ಕೆ ಮಂಜು ಪುತ್ರ ಶ್ರೇಯಸ್ ಅಭಿನಯದ ಪಡ್ಡೆಹುಲಿ ಚಿತ್ರದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದ್ದಾರೆ. ಈ ಹೆಸರು ಕೇಳಿದೇಟಿಗೆ ಒಟ್ಟಾರೆ ಕಥೆಯ ಬಗ್ಗೆ ತಮ್ಮದೇ ಅಂದಾಜು ಹೊಂದಿದ್ದವರನ್ನೆಲ್ಲ ಅಚ್ಚರಿಗೊಳಿಸುವಂತೆ ಈ ಟ್ರೈಲರ್ ಹೊರ ಬಂದಿದೆ.
ಇದು ಎಲ್ಲ ಅಂಶಗಳನ್ನೂ ಒಳಗೊಂಡಿರುವ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಎಂಬ ವಿಚಾರವೂ ಈ ಮೂಲಕವೇ ಜಾಹೀರಾಗಿದೆ.ಬಾಲ್ಯ, ಕುಟುಂಬ, ಮಾಸ್, ಪ್ರೀತಿ, ಹಾಸ್ಯ ಸೇರಿದಂತೆ ಎಲ್ಲ ಅಂಶಗಳನ್ನೂ ಹದವಾಗಿ ಬೆರೆಸಿ ನಿರ್ದೇಶಕ ಗುರುದೇಶಪಾಂಡೆ ಪಡ್ಡೆಹುಲಿಯನ್ನು ರೂಪಿಸಿದ್ದಾರೆ.
ಇದೇ ಈಗ ಯಜಮಾನ ಬಿಡುಗಡೆಗೊಳಿಸಿರುವ ಟ್ರೈಲರ್ ನ ಹೈಲೈಟ್. ಇದರ ಜೊತೆಗೇ ಶ್ರೇಯಸ್ ಎಂಬ ಹೊಸಾ ಹುಡುಗನ ಶ್ರಮ, ತಯಾರಿಗಳೆಲ್ಲವೂ ನೋಡುಗರೆಲ್ಲರು ಖುಷಿಗೊಳ್ಳುವಂತೆ ಮಾಡಿದೆ. ಈ ಮೂಲಕ ನಿರ್ಮಾಪಕ ಎಮ್. ರಮೇಶ್ ರೆಡ್ಡಿಯವರ ಕನಸು, ಶ್ರಮಗಳೆಲ್ಲವೂ ಸಾರ್ಥಕವಾದಂತಾಗಿದೆ.ಟ್ರೈಲರ್ನಲ್ಲಿ ಶ್ರೇಯಸ್ ನಾಯಕ ನಟನಾಗಿ ನೆಲೆಗೊಳ್ಳುವ ಸ್ಪಷ್ಟ ಸೂಚನೆಗಳು ಸಿಕ್ಕಿವೆ. ಎಲ್ಲ ಶೇಡುಗಳಲ್ಲಿಯೂ ಅವರು ಗಮನ ಸೆಳೆಯುತ್ತಾರೆ.
ಮಾಸ್ ಸೀನುಗಳಲ್ಲಿಯಂತೂ ಶ್ರೇಯಸ್ ವಿಜೃಂಭಿಸಿದ್ದಾರೆ. ಈ ಮೂಲಕ ಶ್ರೇಯಸ್ ಕನ್ನಡದ ಟೈಗರ್ ಶ್ರಾಫ್ ಎಂಬ ಭಾವನೆ ಮೂಡೋದರಲ್ಲಿ ಅಚ್ಚರಿಯೇನಿಲ್ಲ. ಅಂಥಾ ಫೈಟಿಂಗ್ ಖದರ್ ಅನ್ನು ಶ್ರೇಯಸ್ ಪ್ರದರ್ಶಿಸಿದ್ದಾರೆ.ನಾಯಕಿ ನಿಶ್ವಿಕಾ ನಾಯ್ಡು ಬೇಬಿ ದಾಲ್ ಆಗಿ ಕಂಗೊಳಿಸಿದ್ದಾರೆ. ರವಿಚಂದ್ರನ್ ಮತ್ತು ಸುಧಾರಾಣಿ ಈ ಸಿನಿಮಾ ಮೂಲಕ ಮತ್ತೆ ಜೋಡಿಯಾಗಿ ಹಿಂತಿರುಗಿದ್ದಾರೆ. ಒಟ್ಟಾರೆಯಾಗಿ ಈ ಟ್ರೈಲರ್ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಳ್ಳುವ ಖದರ್ ಹೊಂದಿದೆ.
No Comment! Be the first one.