ಮಂಡ್ಯ ಲೋಕಸಭಾ ಚುನಾವಣೆಯ ಕಾವು ಕಡಿಮೆಯಾಗಿ ವಾರವೇ ಕಳೆದಿದೆ. ಜೋಡೆತ್ತು ಎಂದು ಗುರುತಿಸಿಕೊಂಡ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್, ಸುಮಲತಾ ಅಂಬರೀಶ್ ಅವರ ಪರ ಭರ್ಜರಿ ಪ್ರಚಾರ ಮಾಡುವ ಮೂಲಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಪ್ರಬಲವಾದ ಪೈಪೋಟಿ ನೀಡಿದ್ದರು. ಇದರ ಪರಿಣಾಮ ಮಂಡ್ಯ ಅಖಾಡದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಇಲ್ಲಿಯವರೆಗೂ ಸೀಕ್ರೆಟ್ ಆಗಿಯೇ ಉಳಿದೆ. ಈ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಳೆದ ವಾರ ಹುಬ್ಬಳ್ಳಿಯಲ್ಲಿ ಪರೋಕ್ಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಗೆ ಮುಂದೈತೆ ಮಾರಿಹಬ್ಬ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದು ಎಲ್ಲರಿಗೂ ಕುತೂಹಲ ಹೆಚ್ಚಾಗುವಂತೆಯೂ ಮಾಡಿತ್ತು. ಈ ಎಲ್ಲಾ ರಾಜಕೀಯ ಬೆಳವಣಿಗೆಯ ಮಧ್ಯೆ ಒಡೆಯ ದರ್ಶನ್ ಈಗ ಮುಖ್ಯಮಂತ್ರಿ ಎಚ್.ಡಿ, ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದಾರೆ. ಅದರಲ್ಲೂ ಮಂಡ್ಯ ರೈತರ ವಿಷಯವಾಗಿ ದರ್ಶನ್ ಮಾತನಾಡಿರುವ ಈ ಮಾತು ಸದ್ಯ ಕುಮಾರಸ್ವಾಮಿ ಹಾಗೂ ಜೋಡೆತ್ತುಗಳ ನಡುವಿನ ವಾಕ್ಸಮರಕ್ಕೆ ಮತ್ತಷ್ಟು ಇಂಬು ನೀಡಿದೆ.
ರಾಜ್ಯದಲ್ಲಿ ಇನ್ನೂ ಕೆಲವು ಕಡೆ ರೈತರ ಸಾಲ ಮನ್ನಾ ಆಗಿಲ್ಲ ಎಂಬುದು ಕೇಳಿ ಬರುತ್ತಿತ್ತು, ರೈತರ ಸಾಲ ಮನ್ನಾ ತಡವಾಗಿದೆ ಎಂದು ಅವರು, ಸರ್ಕಾರ ರೈತರಿಗೆ ಅವರ ಸಾಲಮನ್ನಾ ಮಾಡದಿದ್ದರೂ ಚಿಂತೆಯಿಲ್ಲ ರೈತರು ಬೆಳೆದ ಬೆಳೆಗೆ ನ್ಯಾಯವಾದ ಬೆಂಬಲ ಬೆಲೆ ನೀಡಿದರೆ, ಅವರೇ ತಮ್ಮ ಸಾಲ ತೀರಿಸುತ್ತಾರೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಿಳಿಸಿದ್ದಾರೆ. ರೈತರಿಗೆ ಸಾಲ ತೀರಿಸುವ ಶಕ್ತಿ ಇದೆ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿ ಅವರ ಸಾಲಮನ್ನಾ ಘೋಷಣೆ ಅರ್ಧಕ್ಕೆ ನಿಂತಿರುವುದನ್ನು ಪರೋಕ್ಷವಾಗಿ ದರ್ಶನ್ ಕೆದಕಿದ್ದಾರೆ. ಇನ್ನು ದೇಶಕ್ಕೆ ಯೋಧರು ಮತ್ತು ರೈತರು ಕಣ್ಣುಗಳು ಇದ್ದ ಹಾಗೆ ಇವರಿಬ್ಬರು ಚೆನ್ನಾಗಿದ್ದರೆ ನಾವೂ ಚೆನ್ನಾಗಿರುತ್ತೇವೆ ಎಂದೂ ಹೇಳಿದ್ದಾರೆ. ನಗರದ ಬಿ.ಐ.ಟಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜತೆ ಮಾತನಾಡಿದ ಯಜಮಾನ, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
No Comment! Be the first one.