ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಮೈಸೂರಲ್ಲಿ ಅಪಘಾತಕ್ಕೀಡಾದ ಘಟನೆಯ ಬಗ್ಗೆ ಎಲ್ಲರೂ ದಿಗ್ಭ್ರಾಂತರಾಗಿದ್ದಾರೆ. ಅಭಿಮಾನಿಗಳ ಹರಕೆ-ಹಾರೈಕೆಗಳ ಫಲವೆಂಬಂತೆ ದರ್ಶನ್ ಸಣ್ಣ ಮಟ್ಟದ ಗಾಯಗಳ ಹೊರತಾಗಿ ಅಪಾಯದಿಂದ ಪಾರಾಗಿದ್ದಾರೆ. ಈ ಅಪಘಾತವೇ ಒಡೆದ ಮನಸುಗಳನ್ನು ಒಂದುಗೂಡಿಸಲಿರೋ ಸೂಚನೆಯೊಂದು ಅಚ್ಚರಿದಾಯಕವಾಗಿಯೇ ಜಾಹೀರಾಗಿದೆ.
ಇದಕ್ಕೆ ಕಾರಣವಾಗಿರುವುದು ಕಿಚ್ಚಾ ಸುದೀಪ್ ಮಾಡಿರೋ ಟ್ವೀಟ್. ದರ್ಶನ್ ಅಪಘಾತದ ಸುದ್ದಿ ಕೇಳುತ್ತಲೇ ಆಘಾತಕ್ಕೀಡಾಗಿದ್ದ ಸುದೀಪ್ `ನೀನು ಆರೋಗ್ಯವಾಗಿರೋ ಸುದ್ದಿ ಕೇಳಿದೆ. ಬೇಗನೆ ಹುಷಾರಾಗು ಗೆಳೆಯಾ’ ಅಂತ ಟ್ವೀಟ್ ಮಾಡೋ ಮೂಲಕ ಶುಭ ಕೋರಿದ್ದಾರೆ.
ಎಲ್ಲ ಸಿಟ್ಟು ಸೆಡವುಗಳೂ ಕೂಡಾ ವ್ಯರ್ಥ ಅನ್ನಿಸೋದು, ಇದೆಲ್ಲವೂ ಕ್ಷಣಿಕ ಅನ್ನಿಸೋದು ಇಂಥಾ ಕ್ಷಣಗಳಲ್ಲಿಯೇ. ಅಷ್ಟಕ್ಕೂ ಸುದೀಪ್ ಮತ್ತು ದರ್ಶನ್ ದುಷ್ಮನ್ನುಗಳೇನೂ ಅಲ್ಲ. ಒಂದು ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ಕಿಚಿಕ್ಕು ಗೆಳೆಯರೆಂದೇ ಹೆಸರಾಗಿದ್ದವರು. ಅದ್ಯಾವುದೋ ಮುನಿಸಿನಿಂದ ದೂರಾಗಿದ್ದ ಕಿಚ್ಚ ಮತ್ತು ದರ್ಶನ್ ಮತ್ತೆ ಒಂದಾಗೋ ಸೂಚನೆಯನ್ನು ಕಿಚ್ಚನ ಹಾರೈಕೆಯೇ ನೀಡಿದೆ.
ಸದ್ಯಕ್ಕೆ ದರ್ಶನ್ ಅವರೂ ಕೂಡಾ ಚೇತರಿಸಿಕೊಳ್ಳುತ್ತಿದ್ದಾರೆ. ದಿನದೊಪ್ಪತ್ತಿನಲ್ಲಿಯೇ ಆಸ್ಪತ್ರೆಯಿಂದ ಮನೆಗೆ ಮರಳಲಿದ್ದಾರೆ.
#
No Comment! Be the first one.