.ರಾಜ್ ಕುಮಾರ್ ರವರ ಮೊದಲ ಚಿತ್ರ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಈ ತಿಂಗಳ 20 ರಿಂದ ಈ ಸಿನಿಮಾ ಜನರಿಗೆ ಲಭ್ಯವಿದೆ. ವೀಕ್ಷಕರು ತಮ್ಮ ಮೊಬೈಲ್ ಗಳಲ್ಲಿ cinemanodi ಆಪ್ ಅನ್ನು ಡೌನ್ ಲೋಡ್ ಮಾಡಿಕೊಂಡು ಸರಾಗವಾಗಿ ವೀಕ್ಷಿಸಬಹುದು. ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಮುಂತಾದವುಗಳಲ್ಲಿ cinemanodi.in ವೆಬ್ ಸೈಟ್ ಮುಖಾಂತರ ವೀಕ್ಷಿಸಬಹುದು. ವಿಶೇಷವಾಗಿ Fire TV ಯಲ್ಲಿ ಸಿನಿಮಾನೋಡಿ ಆಪ್ ಡೌನ್ ಲೋಡ್ ಮಾಡಿಕೊಂಡು ವೀಕ್ಷಿಸಬಹುದು. ಇದರ ಜೊತೆಗೆ Apple ಫ್ಲಾಟ್ ಫಾರಂ ಗಳಲ್ಲಿ ಸಹ ಲಭ್ಯವಿದೆ.

ಕನ್ನಡಿಗರಿಂದಲೇ ತಯಾರಾದ ಕನ್ನಡಿಗರಿಗೋಸ್ಕರವೇ ಇರುವ ಈ ವೇದಿಕೆಯನ್ನು ಕನ್ನಡ ಸಿನಿಪ್ರೇಮಿಗಳು ತಮ್ಮ ನೆಚ್ಚಿನ ಅಣ್ಣಾವ್ರ ಸಿನಿಮಾ ಕಸ್ತೂರಿ ನಿವಾಸವನ್ನು ವೀಕ್ಷಿಸಿ ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಇರುವ ಹೊಸ ಮಾರುಕಟ್ಟೆಯನ್ನು ಬೆಂಬಲಿಸಬೇಕಾಗಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಶಕುಂತಲೆಯಾದಳು ಸಮಂತಾ!

Previous article

ಮುಂದುವರೆಯಲಿರುವ ಹೋರಾಟದ ಅ‍ಧ್ಯಾಯ!

Next article

You may also like

Comments

Leave a reply

Your email address will not be published.