“ಒಬ್ಬ ಸೆಲಿಬ್ರಿಟಿಯಿಂದ ಇನ್ನೊಬ್ಬ ಸೆಲಿಬ್ರಿಟಿಗೆ ಓಪನ್ ಚಾಲೆಂಜ್. ಮಧ್ಯಾಹ್ನ ಫೇಸ್ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ. ನಿಮ್ಮ ದಾಸ ದರ್ಶನ್’ – ಹೀಗೆಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿದ್ದಾರೆ.
ಇಂದು ದರ್ಶನ್ ಅವರೇ ಮತ್ತೊಬ್ಬ ಸೆಲೆಬ್ರಿಟಿಯ ಮೇಲೆ ಓಪನ್ ಚಾಲೆಂಜ್ ಹಾಕ್ತಾರಾ? ಅಥವಾ ಮತ್ಯಾರೋ ಸೆಲೆಬ್ರಿಟಿಯ ಮೇಲೆ ಇನ್ನೊಬ್ಬರ ಚಾಲೆಂಜಿನ ಬಗ್ಗೆ ಹೇಳುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ, ಜಗತ್ತಿನಲ್ಲಿರುವ ದರ್ಶನ್ ಅಭಿಮಾನಿಗಳು, ಕರ್ನಾಟಕದ ಮೀಡಿಯಾ ಇವತ್ತಿನ ಮಧ್ಯಾಹ್ನಕ್ಕಾಗಿ ಕಾತರಿಸುವಂತಾಗಿದೆ.


ಮುನಿರತ್ನರ ಕುರುಕ್ಷೇತ್ರದಲ್ಲಿ ಒಳಗೊಳಗೇ ಕಾಳಗ ನಡೆಯುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಅದರಲ್ಲೂ ಇತ್ತೀಚೆಗೆ ನಡೆದ ಎಲೆಕ್ಷನ್ನು ಕುರುಕ್ಷೇತ್ರವನ್ನು ನಿಜಕ್ಕೂ ರಣರಂಗವನ್ನಾಗಿ ಮಾರ್ಪಡಿಸಿತ್ತು. ಆರಂಭದಲ್ಲಿ ದರ್ಶನ್ ಒಬ್ಬರೇ ಹೀರೋ ಅನ್ನುವಂತಿದ್ದ ಸಿನಿಮಾದಲ್ಲಿ ಕನ್ನಡದ ಸಾಕಷ್ಟು ಹಿರಿಯ ನಾಯಕನಟರು ಸೇರಿಕೊಂಡರು. ಅದರ ಬಗ್ಗೆ ದರ್ಶನ್ ಅವರಿಗಾಗಲಿ, ಅವರ ಅಭಿಮಾನಿಗಳಿಗಾಗಲಿ ಯಾವ ತಕರಾರೂ ಇದ್ದಂತಿಲ್ಲ. ಆದರೆ ಈ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ನಟಿಸುತ್ತಾರೆ ಅನ್ನುತ್ತಿಂದ್ದಂತೇ ಥರಹೇವಾರಿ ಗಾಳಿಸುದ್ದಿಗಳು ಓಡಾಡಲಾರಂಭಿಸಿದವು. ಅದಕ್ಕೆ ತಕ್ಕಂತಾ ಪರಿಸ್ಥಿತಿಯೂ ಕ್ರಿಯೇಟ್ ಆಗುತ್ತಾ ಹೋಯಿತು. ದರ್ಶನ್ ಅವರಿಗೆ ಸರಿಗಟ್ಟುವಂತಾ  ನಿಖಿಲ್ ಪೋಸ್ಟರು, ಟೀಸರುಗಳು ಬಿಡುಗಡೆಯಾದವು. ‘ನಮ್ಮ ಸಿನಿಮಾದ ನಾಯಕನಟ ನಿಖಿಲ್ ಅಂತಾ ಒಮ್ಮೆ ಮುನಿರತ್ನ ಹೇಳಿದ್ದು ದೊಡ್ಡ ಕಾಂಟ್ರವರ್ಸಿಗೆ ಕಾರಣವಾಯಿತು. ಹೀಗೆ ದಿನದಿಂದ ದಿನಕ್ಕೆ ವಿವಾದಗಳು ಬೆಳೆಯುತ್ತಾ ಬಂದಿದೆ.
ನಿಖಿಲ್ ಕೂಡಾ ಪ್ರತಿಭಾವಂತರಿರಬಹುದು. ಹಾಲಿ ಮುಖ್ಯಮಂತ್ರಿಯ ಮಗನಿರಬಹುದು. ನಿಖಿಲ್ ತಾವೊಬ್ಬರೇ ಹೀರೋ ಆಗಿರುವ ಸಿನಿಮಾಗಳಲ್ಲಿ ಎಷ್ಟೇ ಅಬ್ಬರಿಸಿದರೂ ಯಾರೂ ಪ್ರಶ್ನಿಸುವುದಿಲ್ಲ. ಆದರೆ ದರ್ಶನ್ ರಂಥಾ ಸೂಪರ್ ಸ್ಟಾರ್ ಸಿನಿಮಾದಲ್ಲಿ ಭಾಗವಹಿಸಿದಾಗ ತಮ್ಮೊಬ್ಬರನ್ನು ಹೈಲೇಟ್ ಮಾಡಿಸಿಕೊಂಡಿದ್ದು ತಪ್ಪೇ. ಒಂದು ವೇಳೆ ಆ ಕೆಲಸವನ್ನು ಮುನಿರತ್ನ ಅವರೇ ಮಾಡಿದ್ದರೂ ಯಾರೂ ಅದನ್ನು ಒಪ್ಪಲಾರರು. ಯಾಕೆಂದರೆ ದರ್ಶನ್ ಅವರನ್ನು ಜನ ಬೇರೆಯದ್ದೇ ಸ್ಥಾನದಲ್ಲಿ ಕೂರಿಸಿದ್ದಾರೆ.  ನಾಳೆ ಜನ ಸಿನಿಮಾಗೆ ಬರೋದಾದರೂ ಅಲ್ಲೂ ಕೂಡಾ ಅವರೇ ಮುಖ್ಯವಾಗುತ್ತಾರೆ. ಮುನಿರತ್ನ ಅನ್ನೋ ಹೆಸರಿಗಾಗಲಿ, ಮತ್ತೊಬ್ಬರಿಗಾಗಲಿ ಯಾರು ಕಾತರಿಸೋದಿಲ್ಲ.

ಹೀಗಿರುವಾಗ ಯಾವ ಕಾರಣಕ್ಕೆ ಮುನಿರತ್ನ ದರ್ಶನ್ ಅಭಿಮಾನಿಗಳನ್ನು ಎದುರು ಹಾಕಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಸದ್ಯದ ವಿಚಾರಕ್ಕೆ ಬರೋದಾದರೆ, ಇದೇ ತಿಂಗಳ ಏಳಕ್ಕೆ ಬಿಡುಗಡೆಯಾಗಲಿರುವ ಕುರುಕ್ಷೇತ್ರದ ಆಡಿಯೋ ರಿಲೀಸ್ ಪಾಸ್‌ಗಳ ಮೇಲೆ ದರ್ಶನ್ ಅವರ ಫೋಟೋ ಇಲ್ಲ ಅನ್ನೋದು ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಆದರೆ ಸ್ವತಃ ದರ್ಶನ್ ಟ್ವೀಟ್ ಮಾಡಿ “ಕುರುಕ್ಷೇತ್ರ ಎನ್ನುವುದು ಬಹುತಾರಾಗಣದ ಚಿತ್ರ. ಎಲ್ಲರನ್ನು ಸಮಾನಕರವಾಗಿ ಕಾಣಬೇಕೆಂಬ ಸದುದ್ದೇಶದಿಂದ ಯಾವ ತಾರೆಯ ಫೋಟೋಗಳನ್ನು ಪಾಸ್ ಗಳ ಮೇಲೆ ಪ್ರಿಂಟ್ ಮಾಡಿಲ್ಲ. ಇಂತಹ ಚಿಕ್ಕ ವಿಷಯಗಳಿಗೆಲ್ಲ ಬೇಸರವನ್ನು ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಚಿತ್ರದಲ್ಲಿ ಎಲ್ಲರಿಗೂ ತಕ್ಕ ನ್ಯಾಯವನ್ನು ಒದಗಿಸಲಾಗಿದೆ. ಆರಾಮಾಗಿ ಆಡಿಯೋ ಬಿಡುಗಡೆಯಲ್ಲಿ ಪಾಲ್ಗೊಳ್ಳಿ. ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಹೀಗೆ ಇರಲಿ” ಎಂದು ಸಮಾಧಾನಿಸಿದ್ದಾರೆ.
ಯಾವ ಹೀರೋ ತಾನೆ ತನ್ನ ಮನಸ್ಸಿನಲ್ಲಿ ಎಷ್ಟೇ ಬೇಸರವಿದ್ದರೂ ಅಭಿಮಾನಿಗಳನ್ನು ಸಮಾಧಾನಿಸುವ ಪ್ರಯತ್ನ ಮಾಡುತ್ತಾರೆ? ಈ ವಿಚಾರದಲ್ಲಿ ದರ್ಶನ್ ಅವರ ದೊಡ್ಡಗುಣವನ್ನು ಮೆಚ್ಚಲೇಬೇಕು..
ಇವೆಲ್ಲದರ ನಡುವೆ ಇಂದು ಮದ್ಯಾಹ್ನ ಫೇಸ್ ಬುಕ್ ಲೈವ್ ಬರುವುದಾಗಿ ದರ್ಶನ್ ತಿಳಿಸಿದ್ದಾರೆ. ಅಲ್ಲಿ ಯಾವ ವಿಚಾರ ಪ್ರಸ್ತಾಪಿಸುತ್ತಾರೆ? ಯಾವ ಸೆಲೆಬ್ರೆಟಿಯ ವಿರುದ್ಧ ಚಾಲೆಂಜ್ ಹೊರಬೀಳಲಿದೆ ಅನ್ನೋದನ್ನು ಕೆಲವೇ ಹೊತ್ತು ಕಾದು ನೋಡಬೇಕಿದೆ…!

CG ARUN

ಯುವರತ್ನ ಬಳಗಕ್ಕೆ ಪ್ರಕಾಶ್ ರಾಜ್!

Previous article

ಒನ್ ವೇಯಲ್ಲಿ ಗುಡ್ಡೆ ಇಟ್ಟ ಲಡ್ಡು ನಾಗ!

Next article

You may also like

Comments

Leave a reply

Your email address will not be published. Required fields are marked *