ಕನ್ನಡ ಚಿತ್ರರಂಗದ ಕ್ರೈಮ್ ಥ್ರಿಲ್ಲರ್ ಹಿಸ್ಟರಿಯಲ್ಲಿ ದಂಡುಪಾಳ್ಯ ಸಿರೀಸ್ ಮಹತ್ವದ ಸ್ಥಾನವನ್ನು ಗಳಿಸಿದೆ. ಈಗಾಗಲೇ ಮೂರು ಸರಣಿಗಳ ದಂಡುಪಾಳ್ಯ ರಿಲೀಸ್ ಆಗಿದ್ದು, ಸದ್ಯ ದಂಡುಪಾಳ್ಯ 4 ರಿಲೀಸ್ ಗೆ ರೆಡಿಯಾಗಿದೆ. ಸದ್ಯ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ.
ಈ ಚಿತ್ರವನ್ನು ಕೆ.ಟಿ ನಾಯಕ್ ನಿರ್ದೇಶನ ಮಾಡಿದ್ದು, ಸುಮನಾ ರಂಗನಾಥ್ ಹಾಗೂ ಮುಮೈತ್ ಖಾನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ದಂಡುಪಾಳ್ಯ ಎಂಬ ಹೆಸರನ್ನು ಹೊಂದಿದ್ದರೂ ಸಹ ಹಿಂದಿನ ದಂಡುಪಾಳ್ಯಕ್ಕೂ ಈಗಿನ ದಂಡುಪಾಳ್ಯಕ್ಕೂ ಯಾವುದೇ ಲಿಂಕ್ ಇರುವುದಿಲ್ಲವಂತೆ. ಇದು ಫ್ರೆಶ್ಶಾದ ಕಥಾ ಹಂದರ ಜತೆಗೆ ಕೊಲೆ, ಕಳ್ಳತನ, ದರೋಡೆ ಬೇಸ್ಡ್ ಸಿನಿಮಾವಾಗಿರಲಿದೆ. ಈ ಚಿತ್ರವನ್ನು ವೆಂಕಟ್ ಫಿಲ್ಮ್ ನವರು ನಿರ್ಮಿಸಿದ್ದಾರೆ.
No Comment! Be the first one.