36 ಜನಪ್ರಿಯ ಕಾಮಿಡಿ ಕಲಾವಿದರು ನಟಿಸುತ್ತಿರುವ ಹೊಚ್ಚ ಹೊಸ ಸಿನಿಮಾ ಕಾಫಿ ಕಟ್ಟೆ. ಈ ಚಿತ್ರಕ್ಕೆ ನೃತ್ಯ ನಿರ್ದೇಶಕರಾಗಿದ್ದ ಕಪಿಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ರಾಘವೇಂದ್ರ ಅವರು ಬಂಡವಾಳ ಹೂಡುತ್ತಿದ್ದಾರೆ. ಇತ್ತೀಚಿಗೆ ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ.
ಮುಹೂರ್ತ ಸಮಾರಂಭದ ನಂತರ ಮಾತನಾಡಿದ ನಿರ್ದೇಶಕ ಕಪಿಲ್ “ಚಿತ್ರದ ಪ್ರತಿ ದೃಶ್ಯದಲ್ಲೂ ಸರಾಸರಿ 11 ಮಂದಿ ಕಾಮಿಡಿ ಕಲಾವಿದರು ನಟಿಸಿದ್ದಾರೆ. ಇದಕ್ಕೆ ಫಿಲ್ಟರ್ ಕಾಫಿ ಎಂದು ಹೆಸರಿಡಬೇಕೆಂದುಕೊಂಡಿದ್ದೆವು. ಕ್ಯಾಚಿ ಆಗಿರಲೆಂದು `ಕಾಫಿಕಟ್ಟೆ’ ಎಂಬ ಹೆಸರಿಟ್ಟಿದ್ದೇವೆ. 65ಕ್ಕೆ ಮೇಲ್ಪಟ್ಟವರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಕಾಮಿಡಿ ಧಾಟಿಯಲ್ಲಿ ಸಾಗುವ ಈ ಸಿನಿಮಾದಲ್ಲಿ ಸಂದೇಶವಿದೆ”. ಎಂದು ಹೇಳಿದರು. ಕಾಫಿಕಟ್ಟೆಗೆ ನಾಯಕನಾಗಿ ಆನಂದರೆಡ್ಡಿ ನಟಿಸುತ್ತಿದ್ದು ಶೃತಿ ನಾಯಕಿಯಾಗಿ ಜತೆಯಾಗಿದ್ದಾರೆ. ಉಳಿದಂತೆ ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್, ಉಮೇಶ್, ಮಿಮಿಕ್ರಿ ದಯಾನಂದ್, ರೇಖಾ ದಾಸ್, ಟೆನ್ನಿಸ್ ಕೃಷ್ಣ, ವೈಜಯಂತ್ ಬಿರಾದರ್, ಬ್ಯಾಂಕ್ ಜನಾರ್ಧನ್, ಮಿಮಿಕ್ರಿ ರಾಜಗೋಪಾಲ್, ಶಂಕರ್ಭಟ್, ಮೈಕೆಲ್ ಮಧು, ಶಂಖನಾದ ಅರವಿಂದ್ ಹೀಗೆ 35ಕ್ಕೂ ಹೆಚ್ಚು ಹಾಸ್ಯ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.