ಕರ್ನಾಟದಲ್ಲಿ ಅತೀ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಅಭಿಮಾನಿಗಳ ಪಾಲಿಗೆ ಅವರ ಪ್ರತೀ ಸಿನಿಮಾಗಳೂ ಹಬ್ಬವೇ. ಆದರೆ ದರ್ಶನ್ ಹುಟ್ಟುಹಬ್ಬ ಅಂದರೆ ಸಂಭ್ರಮ ಮುಗಿಲು ಮುಟ್ಟಿರುತ್ತೆ. ಇದಕ್ಕೆ ಎಲ್ಲರೂ ತಿಂಗಳಿಗೆ ಮುಂಚಿತವಾಗಿಯೇ ರೆಡಿಯಾಗುತ್ತಾ ಅದನ್ನೊಂದು ಉತ್ಸವದಂತೆಯೇ ನಡೆಸೋ ಪರಿಪಾಠ ನಡೆದುಕೊಂಡು ಬಂದಿದೆ.
ಈ ಬಾರಿಯೂ ದರ್ಶನ್ ಬರ್ತಡೆಗೆ ಇನ್ನೂ ತಿಂಗಳಿರುವಾಗಲೇ ದರ್ಶನ್ ಪರ್ವ ಸುಲ್ತಾನ್ ಸಂಭ್ರಮ ಎಂಬ ಶೀರ್ಷಿಕೆಯಡಿಯಲ್ಲಿ ಅಭಿಮಾನಿಗಳೆಲ್ಲ ದರ್ಶನ್ ಹುಟ್ಟುಹಬ್ಬಕ್ಕೆ ರೆಡಿಯಾಗಿದ್ದಾರೆ.ಈ ಮೂಲಕ ಫೆಬ್ರವರಿ ಹದಿನಾರರಂದು ನಡೆಯಲಿರೋ ದರ್ಶನ್ ಹುಟ್ಟುಹಬ್ಬದ ಆಚರಣೆಗೆ ಅಭಿಮಾನಿಗಳೆಲ್ಲ ಎಂದಿನ ಉತ್ಸಾಹದಿಂದ ಅಣಿಗೊಳ್ಳುತ್ತಿದ್ದಾರೆ. ಕರ್ನಾಟಕದಾಧ್ಯಂತ ಇರೋ ಅಭಿಮಾನಿಗಳೆಲ್ಲ ಒಂದಾಗಿ ಸುಲ್ತಾನ್ ಸಂಭ್ರಮ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ದರ್ಶನ್ ಹುಟ್ಟುಹಬ್ಬ ಅಂದ್ರೆ ಕೇವಲ ಸಂಭ್ರಮಾಚರಣೆಗೆ ಮಾತ್ರವೇ ಸೀಮಿತವಾಗಿಲ್ಲ. ಹಲವಾರು ಸಾಮಾಜಿಕ ಕೆಲಸ ಕಾರ್ಯಗಳೂ ನಡೆಯುತ್ತವೆ. ಅಂಥವುಗಳಿಗೂ ಕೂಡಾ ಅಭಿಮಾನಿ ಪಡೆ ರೂಪುರೇಷೆ ಸಿದ್ಧಪಡಿಸಿಕೊಂಡಿದೆ.
ಆದರೆ ಅಭಿಮಾನಿಗಳಲ್ಲಿ ಸಣ್ಣ ಆತಂಕವೂ ಇರೋದು ಸುಳ್ಳಲ್ಲ. ಈ ಬಾರಿ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರಾ ಇಲ್ಲವಾ ಎಂಬುದೇ ಇನ್ನೂ ಪಕ್ಕಾ ಆಗಿಲ್ಲ. ಯಾಕೆಂದರೆ ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾದದ್ದರಿಂದ ಈ ಬಾರಿ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳೋದು ಡೌಟು ಎಂಬ ಮಾತೂ ಕೇಳಿ ಬರ್ತಿದೆ. ಆದರೆ ಅಭಿಮಾನಿಗಳು ಮಾತ್ರ ವರ್ಷಕ್ಕೆ ಒಂದು ಸಲ ಹುಟ್ಟುಹಬ್ಬದ ನೆಪದಲ್ಲಿ ಸಿಗುವ ದರ್ಶನ್ ಭೇಟಿಯಾಗಿ ಕಾದು ಕೂತಿದ್ದಾರೆ.
#
No Comment! Be the first one.