ಇತ್ತೀಚೆಗೆ ಸ್ಟಾರ್ ನಟರೇ ಗಾಯಕರಾಗಿಯೂ ಖ್ಯಾತರಾಗುವ ಟ್ರೆಂಡ್ ಬೆಳೆಯುತ್ತಿದೆ. ಪುನೀತ್ ರಾಜ್ ಕುಮಾರ್, ಸುದೀಪ್ ಈ ಹಾದಿಯ ಮುಂಚೂಣಿಯಲ್ಲಿದ್ದಾರೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ಇದುವರೆಗೂ ಯಾವ ಹಾಡನ್ನೂ ಹಾಡಿರಲಿಲ್ಲ. ಇದೀಗ ರವಿಚಂದ್ರನ್ ಅಭಿನಯದ ದಶರಥ ಚಿತ್ರಕ್ಕಾಗಿ ದರ್ಶನ್ ಟೈಟಲ್ ಟ್ರ್ಯಾಕ್ ಹಾಡಿದ್ದಾರೆ!
ಎಂ ಎಸ್ ರಮೇಶ್ ನಿರ್ದೇಶನದ ಈ ಚಿತ್ರದ ಟೈಟಲ್ ಸಾಂಗ್ ಅನ್ನು ದರ್ಶನ್ ಅವರೇ ಹಾಡಿದರೆ ಚೆಂದ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಈ ಬಗ್ಗೆ ಚಿತ್ರತಂಡ ದರ್ಶನ್ ಅವರಿಗೂ ಮನವಿ ಮಾಡಿಕೊಂಡಿತ್ತು. ಆದರೆ ಈ ವರೆಗೂ ಹಾಡೋ ತಂಟೆಡಗೆ ಹೋಗದ ದರ್ಶನ್ ನಯವಾಗಿಯೇ ನಿರಾಕರಿಸಿದ್ದರಂತೆ.
ಆದರೂ ಕಡೆಗೆ ಚಿತ್ರತಂಡದ ಪ್ರೀತಿಯ ಒತ್ತಾಸೆಗೆ ಕಟ್ಟುಬಿದ್ದು ಅವರು ದಶರಥ ಟೈಟಲಕ್ ಸಾಂಗ್ ಅನ್ನು ತಮ್ಮದೇ ಶೈಲಿಯಲ್ಲಿ ಹಾಡಿದ್ದಾರಂತೆ. ಇದರ ರೆಕಾರ್ಡಿಂಡ್ ಆಕಾಶ್ ಸ್ಟುಡಿಯೋದಲ್ಲಿ ನೆರವೇರಿದೆ. ಸದ್ಯದಲ್ಲಿಯೇ ದರ್ಶನ್ ಧ್ವನಿಯಲ್ಲಿ ಈ ಹಾಡು ಹೊರ ಬರಲಿದೆ.
ರಮೇಶ್ ನಿರ್ದೇಶನದ ದಶರಥ ಇದೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ರವಿಚಂದ್ರನ್ ಇದರಲ್ಲಿ ವಕೀಲನಾಗಿ ನಟಿಸುತ್ತಿದ್ದಾರೆ.
#
No Comment! Be the first one.