ಇತ್ತೀಚಿಗಷ್ಟೇ ದರ್ಶನ್ ಹಾಗೂ ವಿಜಯಲಕ್ಷ್ಮಿ ಸಾಂಸಾರಿಕ ಜೀವನದಲ್ಲಿ ಬಿರುಕು ಮೂಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು. ಇದಕ್ಕೆ ಪುರಾವೆ ಎಂಬಂತೆ ವಿಜಯಲಕ್ಷ್ಮಿ ವಿಜಯ್ ಲಕ್ಷ್ಮಿ ದರ್ಶನ್ ಎಂದು ತಮ್ಮ ಟ್ವಿಟರ್ ಖಾತೆಯ ಹೆಸರನ್ನು ವಿಜಯ್ ಲಕ್ಷ್ಮಿ ಎಂದು ಬದಲಿಸಿಕೊಂಡಿದ್ದಾರೆ. ಜತೆಗೆ ಊಹಾ ಪೋಹಗಳನ್ನು ನಂಬಬೇಡಿ ಎಂದು ಟ್ವೀಟ್ ಕೂಡ ಮಾಡಿದ್ದರು.

ಆದರೆ ಸದ್ಯ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವಿಜಯ ಲಕ್ಷ್ಮಿ ಮತ್ತು ದರ್ಶನ್ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಲನ್ನು ಹತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಯಾವುದು ನಿಜ ಯಾವುದು ಸುಳ್ಳು ಎಂಬುದು ಸದ್ಯ ನಿಗೂಢವಾಗಿದ್ದು, ಕುರುಕ್ಷೇತ್ರದ ಖುಷಿಯಲ್ಲಿರುವ ದರ್ಶನ್ ಆಗಲೀ ಅಥವಾ ವಿಜಯಲಕ್ಷ್ಮಿಯವರೇ ಸ್ಪಷ್ಟೀಕರಣವನ್ನು ನೀಡಬೇಕಿದೆ. ಲಾಂಗ್ ಗ್ಯಾಪ್ ನಿಂದಲೂ ದರ್ಶನ್ ಮತ್ತು ವಿಜಯಲಕ್ಷ್ಮಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದ್ದು, ದರ್ಶನ್ ಮತ್ತು ವಿಜಯಲಕ್ಷ್ಮಿ ಒಟ್ಟಾಗಿ ಜೀವಿಸುತ್ತಿಲ್ಲ. ದರ್ಶನ್ ಮಗ ವಿನೀಶ್ ನನ್ನು ವಿಜಯಲಕ್ಷ್ಮಿಯವರೇ ನೋಡಿಕೊಳ್ಳುತ್ತಿದ್ದಾರೆ ಎಂದೂ ತಿಳಿದುಬಂದಿತ್ತು. ಆದರೆ ಇತ್ತೀಚಿಗೆ ಮತ್ತೆ ಇವರ ಸಂಸಾರದ ಗುಟ್ಟು ವ್ಯಾದಿ ರಟ್ಟಾಗಿದೆ.

CG ARUN

ಚಿರಂಜೀವಿ ಸರ್ಜಾ ಹೊಸ ಚಿತ್ರ ಶಿವಾರ್ಜುನ!

Previous article

ಸದ್ಯದಲ್ಲೇ ಬಿಡುಗಡೆಯಾಗಲಿದೆ ಜಿಗ್ರಿ ದೋಸ್ತ್!

Next article

You may also like

Comments

Leave a reply

Your email address will not be published. Required fields are marked *