ರಜನಿಕಾಂತ್ ಮತ್ತು ನಯನಾತಾರ ನಟಿಸುತ್ತಿರುವ ಹೊಸ ಸಿನಿಮಾ ದರ್ಬಾರ್. ಈಗಾಗಲೇ ಮೊದಲನೇ ಹಂತದ ಶೂಟಿಂಗ್ ಮುಗಿಸಿಕೊಂಡು ಎರಡನೇ ಹಂತದ ಶೂಟಿಂಗ್ ಗೆ ರೆಡಿಯಾಗಿರುವ ಚಿತ್ರತಂಡ ಲೇಟೆಸ್ಟ್ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇದೆ. ದರ್ಬಾರ್ ಸಿನಿಮಾವನ್ನು ಎ.ಆರ್. ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ.

ಸದ್ಯದ ಸುದ್ದಿ ಏನಂದ್ರೆ ಶೂಟಿಂಗ್ ನಲ್ಲಿ ನಯನತಾರ ಕೊಡುತ್ತಿರುವ ಟಾರ್ಚರ್ ಗೆ ರಜನಿ ಬೇಸತ್ತಿದ್ದಾರಂತೆ. ನೋಡೋವರೆಗೂ ನೋಡಿ ರಜನಿ ನಯನಾತಾರಾಗೆ ವಾರ್ನಿಂಗ್ ಸಹ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಆಗಿದ್ದೇನಂದ್ರೆ ನಯನಾತಾರ ಮತ್ತು ನಿರ್ದೇಶಕ ವಿಘ್ನೇಶ್ ಅವರ ಲವ್ವಿ ಡವ್ವಿ ಈಗಾಗಲೇ ಕಾಲಿವುಡ್ ನಲ್ಲಿ ಮನೆ ಮಾತಾಗಿದೆ. ತನ್ನ ಪ್ರಿಯಕರನ ಕುರಿತಾಗಿ ನಯನತಾರ ರಜನಿಗೆ ಹೇಳುತ್ತಿದ್ದರಂತೆ. ಅದೇ ಸಂದರ್ಭದಲ್ಲಿ ನಿಮಗಾಗಿ ವಿಘ್ನೇಶ್ ಒಂದು ಕಥೆಯನ್ನು ಮಾಡಿಕೊಂಡಿದ್ದಾರೆ. ನೀವು ನಟಿಸಬೇಕು ಎಂದು ಕೇಳಿದ್ದರಂತೆ. ಆಗ ನೋಡೋಣ, ಮಾಡೋಣ ಎಂದೂ ರಜನಿಕಾಂತ್ ಹೇಳಿದ್ದರಂತೆ. ಆದರೆ ದರ್ಬಾರ್ ಸೆಟ್ ಶೂಟಿಂಗ್ ನಲ್ಲಿ ಪದೇ ಪದೇ ಇದೇ ವಿಚಾರವನ್ನೇ ಕೆದಕುತ್ತಿದ್ದಾಗ ರಜನಿ ಈ ವಿಚಾರವನ್ನು ಮಾತನಾಡದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ವಸಿಷ್ಠ ಸಿಂಹ ಜತೆಯಾದ್ರೂ ಪಂಚತಂತ್ರ ಸುಂದರಿ!

Previous article

ತುಂಡುಗೆಯ ನೃತ್ಯದಿಂದ ಗಮನ ಸೆಳೆದ ಜಾಹ್ನವಿ ಕಪೂರ್!

Next article

You may also like

Comments

Leave a reply

Your email address will not be published.