ಅನಾರೋಗ್ಯದಿಂದ ಕಂಗಾಲಾಗಿದ್ದ ಹಿರಿಯ ನಟ ನಟರಾಜ್ ಅವರ ಬಗ್ಗೆ ಸಿನಿಬಜ಼್ ವರದಿಯೊಂದನ್ನು ಪ್ರಕಟಿಸಿತ್ತು. ಥಳುಕು ಬಳಿಕಿನಾಚೆಗೆ ನೊಂದ ಕಲಾವಿದರ ಸಂಕಷ್ಟಕ್ಕೂ ಧ್ವನಿಯಾಗುತ್ತಾ ಬಂದಿರೋ ಸಿನಿಬಜ಼್ ನ ಈ ವರದಿಗೆ ವ್ಯಾಪಕ ಪ್ರತಿಕ್ರಿಯೆಗಳು ಬಂದಿವೆ. ಈ ವರದಿಯನ್ನು ನೋಡಿಯೇ ನಟರಾಜ್ ಅವರತ್ತ ನೆರವು ನೀಡೋ ಮನಸುಗಳೂ ಧಾವಿಸಿ ಬರುತ್ತಿವೆ. ಈ ಕಾರಣದಿಂದಲೇ ಎಲ್ಲ ಮುಗಿದು ಹೋಯ್ತೆಂಬಂಥಾ ನಿರಾಸೆಯಿಂದ ನರಳುತ್ತಿದ್ದ ನಟರಾಜ್ ಬದುಕಲ್ಲಿ ಭರವಸೆಯ ಸೆಳೆಮಿಂಚೊಂದು ಸ್ಪಷ್ಟವಾಗಿಯೇ ಗೋಚರಿಸಿದೆ!
ಸಿನಿಬಜ಼್ ವರದಿ ನೋಡಿ ತಕ್ಷಣವೇ ಕಾರ್ಯೋನ್ಮುಖರಾದವರು ಕರ್ಷಣಂ ಖ್ಯಾತಿಯ ನಾಯಕ ನಟ ಧನಂಜಯ್ ಅತ್ರೆ. ಅವರು ಇಂದು ನಟರಾಜ್ ಅವರನ್ನು ಭೇಟಿಯಾಗಿದ್ದಾರೆ. ಸಾಅನಾರೋಗ್ಯದಿಂದ ಕಂಗಾಲಾಗಿದ್ದ ಹಿರಿಯ ನಟ ನಟರಾಜ್ ಅವರ ಬಗ್ಗೆ ಸಿನಿಬಜ಼್ ವರದಿಯೊಂದನ್ನು ಪ್ರಕಟಿಸಿತ್ತು. ಥಳುಕು ಬಳಿಕಿನಾಚೆಗೆ ನೊಂದ ಕಲಾವಿದರ ಸಂಕಷ್ಟಕ್ಕೂ ಧ್ವನಿಯಾಗುತ್ತಾ ಬಂದಿರೋ ಸಿನಿಬಜ಼್ ನ ಈ ವರದಿಗೆ ವ್ಯಾಪಕ ಪ್ರತಿಕ್ರಿಯೆಗಳು ಬಂದಿವೆ. ಈ ವರದಿಯನ್ನು ನೋಡಿಯೇ ನಟರಾಜ್ ಅವರತ್ತ ನೆರವು ನೀಡೋ ಮನಸುಗಳೂ ಧಾವಿಸಿ ಬರುತ್ತಿವೆ. ಈ ಕಾರಣದಿಂದಲೇ ಎಲ್ಲ ಮುಗಿದು ಹೋಯ್ತೆಂಬಂಥಾ ನಿರಾಸೆಯಿಂದ ನರಳುತ್ತಿದ್ದ ನಟರಾಜ್ ಬದುಕಲ್ಲಿ ಭರವಸೆಯ ಸೆಳೆಮಿಂಚೊಂದು ಸ್ಪಷ್ಟವಾಗಿಯೇ ಗೋಚರಿಸಿದೆ!
ಸಿನಿಬಜ಼್ ವರದಿ ನೋಡಿ ತಕ್ಷಣವೇ ಕಾರ್ಯೋನ್ಮುಖರಾದವರು ಕರ್ಷಣಂ ಖ್ಯಾತಿಯ ನಾಯಕ ನಟ ಧನಂಜಯ್ ಅತ್ರೆ. ಅವರು ಇಂದು ನಟರಾಜ್ ಅವರನ್ನು ಭೇಟಿಯಾಗಿದ್ದಾರೆ. ಸಾವಧಾನವಾಗಿ ಎಲ್ಲ ಮಾಹಿತಿಗಳನ್ನೂ ಪಡೆದುಕೊಂಡು ಭರವಸೆ ತುಂಬಿದ್ದಾರೆ. ಜೊತೆಗೆ ಹತ್ತು ಸಾವಿರ ರೂಪಾಯಿಗಳ ಧನ ಸಹಾಯವನ್ನೂ ಮಾಡಿದ್ದಾರೆ.
ಇದು ಧನಂಜಯ್ ಅತ್ರೆ ಅವರ ಮಾನವೀಯ ನಡೆ. ತಮ್ಮ ವ್ಯವಹಾರ, ಸಿನಿಮಾ ಮುಂತಾದ ಹಲವು ಒತ್ತಡಗಳ ನಡುವೆಯೂ ನೊಂದ ಕಲಾವಿದನ ನೆರವಿಗೆ ಧಾವಿಸಿದ ಅವರ ಮನಸ್ಥಿತಿ ನಿಜಕ್ಕೂ ಮೆಚ್ಚಿಕೊಳ್ಳುವಂಥಾದ್ದು. ನಟರಾಜ್ ಅವರನ್ನು ಭೇಟಿಯಾದ ಧನಂಜಯ್ ಅವರು ಕೇವಲ ಧನ ಸಹಾಯ ಮಾಡಿ ವಾಪಾಸಾಗಿಲ್ಲ. ಜೊತೆಯಾಗಿ ಕೂತು ಸಂತೈಸಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂಬಂತೆ ಧೈರ್ಯ ತುಂಬಿದ್ದಾರೆ. ತಾನು ಸಂಕಷ್ಟದಲ್ಲಿದ್ದರೂ ಚಿತ್ರರಂಗದ ಯಾರೊಬ್ಬರೂ ಬಂದು ಮಾತಾಡಿಸಿಲ್ಲ ಅನ್ನೋ ನಟರಾಜ್ ಅವರ ಕೊರಗನ್ನೂ ಧನಂಜಯ್ ಅತ್ರೆ ನೀಗಿಸಿದ್ದಾರೆ.
ಇನ್ನೂ ಒಂದಷ್ಟು ಮಂದಿ ನಟರಾಜ್ ಅವರಿಗೆ ನೆರವು ನೀಡಲು ಮುಂದಾಗಿದ್ದಾರೆ. ನಿರ್ದೇಶಕ ಜೋಗಿ ಪ್ರೇಮ್ ಕೂಡಾ ನಟರಾಜ್ ಅವರಿಗೆ ನೆರವು ನೀಡೋದಾಗಿ ಸಿನಿಬಜ಼್’ಗೆ ಸಂದೇಶ ರವಾನಿಸಿದ್ದಾರೆ. ಅನಾರೋಗ್ಯದಿಂದ ಹಾಸಿಗೆ ಹಿಡಿದು, ಸಾಲಗಾರರ ಕಾಟದಿಂದ ಬೇಸತ್ತಿದ್ದ ನಟರಾಜ್ ಅವರೀಗ ಕೊಂಚ ನಿರಾಳವಾದಂತಿದ್ದಾರೆ. ಯಾಕೆಂದರೆ ಅವರಿಗೀಗ ತನ್ನ ಸಂಕಟಕ್ಕೂ ಮಿಡಿಯುವ ಒಂದಷ್ಟು ಮನಸುಗಳಿವೆ ಎಂಬುದು ಮನದಟ್ಟಾಗಿದೆ. ಅಂಥಾದ್ದೊಂದು ಆಶಾವಾದ ಹುಟ್ಟಿಸಿದ್ದಕ್ಕೆ ಸಾಟಿಯಾದ ಆತ್ಮತೃಪ್ತಿ ಬೇರ್ಯಾವುದಿದೆ?ವಧಾನವಾಗಿ ಎಲ್ಲ ಮಾಹಿತಿಗಳನ್ನೂ ಪಡೆದುಕೊಂಡು ಭರವಸೆ ತುಂಬಿದ್ದಾರೆ. ಜೊತೆಗೆ ಹತ್ತು ಸಾವಿರ ರೂಪಾಯಿಗಳ ಧನ ಸಹಾಯವನ್ನೂ ಮಾಡಿದ್ದಾರೆ.
ಇದು ಧನಂಜಯ್ ಅತ್ರೆ ಅವರ ಮಾನವೀಯ ನಡೆ. ತಮ್ಮ ವ್ಯವಹಾರ, ಸಿನಿಮಾ ಮುಂತಾದ ಹಲವು ಒತ್ತಡಗಳ ನಡುವೆಯೂ ನೊಂದ ಕಲಾವಿದನ ನೆರವಿಗೆ ಧಾವಿಸಿದ ಅವರ ಮನಸ್ಥಿತಿ ನಿಜಕ್ಕೂ ಮೆಚ್ಚಿಕೊಳ್ಳುವಂಥಾದ್ದು. ನಟರಾಜ್ ಅವರನ್ನು ಭೇಟಿಯಾದ ಧನಂಜಯ್ ಅವರು ಕೇವಲ ಧನ ಸಹಾಯ ಮಾಡಿ ವಾಪಾಸಾಗಿಲ್ಲ. ಜೊತೆಯಾಗಿ ಕೂತು ಸಂತೈಸಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂಬಂತೆ ಧೈರ್ಯ ತುಂಬಿದ್ದಾರೆ. ತಾನು ಸಂಕಷ್ಟದಲ್ಲಿದ್ದರೂ ಚಿತ್ರರಂಗದ ಯಾರೊಬ್ಬರೂ ಬಂದು ಮಾತಾಡಿಸಿಲ್ಲ ಅನ್ನೋ ನಟರಾಜ್ ಅವರ ಕೊರಗನ್ನೂ ಧನಂಜಯ್ ಅತ್ರೆ ನೀಗಿಸಿದ್ದಾರೆ.
ಇನ್ನೂ ಒಂದಷ್ಟು ಮಂದಿ ನಟರಾಜ್ ಅವರಿಗೆ ನೆರವು ನೀಡಲು ಮುಂದಾಗಿದ್ದಾರೆ. ನಿರ್ದೇಶಕ ಜೋಗಿ ಪ್ರೇಮ್ ಕೂಡಾ ನಟರಾಜ್ ಅವರಿಗೆ ನೆರವು ನೀಡೋದಾಗಿ ಸಿನಿಬಜ಼್’ಗೆ ಸಂದೇಶ ರವಾನಿಸಿದ್ದಾರೆ. ಅನಾರೋಗ್ಯದಿಂದ ಹಾಸಿಗೆ ಹಿಡಿದು, ಸಾಲಗಾರರ ಕಾಟದಿಂದ ಬೇಸತ್ತಿದ್ದ ನಟರಾಜ್ ಅವರೀಗ ಕೊಂಚ ನಿರಾಳವಾದಂತಿದ್ದಾರೆ. ಯಾಕೆಂದರೆ ಅವರಿಗೀಗ ತನ್ನ ಸಂಕಟಕ್ಕೂ ಮಿಡಿಯುವ ಒಂದಷ್ಟು ಮನಸುಗಳಿವೆ ಎಂಬುದು ಮನದಟ್ಟಾಗಿದೆ. ಅಂಥಾದ್ದೊಂದು ಆಶಾವಾದ ಹುಟ್ಟಿಸಿದ್ದಕ್ಕೆ ಸಾಟಿಯಾದ ಆತ್ಮತೃಪ್ತಿ ಬೇರ್ಯಾವುದಿದೆ?
#
No Comment! Be the first one.