ದರ್ಶನ್ ಅಭಿನಯದ ಯಜಮಾನ ಚಿತ್ರದ ಕಡೆಯಿಂದ ಈ ಸಂಕ್ರಾಂತಿಗೆ ಭರ್ಜರಿ ಗಿಫ್ಟೊಂದು ಸಿಗಲಿದೆ. ಆ ದಿನ ಎಲ್ಲರೂ ಕಾತರದಿಂದ ಕಾಯುತ್ತಿರೋ ಯಜಮಾನನ ಹಾಡೊಂದನ್ನು ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ.
ಬಹದ್ದೂರ್ ಚೇತನ್ ಸಾಹಿತ್ಯವಿರೋ ಶಿವಾನಂದಿ ಎಂಬ ಹಾಡಿಗೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಈ ಹಾಡು ಒಟ್ಟಾರೆ ಯಜಮಾನ ಚಿತ್ರದ ಪ್ರಧಾನ ಅಂಶಗಳನ್ನ ತನ್ನಲ್ಲಿ ಅಡಕವಾಗಿಸಿಕೊಂಡಿದೆಯಂತೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಪೋಸ್ಟರ್ನಲ್ಲಿ ಯಜಮಾನ ದರ್ಶನ್ ಎತ್ತುಗಳ ಮುಂದೆ ನಿಂತಿರೋ ಪೋಸು ಗಮನ ಸೆಳೆದಿತ್ತು. ಈ ಬಗ್ಗೆ ಒಂದಷ್ಟು ಪ್ರಶೆಗಳೂ ಎದ್ದಿದ್ದವು. ಇದೀಗ ಸಂಕ್ರಾಂತಿಗೆ ಬಿಡುಗಡೆಯಾಗಲಿರೋ ಹಾಡೂ ಕೂಡಾ ಶಿವಾನಂದಿ ಅಂತಿರೋದರಿಂದ ಆ ಬಗ್ಗೆ ಮತ್ತಷ್ಟು ಕುತೂಹಲ ಶುರುವಾಗಿದೆ.
ಯಜಮಾನ ಚಿತ್ರ ಕಳೆದ ವರ್ಷದ ಕಡೇ ಘಳಿಗೆಯಲ್ಲಿ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆ ದರ್ಶನ್ ಅಭಿಮಾನಿಗಳಲ್ಲಿತ್ತು. ಆದರೆ ಕೊಂಚ ಮುಂದಕ್ಕೆ ಹೋದರೂ ಧೂಳೆಬ್ಬಿಸಿಕೊಂಡೇಢ ಬಿಡುಗಡೆಯಾಗಲು ಯಜಮಾನ ತಯಾರಾಗಿದೆ. ಅದರ ಹೀಮಚುಮುಂಚಲ್ಲಿಯೇ ಕುರುಕ್ಷೇತ್ರವೂ ಬಿಡುಗಡೆಯಾಗಲಿರೋದರಿಂದ ಈ ವರ್ಷವಿಡೀ ದರ್ಶನ್ ಅಭಿಮಾನಿಗಳಿಗೆ ಹಬ್ಬವಾಗೋದು ಖಂಡಿತ.
#