ರಜನಿಕಾಂತ್ ಪೊಲೀಸ್ ಅಧಿಕಾರಿಯಾಗಿ ದರ್ಬಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಎ.ಆರ್. ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಈಗಾಗಲೇ ದರ್ಬಾರ್ ಸಿನಿಮಾದ ಶೂಟಿಂಗ್ ಶುರುವಾಗಿದ್ದು, ಮುಂಬೈನಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ. ಬಾಲಿವುಡ್ ನ ಪ್ರತೇಕ್ ಬಬ್ಬರ್ ರಜನಿಕಾಂತ್ ಗೆ ಸದ್ಯ ಎದುರಾಳಿಯಾಗಿ ನಟಿಸುತ್ತಿದ್ದಾರೆ. ಸದ್ಯದ ಸುದ್ದಿ ಏನಂದ್ರೆ ಮಲಯಾಲಂ ನ ಪ್ರತಿಭೆ ಚೆಂಬನ್ ವಿಂದೋ ಜೋಸ್ ಮತ್ತೊಬ್ಬ ವಿಲನ್ ಆಗಿ ದರ್ಬಾರ್ ನಲ್ಲಿ ನಟಿಸಲಿದ್ದಾರಂತೆ. ಈಗಾಗಲೇ ತಮಿಳಿನ ಗೋಲಿ ಸೋಡಾ 2ನಲ್ಲಿ ಟೆರರ್ ಲುಕ್ ನಲ್ಲಿ ಚೆಂಬನ್ ವಿಂದೋ ಕಾಣಿಸಿಕೊಂಡಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ನಯನತಾರಾ ದರ್ಬಾರ್ ನಲ್ಲಿ ಲೀಡ್ ರೋಲ್ ನಲ್ಲಿ ಅಭಿನಯಿಸುತ್ತಿದ್ದಾರೆ. ಇವರಿಗೆ ಪ್ರತೇಕ್ ಬಬ್ಬರ್, ಯೋಗಿ ಬಾಬು, ನಿವೇದಿತಾ ಥಾಮಸ್ ಪ್ರಮುಖ ತಾರಾಂಗಣದಲ್ಲಿದ್ದಾರೆ. ದರ್ಬಾರ್ ಗೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಮೊದಲು ರಜನಿಯ ಪೆಟ್ಟಾ ಸಿನಿಮಾಕ್ಕೂ ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿದ್ದರು.
No Comment! Be the first one.