ಸಂಕ್ರಾಂತಿಯ ಶುಭ ಘಳಿಗೆಯಲ್ಲಿ ದರ್ಶನ್ ಅಭಿಮಾನಿಗಳ ಪಾಲಿಗೆ ಭರ್ಜರಿ ಸಂಭ್ರಮವೇ ಸಿಕ್ಕಿ ಬಿಟ್ಟಿದೆ. ಅದಕ್ಕೆ ಕಾರಣವಾಗಿರೋದು ಯಜಮಾನ ಚಿತ್ರದ ಶಿವನಂದಿ ಹಾಡಿನ ನಾಗಾಲೋಟ. ಯೂಟ್ಯೂಬ್ನಲ್ಲಿ ಈ ಹಾಡಿನ ಹವಾ ಅದ್ಯಾವ ಥರ ಇದೆಯೆಂದರೆ, ಅದರ ಮುಂದೆ ತಮಿಳು ಚಿತ್ರಗಳೂ ಥಂಡಾ ಹೊಡೆದು ಬಿಟ್ಟಿವೆ.
ಸಂಕ್ರಾಂತಿಯಂದು ಬಿಡುಗಡೆಯಾಗಿದ್ದ ಶಿವನಂದಿ ಆ ದಿನವೇ ಬಹುತೇಕ ದಾಖಲೆಗಳನ್ನು ಬ್ರೇಕ್ ಮಾಡಿತ್ತು. ಅದಾಗಿ ಮಾರನೇ ದಿನ, ಅಂದರೆ ಈ ಕ್ಷಣದ ವರೆಗೇ ಶಿವನಂದಿ ಹಾಡು ಯೂಟ್ಯೂಬ್ ಟ್ರೆಂಡಿಂಗ್ನಲ್ಲಿದೆ. ಇದರ ಅಬ್ಬರದ ಮುಂದೆ ತಮಿಳಿನ ಚಿಯಾನ್ ವಿಕ್ರಂ ಚಿತ್ರವೇ ಮಂಕಾಗಿ ಬಿಟ್ಟಿದೆ!
ಇದೇ ದಿನ ಚಿಯಾನ್ ವಿಕ್ರಂ ಅಭಿಯದ ಕೊಡರಂ ಕೊಂಡನ್ ಟೀಸರ್ ಮತ್ತು ಪ್ರಭುದೇವ ನಟನೆಯ ಚಾರ್ಲಿ ಚಾಪ್ಲಿನ್ ೨ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಈ ಎರಡಕ್ಕೂ ವೀಕ್ಷಣೆ ಸಿಕ್ಕಿದೆಯಾದರೂ ಯೂಟ್ಯೂಬ್ ಟ್ರೆಂಡಿಂಗ್ನಲ್ಲಿ ಯಜಮಾನನ ಶಿವನಂದಿಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಈಗಿರೋ ಹವಾ ನೋಡಿದರೆ ಅದು ಅಷ್ಟು ಸಲೀಸಾಗಿ ಸಾಧ್ಯವಾಗೋದೂ ಇಲ್ಲ.
ಇದು ಯಜಮಾನ ಚಿತ್ರದ ಆರಂಭಿಕ ಯಶಸ್ಸು ಎಂಬುದರಲ್ಲಿ ಎರಡು ಮಾತಿಲ್ಲ. ಈ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊ ಬೇರೆಯದ್ದೇ ರೀತಿಯಲ್ಲಿ ಅಭಿಮಾನಿಗಳ ಮುಂದೆ ಬರಲು ಅಣಿಯಾಗಿದ್ದಾರೆ. ಒಟ್ಟಾರೆ ಕಥೆ ಭಿನ್ನವಾಗಿದೆ ಎಂಬುದೂ ಸೇರಿದಂತೆ ಈಗಾಗಲೇ ಯಜಮಾನನ ಬಗ್ಗೆ ಅಭಿಮಾನದಾಚೆಯೂ ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ.
#
No Comment! Be the first one.