ಒಂದರ ಹಿಂದೊಂದರಂತೆ ಒಪ್ಪಿಕೊಳ್ಳುತ್ತಿರೋ ಚಿತ್ರಗಳು, ಬಿಡುವಿರದ ಚಿತ್ರೀಕರಣ… ಇದೆಲ್ಲದರಾಚೆಗೆ ಬೆರಗಾಗಿಸುವಂಥಾ ಹವ್ಯಾಸಗಳ ಮೂಲಕವೂ ಸುದ್ದಿಯಾಗುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರಿಗಿರೋ ಪ್ರಾಣಿ ಪ್ರೀತಿ, ಕಾರುಗಳ ಕ್ರೇಜ಼್ ಬಗ್ಗೆ ಅಭಿಮಾನಿಗಳಿಗೆಲ್ಲ ಗೊತ್ತಿರೋ ವಿಚಾರವೇ. ಆದರೆ ದರ್ಶನ್ ಅವರು ಕಾರ್ ರೇಸರ್ ಕೂಡಾ ಹೌದಾ…? ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರೋ ರೋಮಾಂಚಕ ಕಾರ್ ರೇಸಿಂಗ್ ವೀಡಿಯೋ ಒಂದು ಅಂಥಾ ಪ್ರಶ್ನೆಯನ್ನೂ ಹುಟ್ಟಿಸಿದೆ!
ಈ ವೀಡಿಯೋದಲ್ಲಿ ಪಳಗಿದ ರೇಸರುಗಳೇ ಥಂಡಾ ಹೊಡೆಯುವಂತೆ ದರ್ಶನ್ ರೇಸ್ ಟ್ರ್ಯಾಕಿನಲ್ಲಿ ಕಾರ್ ಓಡಿಸುವ ದೃಷ್ಯಾವಳಿಗಳಿವೆ. ಇದು ಯಾವುದಾದರೂ ಚಿತ್ರದ ಶೂಟಿಂಗಿಗಾಗಿ ಮಾಡಿರೋ ರೇಸಾ? ಸುಮ್ಮನೆ ಜಾಲಿ ಮೂಡಿನಲ್ಲಿ ದರ್ಶನ್ ಕಾರು ಚಲಾಯಿಸಿದ್ದಾರಾ ಅಂತೆಲ್ಲ ಪ್ರಶ್ನೆಗಳನ್ನಿಟ್ಟುಕೊಂಡು ಹೊರಟರೆ ಮತ್ತೊಂದು ಮಜಲಿನ ಉತ್ತರಗಳು ಹೊರ ಬೀಳುತ್ತವೆ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೇಸ್ ಟ್ರ್ಯಾಕಿನಲ್ಲಿ ಓಡಿಸಿರೋ ಕಾರು ಪೋಲೋ ಜಿಟಿಐ. ೧೫೦ ಹಾರ್ಸ್ ಪವರ್ ಹೊಂದಿರೋ ರಾಕ್ಷಸ ವೇಗದ ಈ ಕಾರನ್ನು ಪಳಗಿದ ರೇಸರುಗಳು ಮಾತ್ರವೇ ಓಡಿಸಲು ಸಾಧ್ಯ. ಅಂಥಾ ಕಾರನ್ನು ದರ್ಶನ್ ಯಾವುದೇ ಚಿತ್ರದ ಚಿತ್ರೀಕರಣಕ್ಕಾಗಿ ಖಂಡಿತಾ ಚಲಾಯಿಸಿಲ್ಲ. ಅವರು ಈ ಮೂಲಕ ಇಂಟರ್ನ್ಯಾಷನಲ್ ರೇಸಿಂಗ್ ಟೂರ್ನಮೆಂಟ್ ಒಂದರಲ್ಲಿ ಪಾಲ್ಗೊಳ್ಳಲು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಈಗಾಗಲೇ ಈ ರೇಸಿಂಗ್ನಲ್ಲಿ ಪಳಗಿಕೊಂಡಿರೋ ದರ್ಶನ್ ಅವರು ಸದ್ಯದಲ್ಲಿಯೇ ಈ ಕಾರ್ ರೇಸಿಂಗ್ ಕಾಂಪಿಟೇಷನ್ ಮೂಲಕ ವಿಶ್ವ ಮಟ್ಟದಲ್ಲಿಯೂ ಸದ್ದು ಮಾಡಲಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.
#