ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ದರ್ಬಾರ್’ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಸದ್ಯ ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ತಲೈವಾ ವಿರುದ್ಧ ಖ್ಯಾತ ನಟ ರಾಜ್ ಬಬ್ಬರ್ ಪುತ್ರ ಪ್ರತೀಕ್ ಬಬ್ಬರ್ ಅಖಾಡಕ್ಕೆ ಇಳಿದಿದ್ದಾರೆ. ‘ದರ್ಬಾರ್’ ಚಿತ್ರಕ್ಕೆ ಖಳ ನಟನಾಗಿ ಪ್ರತೀಕ್ ಬಬ್ಬರ್ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಪ್ರತೀಕ್ ಸೂಪರ್ ಸ್ಟಾರ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.
ರಜನಿಕಾಂತ್ ಜೊತೆ ತೆರೆಹಂಚಿಕೊಳ್ಳಬೇಕು ಎನ್ನುವುದು ಬಹುತೇಕ ಕಲಾವಿದರ ವರ್ಷಗಳ ಕನಸಾಗಿರುತ್ತದೆ. ಅಂತಹದ್ರಲ್ಲಿ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಅವಕಾಶ ಹರಸಿ ಬಂದಿರುವುದು ಪ್ರತೀಕ್ ಶ್ರಮಕ್ಕೆ ಸಿಕ್ಕ ಫಲವಾಗಿದೆ. ಬಾಲಿವುಡ್ ನಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಪ್ರತೀಕ್ ‘ಭಾಗಿ-2’ ಚಿತ್ರದ ಖಳನಾಯಕನ ಪಾತ್ರದ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದರು. ಆ ಪಾತ್ರವನ್ನೆ ನೋಡಿ ಇಂಪ್ರೆಸ್ ಆಗಿದ್ದ ನಿರ್ದೇಶಕ ಮುರುಗದಾಸ್ ‘ದರ್ಬಾರ್’ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ ರಜನಿಕಾಂತ್ ಜೊತೆ ತೆರೆಹಂಚಿಕೊಳ್ಳುತ್ತಿರುವ ಪ್ರತೀಕ್ ಬಬ್ಬರ್ ಪಾತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ.
No Comment! Be the first one.