ದಿಶ ಎಂಟರ್ಟೈನ್ಮೆಂಟ್ಸ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಹರಿಪ್ರಿಯಾ ನಟನೆಯ ಇಪ್ಪತೈದನೇ ಚಿತ್ರ ಡಾಟರ್ ಆಫ್ ಪಾರ್ವತಮ್ಮ. ಬಿಡುಗಡೆಗೆ ತಯಾರಾಗಿರುವ ಈ ಚಿತ್ರಕ್ಕೀಗ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೆಟ್ ಸಿಕ್ಕಿದೆ.
ಹರಿಪ್ರಿಯಾ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ಇದುವರೆಗಿನ ಸಿನಿ ಕೆರಿಯರ್ನಲ್ಲೇ ಡಿಫರೆಂಟಾದ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರದ್ದು ಇನ್ವೇಸ್ಟಿಗೇಷನ್ ಆಫಿಸರ್ ಪಾತ್ರ. ಇಡೀ ಚಿತ್ರದ ತುಂಬಾ ಖಡಕ್ ಲುಕ್ಕಿನಲ್ಲೇ ಕಾಣಿಸಿಕೊಳ್ಳಲಿರೋ ಈ ಪಾತ್ರಕ್ಕೆ ಮತ್ತೊಂದು ಶೇಡ್ ಕೂಡಾ ಇದೆಯಂತೆ. ಇದರಲ್ಲಿ ಸುಮಲತಾ ಹರಿಪ್ರಿಯಾ ಅವರ ಅಮ್ಮನಾಗಿ ನಟಿಸಿದ್ದಾರೆ.
ಈ ಚಿತ್ರಕ್ಕಾಗಿ ಹರಿಪ್ರಿಯಾ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದರು. ಸಾಹಸ ಸನ್ನಿವೇಶಗಳೇ ಹೆಚ್ಚಾಗಿರೋದರಿಂದ ಇದನ್ನೂ ಕೂಡಾ ಪಟ್ಟು ಹಿಡಿದು ಕಲಿತೇ ಚಿತ್ರೀಕರಣಕ್ಕಿಳಿದಿದ್ದರು. ಇದು ಹರಿಪ್ರಿಯಾ ಪಾಲಿಗೆ ಪಕ್ಕಾ ಮಹತ್ವದ ಚಿತ್ರ ಅನ್ನೋದರಲ್ಲಿ ಸಂದೇಹವಿಲ್ಲ. ಈ ಹಿಂದೆ ಪವನ್ ಒಡೆಯರ್ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಶಂಕರ್ ಜೆ ಈ ಸಿನಿಮಾ ನಿರ್ದೇಶಕರು.
ಅರುಳು ಕೆ ಸೋಮಸುಂದರನ್ ಛಾಯಾಗ್ರಹಣ, ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ಸುರೇಶ್ ಆರ್ಮುಗಂ ಸಂಕಲನ ಈ ಚಿತ್ರಕ್ಕಿದೆ. ಇನ್ನುಳಿದಂತೆ ಪ್ರಭು ಮತ್ತು ಸೂರಜ್ ಗೌಡ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಕೆ ಎಂ ಶಶಿಧರ, ವಿಜಯಲಕ್ಷ್ಮಿ ಕೃಷ್ಣೇಗೌಡ, ಸಂದೀಪ್ ಶಿವಮೊಗ್ಗ ಮತ್ತು ಶ್ವೇತಾ ಮಧುಸೂಧನ್ ಬಂಡವಾಳ ಹೂಡಿದ್ದಾರೆ.
No Comment! Be the first one.