ವರ್ಷಕ್ಕೆ ಒಂದಾದರೂ ಕಾರ್ ಖರೀದಿಸುವುದನ್ನು ನೋಡಿದರೆ ದರ್ಶನ್ ಗೆ ಎಷ್ಟರಮಟ್ಟಿಗೆ ಕಾರ್ ಕ್ರೇಜ್ ಇದೆ ಎಂಬುದು ಗೊತ್ತಾಗುತ್ತದೆ. ಯಾವ ದೇಶಕ್ಕೆ ಪ್ರವಾಸ ಹೋದರೂ ಏನಾದರೂ ಹೊಸ ವಸ್ತುಗಳನ್ನು ಖರೀದಿ ಮಾಡೋ ದರ್ಶನ್ ಈ ಬಾರಿ ಹೊಸದಾಗಿ ಹಳದಿ ಬಣ್ಣದ ಲಂಬೋರ್ಗಿನಿ ಕಾರನ್ನು ಖರೀದಿಸಿದ್ದಾರೆ.
ಈಗಾಗಲೇ ದರ್ಶನ್ ಮನೆಯಲ್ಲಿ ಬಹಳಷ್ಟು ಕಾರುಗಳಿವೆ. ಅಲ್ಲದೇ 5 ಕೋಟಿ ಬೆಲೆ ಬಾಳುವ ಬಿಳಿ ಬಣ್ಣದ ಲಂಬೋರ್ಗಿನಿ ಅವೆಂಟೇಡರ್ ಕಾರು ಇದೆ. ಇದೀಗ ಹೊಸದಾಗಿ ಸುಮಾರು 3 ಕೋಟಿ ಬೆಲೆಯ ಮತ್ತೊಂದು ಲಂಬೋರ್ಗಿನಿ ಉರುಸ್ ಅನ್ನೋ ಕಾರು ದರ್ಶನ್ ಮನೆಗೆ ಎಂಟ್ರಿ ಕೊಟ್ಟಿದೆ. ದರ್ಶನ್ ಮನೆಯ ಮುಂದೆ ಹಳದಿ ಬಣ್ಣದ ಹೊಸ ಕಾರು ಫಳ ಫಳ ಅಂತಾ ಶೈನಿಂಗ್ ನಲ್ಲಿ ನಿಂತಿದೆ ಲಂಬೋರ್ಗಿನಿ.

Senior Film Journalist
karnataka kannada india darshan actor chilling star kichcha sudeepa actor yash kgf
Comments