ದಬಾಂಗ್-೩ ತೆರೆಗೆ ಬರಲು ಸಿದ್ದವಾಗುತ್ತಿದೆ. ನಮ್ಮ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ವಿಲನ್ ಆಗಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ಕರ್ನಾಟಕದವರೇ ಆದ ಪ್ರಭುದೇವಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಸುದೀಪ್, ಸಲ್ಲು ಮತ್ತು ಪ್ರಭುದೇವಾ ಒಟ್ಟಿಗೇ ಇದ್ದ ಫೋಟೋಗಳು ಹರಿದಾಡುತ್ತಲೇ ಇವೆ.
ಇದೆಲ್ಲವನ್ನೂ ಮೀರಿಸುವ ಸುದ್ದಿಯೊಂದಿದೆ.
ದಬಾಂಗ್-೩ ಚಿತ್ರ ಏಕಕಾಲದಲ್ಲಿ ಕನ್ನಡದಲ್ಲೂ ಬಿಡುಗಡೆ ಆಗುತ್ತಿದೆ. ಕನ್ನಡದ ಪೋಸ್ಟರ್ ಕೂಡಾ ಈಗ ಬಿಡುಗಡೆಯಾಗಿದ್ದು, ಖುದ್ದು ಸಲ್ಮಾನ್ ಖಾನ್ ತಮ್ಮ ಫೇಸ್ ಬುಕ್ ಸ್ಟೇಟಸ್ನಲ್ಲಿ ಅದನ್ನು ಹಾಕಿಕೊಂಡಿದ್ದಾರೆ.

ಡಿಸೆಂಬರ್ ೨೦೧೯ರಲ್ಲಿ ಬಿಡುಗಡೆಯಾಗುತ್ತದೆ ಎಂದು ಆ ಪೋಸ್ಟರಿನಲ್ಲಿ ನಮೂದಿಸಲಾಗಿದ್ದು, ಡೇಟು ಅನೌನ್ಸ್ ಮಾಡಿಲ್ಲ. ಬದಲಿಗೆ, ಟೈಮು ನಂದು, ತಾರೀಖು ನಂದು ಎಂದು ಬರೆದುಕೊಂಡಿದ್ದಾರೆ.

ದಬಾಂಗ್-೩ ಚಿತ್ರವನ್ನು ಸ್ವತಃ ಸಲ್ಮಾನ್ ಖಾನ್ ನಿರ್ಮಿಸಿದ್ದಾರೆ. ಬಹುಕೋಟಿ ವೆಚ್ಛದಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಕಿಚ್ಚ ಹೊಸಾ ಲುಕ್ ಮತ್ತು ಖದರಿನಲ್ಲಿ ನಟಿಸಿದ್ದಾರಂತೆ. ಹೀರೋ ಸಲ್ಲು ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಎಷ್ಟು ಕುತೂಹಲವಿದೆಯೋ ಅದೇ ಮಟ್ಟಿಗೆ ಕಿಚ್ಚನ ಪಾತ್ರದ ಬಗೆಗೂ ಅಷ್ಟೇ ಕ್ಯೂರಿಯಾಸಿಟಿ ಬಿಲ್ಡ್ ಆಗಿದೆ.

ಅದೆಲ್ಲ, ಏನೇ ಆಗಲಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಸಲ್ಮಾನ್ ಖಾನ್ರಂಥಾ ಹೀರೋ ನಮ್ಮ ಕನ್ನಡದ ಪೋಸ್ಟರನ್ನು ತಮ್ಮ ಫೇಸ್ಬುಕ್ ಸ್ಟೇಟಸ್ಗೆ ಹಾಕಿಕೊಂಡಿರೋದು ನಿಜಕ್ಕೂ ಹೆಮ್ಮೆಯ ವಿಚಾರ!