ಧೈರ್ಯವಾಗಿದ್ದರೆ ನೀನು ಮೊದಲಿನಂತೆ ಆಗ್ತೀಯʼ ಎಂದು ಹೇಳಿದರು. ಯಾವ ವೈದ್ಯರ ಚಿಕಿತ್ಸೆ, ಔಷಧಿಗಳಿಂದ ಗುಣವಾಗದ ಹುಡುಗನ ಅನಾರೋಗ್ಯ ಬಹುಶಃ ಇಷ್ಟದ ನಟನ ʻದರ್ಶನʼದಿಂದಾದರೂ ಸರಿಹೋಗಬಹುದು.

ದಷ್ಟಪುಷ್ಟವಾಗಿದ್ದ, ಚಿಗರೆಯಂತೆ ಓಡಾಡಿಕೊಂಡಿದ್ದ ಹುಡುಗನೊಬ್ಬ ಇವತ್ತು ಅನಾರೋಗ್ಯಕ್ಕೀಡಾಗಿ ನಿತ್ರಾಣ ಸ್ಥಿತಿ ತಲುಪಿದ್ದಾನೆ. ದಾವಣಗೆರೆ ಮೂಲದ ಮಧು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಅಪ್ಪಟ ಅಭಿಮಾನಿ. ದರ್ಶನ್‌ ಅವರ ಸಿನಿಮಾಗಳು ಬಂತೆಂದರೆ, ಥೇಟರುಗಳ ಮುಂದೆ ಸ್ಟಾರ್‌ ಕಟ್ಟಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದ. ದ್ವಿತೀಯ ಪಿಯೂಸಿ ಓದುತ್ತಿದ್ದವನು ಅದೊಂದು ದಿನ ಟಾಯ್ಲೆಟ್ಟಿನಲ್ಲಿ ಜಾರಿಬಿದ್ದಿದ್ದಷ್ಟೇ. ಆವತ್ತಿಂದ ಈತನ ಆರೋಗ್ಯ ಮೇಲಿಂದ ಮೇಲೆ ಹದಗೆಡುತ್ತಲೇ ಬಂತು. ಎಡಗಾಲಿಗೆ ರಾಡ್‌ ಹಾಕಿದ್ದಾರೆ. ಅದರ ಜೊತೆಗೆ ಮತ್ತೊಂದು ಕಾಲು, ಕೈಗಳೂ ಸ್ವಾಧೀನ ಕಳೆದುಕೊಂಡಿವೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬಕ್ಕೆ ಆಧಾರವಾಗಬೇಕಿದ್ದ ಮಧು ಹೀಗೆ ಹಾಸಿಗೆ ಹಿಡಿದು ಮಲಗಿದ್ದಾನೆ. ಒಮ್ಮೆಯಾದರೂ ನೆಚ್ಚಿನ ನಟ ದರ್ಶನ್‌ ಅವರನ್ನು ನೋಡಬೇಕು ಅನ್ನೋದು ಹುಡುಗನ ಬಯಕೆ.

ಈ ವಿಚಾರ ಖುದ್ದು ದರ್ಶನ್‌ ಅವರ ಕಿವಿಗೆ ತಲುಪಿತ್ತು. ತಕ್ಷಣ ಹುಡುಗನನ್ನು ಕರೆದುಕೊಂಡು ಬರಬೇಕಾಗಿ ತಿಳಿಸಿದ್ದರು. ಇಂದು ಮಧು ದಾವಣಗೆರೆಯಿಂದ ಬೆಂಗಳೂರಿಗೆ ಬಂದಿದ್ದ. ಸದ್ಯ ಈ ಹುಡುಗನ ದೈಹಿಕ ಪರಿಸ್ಥಿತಿ ಎಷ್ಟು ಹೀನಾಯವಾಗಿದೆಯೆಂದರೆ, ಎರಡು ಹೆಜ್ಜೆ ನಡೆಯಲೂ ಸಾಧ್ಯವಿಲ್ಲ. ಯಾರಾದರೂ ಒಮ್ಮೆ ಎತ್ತಿ ಇಳಿಸಿದರೂ ಆತನ ದೇಹ ಹೈರಾಣಾಗುತ್ತದೆ. ಇದನ್ನರಿತ ದರ್ಶನ್‌ ತಮ್ಮ ಮನೆ ಮುಂದೆ ಬಂದ ಬಂದು ನಿಂತಿದ್ದ ಕಾರಿನ ಬಳಿಗೇ ಹೋದರು. ಮಧುವಿನ ಕೈ ಹಿಡಿದು, ಭುಜ ಮುಟ್ಟಿ ಧೈರ್ಯ ಹೇಳಿದರು.

ʻನಿನಗೆ ನನ್ನಿಂದ ಏನೇ ಅನುಕೂಲ ಬೇಕಿದ್ದರೂ ತಕ್ಷಣವೇ ಕರೆ ಮಾಡು. ನೇರವಾಗಿ ನನ್ನ ಬಳಿಯೇ ಮಾತಾಡಬೇಕು. ನಿನಗೆ ಏನೂ ಆಗುವುದಿಲ್ಲ. ಧೈರ್ಯವಾಗಿದ್ದರೆ ನೀನು ಮೊದಲಿನಂತೆ ಆಗ್ತೀಯʼ ಎಂದು ಹೇಳಿದರು. ಯಾವ ವೈದ್ಯರ ಚಿಕಿತ್ಸೆ, ಔಷಧಿಗಳಿಂದ ಗುಣವಾಗದ ಹುಡುಗನ ಅನಾರೋಗ್ಯ ಬಹುಶಃ ಇಷ್ಟದ ನಟನ ʻದರ್ಶನʼದಿಂದಾದರೂ ಸರಿಹೋಗಬಹುದು. ದರ್ಶನ್‌ ಅವರನ್ನು ನೋಡುತ್ತಿದ್ದಂತೇ ಹುಡುಗನ ಕಣ್ಣಾಲಿಗಳು ತುಂಬಿಬಂದವು. ಮತ್ತೆ ಮೊದಲಿನಂತೆ ಎದ್ದು ನಡೆದಾಡುವ ಹುಮ್ಮಸ್ಸು ತೋರಿಸಿದ್ದಾನೆ. ನಿಜಕ್ಕೂ ಅಧು ಸಾಧ್ಯವಾಗಲಿ. ನಂಬಿಕೆ, ಪ್ರೀತಿಯ ಸಾಂತ್ವನಕ್ಕೆ ಎಂಥದ್ದನ್ನೂ ಬಗೆಹರಿಸಬಲ್ಲ ಚಿಕಿತ್ಸಕ ಗುಣವಿದೆ.

ಈ ಹಿಂದೆ ಕೂಡಾ ದರ್ಶನ್‌ ತಮ್ಮ ಅಭಿಮಾನಿಗಳ ನೋವು ನಲಿವುಗಳಿಗೆ ಸ್ಪಂದಿಸಿದ್ದಾರೆ. ಜೀವನ್ಮರಣ ಹೋರಾಟದಲ್ಲಿರುವ ಅಭಿಮಾನಿಗಳನ್ನು ಸ್ವತಃ ಭೇಟಿ ಮಾಡಿ ಸಂತೈಸಿದ್ದಾರೆ. ದಾವಣಗೆರೆಯ ಅಭಿಮಾನಿ ಮಧುಗೆ ಕೂಡಾ ದರ್ಶನ್‌ ಕೈ ಸ್ಪರ್ಶ, ನೇವರಿಕೆ, ಪ್ರೀತಿಯ ಮಾತುಗಳು ಬದುಕುವ ಶಕ್ತಿ ತಂದುಕೊಡಲಿ…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಹೇ ಪುನೀತ… ಕರುನಾಡೆ ಪುನೀತ….

Previous article

ಗೋವಾದಲ್ಲಿ  ಓ ಮೈ ಲವ್ ಟಪಾಂಗುಚಿ ಸಾಂಗ್ 

Next article

You may also like

Comments

Leave a reply

Your email address will not be published. Required fields are marked *