ತೂಗುದೀಪ ದರ್ಶನ…meaningfull life story…ಹೀಗೊಂದು ಅಪರೂಪದ ಪುಸ್ತಕದ ಕವರ್ ಪೇಜ್ ಲಾಂಚ್ ಮಾಡಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ದೊಡ್ಮನೆ ಹುಡುಗ ಬಿಡುಗಡೆ ಮಾಡಿರುವ ಈ ಪುಸ್ತಕದ ಬಗ್ಗೆ ಸದ್ಯ ಎಲ್ಲಾ ಕಡೆ ನ್ಯೂಸ್ ಹರಿದಾಡಲು ಶುರುವಾಗಿದೆ. ಮೀನಾ ತೂಗುದೀಪ ಅವರ ಬದುಕಿನ ಅವಾವರಣದ ಜೊತೆ ಇಡೀ ಪುಸ್ತಕದಲ್ಲಿ ವಿಶೇಷವಾದ ಫೋಟೋಗಳು ಒಳಗೊಂಡಿದೆ. ಜೋಹರ್ ಪಬ್ಲಿಕೇಷನ್ ಅಡಿಯಲ್ಲಿ ಬರುತ್ತಿರುವ ಈ ಪುಸ್ತಕದಲ್ಲಿ ದರ್ಶನ್ ಅವರ ಚಾಲೆಂಜಿಂಗ್ ಬದುಕಿನ ಅಚ್ಚರಿ ಮೂಡಿಸುವ ಸಚ್ಚರಿತೆ ಒಳಗೊಂದಿದ್ದು, ಇದು ಮೊದಲ ಭಾಗದಲ್ಲಿ ಮೂಡಿಬರುತ್ತಿದೆ. ಇದರ ಜೊತೆಗೆ ಈ ಪುಸ್ತಕದಲ್ಲಿ ಪುನೀತ್ ಅವರಿಂದ ಹಿಡಿದು, ರಾಜ್ ಕುಮಾರ್ ಮಕ್ಕಳು ಸಹ ತೂಗುದೀಪ ಶ್ರೀನಿವಾಸ್ ಮತ್ತು ರಾಜ್ ಕುಮಾರ್ ಕುಟುಂಬದ ಒಡನಾಟದ ಬಗ್ಗೆ ವಿಶೇಷ ಮಾಹಿತಿ ನೀಡಿದ್ದಾರೆ.
ಈಗಾಗಲೇ ಈ ಪುಸ್ತಕದ ಕುರಿತು ಒಂದು ಹಾಡು ಕೂಡ ಮಾಡಿದ್ದು, ದಚ್ಚು ಅವರ ಅಚ್ಚುಮೆಚ್ಚಿನ ಗಾಯಕ ಹೇಮಂತ್ ಅವರು ತೂಗುದೀಪ ದರ್ಶನ ನಿಮ್ಮ ಮುಂದೆ ಎಂದು ಹಾಡಿದ್ದಾರೆ. ಐ ಲವ್ ಯು ಖ್ಯಾತಿಯ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲು ಹಾಡು ಕಂಪೋಸ್ ಮಾಡಿದ್ದಾರೆ. ಈಗಾಗಲೇ ಹಾಡು ಸಹ ಲಕ್ಷ ಲಕ್ಷ ವೀವ್ಸ್ ಪಡೆಯುತ್ತಿದೆ.
ಇದಲ್ಲದೇ ದರ್ಶನ್ ಅವರ ಹುಟ್ಟುಹಬ್ಬದ ದಿನ ಡಿ ಬಾಸ್ ಅವರ exclusive ಚಿತ್ರಗಳಿರುವ ದಿನ ದರ್ಶಿಕೆ ಕೂಡ ಬಿಡುಗಡೆ ಮಾಡಲಾಗಿದ್ದು, ಆ ಕ್ಯಾಲೆಂಡರ್ ಅನ್ನು ಉಚಿತವಾಗಿ ಕೊಡಲಾಗುತ್ತಿದೆ. ಉಚಿತ ಕ್ಯಾಲೆಂಡರ್ ಗಾಗಿ 6363823032, (WhatsApp) 6364029090,9901409734ನಂಬರ್ ಗೆ ಸಂಪರ್ಕ ಮಾಡಬಹುದಾಗಿದೆ.
No Comment! Be the first one.