Darshan fan Prajwal Mandya Cinibuzz kannada
Darshan fan Prajwal Mandya Cinibuzz kannada

ʻʻಪ್ರಜ್ವಲ್‌ ಅಂತ್ಯ ಕ್ರಿಯೆಯ ದಿನ ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ, ತಾವು ದಯವಿಟ್ಟು ಪ್ರಜ್ವಲ್‌ ಉತ್ತರ ಕ್ರಿಯೆ ಕಾರ್ಯದಲ್ಲಿ ಭಾಗಿಯಾಗಿ, ನಿಮ್ಮ ಅಪ್ಪಟ ಅಭಿಮಾನಿಯಾದ ಪ್ರಜ್ವಲ್‌ ಆತ್ಮಕ್ಕೆ ಶಾಂತಿ ಕೋರಬೇಕೆಂದು ಕೇಳಿಕೊಳ್ಳುತ್ತಿದ್ದೇವೆ….ʼʼ

ಮೊನ್ನೆ ಆಗಸ್ಟ್‌ 31ರಂದು ದರ್ಶನ್‌ ಅವರ ಪರಮ ಅಭಿಮಾನಿ ಹುಡುಗ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟಿದ್ದರು. ಬರುವ 10ನೇ ತಾರೀಖು ಅವರ ಉತ್ತರ ಕ್ರಿಯಾದಿ ಕಾರ್ಯವಿದೆ. ಈ ಕಾರ್ಯಕ್ಕಾದರೂ ದರ್ಶನ್‌ ಆಗಮಿಸಲಿ ಅನ್ನೋದು ಸ್ವತಃ ಚಾಲೆಂಜಿಂಗ್‌ ಸ್ಟಾರ್‌ ಅಭಿಮಾನಿಗಳ ಆಶಯ.

ಮಂಡ್ಯ ಜಿಲ್ಲೆಯ, ಮದ್ದೂರು ತಾಲ್ಲೂಕಿನ ರಾಂಪುರ ನಿವಾಸಿ ಪ್ರಜ್ವಲ್.‌ ದರ್ಶನ್‌ ಅಂದರೆ ಈ ಹುಡುಗನಿಗೆ ಪ್ರಾಣ. ದಚ್ಚು ಅಭಿನಯದ ಯಾವುದೇ ಸಿನಿಮಾ ಬಿಡುಗಡೆಯಾದರೆ, ಥೇಟರುಗಳ ಮುಂದೆ ಸ್ಟಾರ್‌ ಕಟ್ಟಿ ಹಬ್ಬದಂತೆ ಆಚರಿಸುತ್ತಿದ್ದರು. ಅಷ್ಟೇ ಅಲ್ಲದೆ, ತನ್ನ ಬಲಗೈ ಮೇಲೆ ದೊಡ್ಡದಾದ ಟ್ಯಾಟೂ ಕೂಡಾ ಹಾಕಿಸಿಕೊಂಡಿದ್ದರು. ‌

ವೃತ್ತಿಯಿಂದ ಕಾರ್‌ ಡ್ರೈವರ್‌ ಆಗಿದ್ದ ಪ್ರಜ್ವಲ್‌ ಆವತ್ತು ಬೆಂಗಳೂರಿನ ವಿಮಾನ ವಿಮಾನ ನಿಲ್ದಾಣಕ್ಕೆ ಡ್ಯೂಟಿಗೆಂದು ಬಂದಿದ್ದರು. ಹೃದಯ ಸ್ತಂಬನ್ನಕ್ಕೊಳಗಾದ ಪ್ರಜ್ವಲ್‌ ಕೂತಲ್ಲೇ ಕುಸಿದು ಜೀವ ಬಿಟ್ಟಿದ್ದರು.  ಉಸಿರು ಚೆಲ್ಲಿ ಮಲಗಿದ್ದ ಪ್ರಜ್ವಲ್‌ ಕೈಮೇಲೆ ದರ್ಶನ್‌ ಅವರ ಮುಖದ ಹಚ್ಚೆ ಎದ್ದು ಕಾಣುತ್ತಿತ್ತು. ʻಬಾಸ್‌ ಅಂದರೆ ನನಗೆ ಪ್ರಾಣಕ್ಕಿಂತಾ ಹೆಚ್ಚು. ನಾನು ಪ್ರಾಣ ಬಿಟ್ಟಮೇಲೂ ಅವರು ನನ್ನೊಂದಿಗಿರಬೇಕುʼ ಅಂತಾ ಹೇಳಿಯೇ ಪ್ರಜ್ವಲ್‌ ಟ್ಯಾಟೂ ಹಾಕಿಸಿಕೊಂಡಿದ್ದ. ಆತ ಬಯಸಿದಂತೆಯೇ ನಡೆಯಿತು ಕೂಡಾ….

ಈಗ ರಾಂಪುರದ ದರ್ಶನ್‌ ಅಭಿಮಾನಿಗಳು ತಮ್ಮ ಆರಾಧ್ಯ ನಟನಿಗೆ ಪತ್ರ ಬರೆದು, ʻʻಪ್ರಜ್ವಲ್‌ ಅಂತ್ಯ ಕ್ರಿಯೆಯ ದಿನ ನಿಮ್ಮನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ, ತಾವು ದಯವಿಟ್ಟು ಪ್ರಜ್ವಲ್‌ ಉತ್ತರ ಕ್ರಿಯೆ ಕಾರ್ಯದಲ್ಲಿ ಭಾಗಿಯಾಗಿ, ನಿಮ್ಮ ಅಪ್ಪಟ ಅಭಿಮಾನಿಯಾದ ಪ್ರಜ್ವಲ್‌ ಆತ್ಮಕ್ಕೆ ಶಾಂತಿ ಕೋರಬೇಕೆಂದು ಕೇಳಿಕೊಳ್ಳುತ್ತಿದ್ದೇವೆ….ʼʼ ಎಂದು ವಿನಂತಿಸಿದ್ದಾರೆ…

ಈ ಹಿಂದೆ ಕೂಡಾ  ತಮ್ಮ ಅಭಿಮಾನಿಗಳು ಅನಾರೋಗ್ಯಕ್ಕೀಡಾದಾಗ, ನಿಧನರಾದಾಗ ದರ್ಶನ್‌ ಖುದ್ದು ಭೇಟಿ ನೀಡಿದ್ದಿದೆ. ಕೆಲವೊಮ್ಮೆ ಶೂಟಿಂಗ್‌ ಒತ್ತಡದಲ್ಲಿದ್ದಾಗ, ಹೊರದೇಶಗಳಿಗೆ ಹೋಗಿದ್ದ ಸಂದರ್ಭಗಳಲ್ಲಿ ದೂರದಿಂದಲೇ ಸಂದೇಶ ರವಾನಿಸಿದ್ದಾರೆ. ಈ ಸಲ ದರ್ಶನ್‌ ಯಾವ ಸಿನಿಮಾದ ಶೂಟಿಂಗನಲ್ಲೂ ಪಾಲ್ಗೊಂಡಿಲ್ಲ. ಹೀಗಾಗಿ ಯಜಮಾನ ಆಗಮಿಸಬಹುದು. ಆ ಮೂಲಕ ತಮ್ಮ ಸ್ನೇಹಿತನ ಆತ್ಮಕ್ಕೆ ಶಾಂತಿ ದೊರಕಬಹುದು ಅಂತಾ ಮುಗ್ದ ಅಭಿಮಾನಿಗಳು ಕಾದಿದ್ದಾರೆ..

ದರ್ಶನ್‌ ಹೋಗುವ ಮನಸ್ಸು ಮಾಡ್ತಾರಾ? ಹತ್ತನೇ ತಾರೀಖಿನತನಕ ಕಾದು ನೋಡೋಣ…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕುಡಿ ಮಗ ಕುಡಿ ಮಗ ಬಿಡಬೇಡ ಇದನ್ನಾ!

Previous article

ಬೂಟಿನ ರುಚಿಗಾಗಿ ಹಪಹಪಿಸುವ ಕನ್ನಡ ವಿರೋಧಿ ಇವನು!

Next article

You may also like

Comments

Leave a reply

Your email address will not be published.