ವೆಂಕಟ್ ಮೂವೀಸ್ ಲಾಂಛನದಡಿ ನಿರ್ಮಾಣಗೊಂಡಿರೋ ದಂಡುಪಾಳ್ಯ 4 ಚಿತ್ರದ ಐಟಂ ಸಾಂಗೊಂದು ಬಿಡುಗಡೆಯಾಗಿದೆ. ಮುಮೈತ್ ಖಾನ್ ಮಾದಕವಾಗಿ ಕುಣಿದಿರೋ, ಅದಕ್ಕೆ ತಕ್ಕುದಾದ ಸಂಗೀತ ಮತ್ತು ಸಾಹಿತ್ಯವಿರೋ ಈ ಹಾಡು ಪಡ್ಡೆಗಳನ್ನು ಹುಚ್ಚೆಬ್ಬಿಸುವಂತೆಯೂ ಮೂಡಿ ಬಂದಿದೆ. ಇದೀಗ ಕನ್ನಡವೂ ಸೇರಿದಂತೆ ನಾಲಕ್ಕು ಭಾಷೆಗಳಲ್ಲಿ ಈ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಈ ಮೂಲಕ ದಂಡುಪಾಳ್ಯಂ ಚಿತ್ರ ಪರಭಾಷೆಗಳಲ್ಲಿಯೂ ಅಲೆಯೆಬ್ಬಿಸಿದೆ.
ಸ್ಟೆಪ್ಪು ಹೊಡಿ ಸ್ಟೆಪ್ಪು ಹೊಡಿ ಟಪ್ಪಾಂಗುಚ್ಚಿ ಸ್ಟೆಪ್ಪು ಹೊಡಿ ಎಂಬ ಇಡೀ ಹಾಡನ್ನು ಮಾದಕವಾಗಿಯೇ ಅಣಿಗೊಳಿಸಿರೋ ಚಿತ್ರತಂಡ, ಈ ಮೂಲಕವೇ ಮತ್ತಷ್ಟು ಪ್ರೇಕ್ಷಕರನ್ನು ಸೆಳೆದುಕೊಳ್ಳೋದರಲ್ಲಿ ಗೆದ್ದಿದೆ. ಮುಮೈತ್ ಖಾನ್ ಮಾದಕವಾಗಿ ಕುಣಿದಿರೋ ಈ ಹಾಡಿನ ಲಿರಿಕಲ್ ವೀಡಿಯೋ ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿಯೂ ಬಿಡುಗಡೆಯಾಗಿದೆ. ಅಷ್ಟೂ ಭಾಷೆಗಳಲ್ಲಿ ಬಹುಬೇಗನೆ ಅತಿ ಹೆಚ್ಚು ವೀಕ್ಷಕರನ್ನು ಪಡೆಯುವ ಮೂಲಕ ಟ್ರೆಂಡಿಂಗ್ನಲ್ಲಿದೆ.
ಈ ಹಾಡನ್ನು ನಿರ್ಮಾಪಕರಾದ ವೆಂಕಟ್ ಅವರೇ ಬರೆದಿದ್ದಾರೆ. ಆನಂದ್ ರಾಜ್ ವಿಕ್ರಂ ಸಂಗೀತ ನೀಡಿದ್ದಾರೆ. ಕೆ ಟಿ ನಾಯಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ವರೆಗೆ ಮೂರು ಸರಣಿಯ ಡಂಡುಪಾಳ್ಯ ಚಿತ್ರಣ ಮೂಡಿ ಬಂದಿದೆ. ಆದರೆ ದಂಡುಪಾಳ್ಯಂ ಚಿತ್ರದಲ್ಲಿ ತಾರಾಗಣವೂ ಸೇರಿದಂತೆ ಎಲ್ಲವೂ ಬದಲಾಗಿದೆ. ಒಟಾರೆ ಚಿತ್ರದ ನಿಜವಾದ ಕಸುವೇನೆಂಬುದು ಈ ರಿರಿಕಲ್ ವೀಡಿಯೋ ಸೃಷ್ಟಿಸಿರೋ ಕ್ರೇಜ್ನ ಮೂಲಕವೇ ಅನಾವರಣಗೊಂಡಿದೆ.
ಈ ಬಾರಿ ದಂಡುಪಾಳ್ಯಂ 4 ಚಿತ್ರದ ಪ್ರಮುಖ ಆಕರ್ಷಣೆ ಸುಮನ್ ರಂಗನಾಥ್. ಅವರಿಲ್ಲಿ ಇಮೇಜಿನ ಹಂಗಿಲ್ಲದೆ ಡಿಫರೆಂಟಾದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇದುವರೆಗೂ ಗ್ಲಾಮರ್ ಪಾತ್ರಗಳಲ್ಲಿಯೇ ಮಿಂಚುತ್ತಾ ಬಂದಿರೋ ಅವರು ದಂಡುಪಾಳ್ಯ ಗ್ಯಾಂಗಿನ ಮಹಿಳೆಯಾಗಿ ನಟಿಸಿದ್ದಾರೆ. ಈ ಕಾರಣದಿಂದಲೂ ದಂಡುಪಾಳ್ಯಂ ೪ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಮೊಳೆತುಕೊಂಡಿದೆ.
ಕನ್ನಡ ಚಿತ್ರಗಳನ್ನು ಪರಭಾಷಾ ನೆಲದಲ್ಲಿಯೂ ಮಿಂಚುವಂತೆ ಮಾಡಬೇಕೆಂಬ ಕನಸು ಹೊಂದಿರುವವರು ನಿರ್ಮಾಪಕ ವೆಂಕಟ್. ಅದರಲ್ಲಿ ಅವರು ಈ ಹಿಂದೆಯೂ ಯಶ ಕಂಡಿದ್ದಾರೆ. ಅದರ ಭಾಗವಾಗಿಯೇ ಇದೀಗ ಈ ಚಿತ್ರದ ಲಿರಿಕಲ್ ವೀಡಿಯೋ ಪರಭಾಷೆಗಳಲ್ಲಿಯೂ ಸದ್ದು ಮಾಡುತ್ತಿದೆ.
ಕೆ.ಟಿ. ನಾಯಕ್ ನಿರ್ದೇಶನ ಮಾಡಿರೋ ಈ ಚಿತ್ರಕ್ಕೆ ಆರ್. ಗಿರಿ ಕ್ಯಾಮರಾ, ಬಾಬು ಎ ಶ್ರೀವತ್ಸ, ಪ್ರೀತಿ ಮೋಹನ್ ಸಂಕಲನವಿದೆ. ಸುಮನ್ ರಂಗನಾಥ್, ಮುಮೈತ್ ಖಾನ್, ಬ್ಯಾನರ್ಜಿ, ರಾಕ್ ಲೈನ್ ಸುಧಾಕರ್, ಸಂಜೀವ್ ಕುಮಾರ್, ಅರುಣ್ ಬಚ್ಚನ್, ಬುಲೆಟ್ ಸೋಮು, ವಿಠ್ಠಲ್ ರಂಗಾಯಣ, ಜೀವಾ ಸೈಮನ್, ರಿಚ್ಚಾ ಶಾಸ್ತ್ರಿ, ಸ್ನೇಹಾ ಮುಂತಾದವರ ತಾರಾಗಣವಿದೆ. ನಿರ್ಮಾಪಕ ವೆಂಕಟ್ ಅವರು ಕೂಡಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರೋದು ವಿಶೇಷ.
#
No Comment! Be the first one.