ಕೂಲಿ ನಂ 1 ರಿಮೇಕ್ ಚಿತ್ರದಲ್ಲಿ ಮೂಲ ಚಿತ್ರದ ಮೈ ತೊ ರಸ್ತೆ ಸೆ ಜಾ ರಹಾ ಥಾ ಹಾಡನ್ನು ರೀ ಕ್ರಿಯೇಟ್ ಮಾಡಲಾಗುತ್ತಿದೆ. 1995ರಲ್ಲಿ ಬಿಡುಗಡೆಯಾದ, ಡೇವಿಡ್‌ ಧವನ್‌ ನಿರ್ದೇಶನದ ‘ಕೂಲಿ ನಂ.1’ ರಿಮೇಕ್‌ ಚಿತ್ರದಲ್ಲಿ ವರುಣ್‌ ಧವನ್‌ ಹಾಗೂ ಸಾರಾ ಆಲಿ ಖಾನ್‌ ನಟಿಸಿದ್ದರು.

‘ಕೂಲಿ ನಂ.1’ ಚಿತ್ರದ ರಿಮೇಕ್‌ ಮಾಡುವ ಸುದ್ದಿ ಪ್ರಕಟವಾದಾಗಿನಿಂದ ಈ ಚಿತ್ರದ ಪ್ರಸಿದ್ಧ ಹಾಡು ‘ಮೈ ತೋ ರಸ್ತೆ…’ ಹಾಡು ಈ ಚಿತ್ರದಲ್ಲಿಯೂ ಇರಬಹುದೋ ಎಂಬ ಗೊಂದಲ ಅಭಿಮಾನಿಗಳಲ್ಲಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳೂ ಆಗಿತ್ತು. ಅಂತಹ ಸಂದೇಹಗಳಿಗೆ ಡೇವಿಡ್ ಉತ್ತರಿಸಿದ್ದು, “ಈ ಹಾಡನ್ನು ಖಂಡಿತ ಮರುಸೃಷ್ಟಿಸಲಾಗುವುದು. ಈ ಸಿನಿಮಾದಲ್ಲಿ ಬಹುಮುಖ್ಯ ಭಾಗವೇ ಅದು. ರಿಮೇಕ್‌ ಹಾಡಿನಲ್ಲಿ ವರುಣ್‌ ಹಾಗೂ ಸಾರಾ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ” ಎಂದು ಡೇವಿಡ್‌ ಹೇಳಿದ್ದರು. ಆಗಸ್ಟ್‌ 5 ರಂದು ಈ ರಿಮೇಕ್‌ ಚಿತ್ರದ ಮುಹೂರ್ತ ನಡೆಯಲಿದ್ದು, 2020ರ ವೇಳೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

CG ARUN

ಮತ್ತೊಮ್ಮೆ ಶುರುವಾಗಲಿದೆ ಕೌನ್ ಬನೇಗಾ ಕರೋಡ್ ಪತಿ!

Previous article

ಉಪ್ಪಿ ಹೇರ್ ಸ್ಟೈಲ್ ಕಾಪಿ ಮಾಡಿದ ಪಾಪ್ ಗಾಯಕಿ!

Next article

You may also like

Comments

Leave a reply

Your email address will not be published. Required fields are marked *