ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಡಾಲಿ ಧನಂಜಯ್ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾರೆ. ಈ ಮೂಲಕವೇ ಸೂರಿ ಮತ್ತು ಧನಂಜಯ್ ಕಾಂಬಿನೇಷನ್ ಮತ್ತೆ ಕಮಾಲ್ ಮಾಡೋ ಸ್ಪಷ್ಟ ಸೂಚನೆಯೂ ರವಾನೆಯಾಗಿದೆ. ಈ ನಡುವೆ ಧನಂಜಯ್ ಮಂಕಿ ಟೈಗರ್ಗಾಗಿ ಸಿಕ್ಸ್ ಪ್ಯಾಕ್ ಕಸರತ್ತನ್ನೂ ಮಾಡಲಾರಂಭಿಸಿದ್ದಾರೆ. ಈ ವಿಚಾರವನ್ನು ಧನಂಜಯ್ ಅವರೇ ತಮ್ಮ ಟ್ವಿಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಜಿಮ್ ನಲ್ಲಿ ವರ್ಕೌಟ್ ಮಾಡೋ ಸಂದರ್ಭದಲ್ಲಿ ತಮ್ಮ ಟ್ರೈನರ್ ಜೊತೆಗಿನ ಫೋಟೋವನ್ನು ಧನಂಜಯ್ ಅನಾವರಣಗೊಳಿಸಿದ್ದಾರೆ. ಹುರಿಗೊಳಿಸಿದ ಕಟ್ಟುಮಸ್ತಾದ ಡಾಲಿಯ ದೇಹಸಿರಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.
ಟಗರು ಚಿತ್ರದ ಡಾಲಿ ಎಂಬ ಪಾತ್ರ ನೆಗೆಟಿವ್ ಶೇಡ್ ಹೊಂದಿತ್ತು. ಆ ಪಾತ್ರದ ಮೂಲಕವೇ ಧನಂಜಯ್ ಪಡೆದುಕೊಂಡಿದ್ದ ಖ್ಯಾತಿ ಸಣ್ಣದ್ದೇನಲ್ಲ. ಅದುವರೆಗೂ ಹೀರೋ ಆಗಿ ನಟಿಸಿದ್ದರೂ ಕೂಡಾ ಧನಂಜಯ್ಗೆ ಇಂಥಾ ಖ್ಯಾತಿ ಸಿಕ್ಕಿರಲಿಲ್ಲ. ಇದರಿಂದ ಪ್ರೇರಿತರಾಗಿರೋ ಸೂರಿ ನೆಗೆಟಿವ್ ಶೇಡ್ ಹೊಂದಿರೋ ರಗಡ್ ಪಾತ್ರವೊಂದನ್ನು ಧನಂಜಯ್ಗಾಗಿ ಸೃಷ್ಟಿಸಿದ್ದಾರಂತೆ.ಬಅಂತೂ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿನ ಡಾಲಿಯ ಗೆಟಪ್ಪು ಜನರನ್ನು ಬೆಚ್ಚಿ ಬೀಳಿಸಲಿರೋದಂತೂ ಖಾತರಿ. ಅದಕ್ಕಾಗಿಯೇ ಧನಂಜಯ್ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
No Comment! Be the first one.