ಇದೀಗ ಇಡೀ ಕರ್ನಾಟಕದಲ್ಲಿ ಬೇರೆಲ್ಲೂ ಚುನಾವಣೆ ನಡೆಯುತ್ತಲೇ ಇಲ್ಲ ಎಂಬುದಷ್ಟರ ಮಟ್ಟಿಗೆ ಮಂಡ್ಯ ಲೋಕಸಭಾ ಕ್ಷೇತ್ರ ಕಾವೇರಿಕೊಂಡಿದೆ. ಅದಕ್ಕೆ ಸುಮಲತಾ ಅಂಬರೀಶ್ ಕಣದಲ್ಲಿರೋದು ಎಷ್ಟು ಕಾರಣವೋ ಗೊತ್ತಿಲ್ಲ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುಮಲತಾ ಪರವಾಗಿ ಅಖಾಡಕ್ಕಿಳಿದಿದ್ದರಿಂದಲೇ ಈ ಕಣ ಈ ರೀತಿ ರಂಗು ಪಡೆದುಕೊಂಡಿದೆ.
ಎದುರಾಳಿ ಪಕ್ಷದಲ್ಲಿ ಯಾರೇ ಇದ್ದರೂ ನಾನಾ ಥರದಲ್ಲಿ ಜನ್ಮ ಜಾಲಾಡೋದು, ಆಪಾದನೆಗಳನ್ನು ಹೊರಿಸೋದು ರಾಜಕೀಯದಲ್ಲಿ ಮಾಮೂಲು. ಇದೀಗ ಸುಮಲತಾ ಪರವಾಗಿ ಪ್ರಚಾರಕ್ಕಿಳಿದಿರೋ ದರ್ಶನ್ ಕೂಡಾ ಇಂಥಾದ್ದರಿಂದ ಪಾರಾಗಲು ಸಾಧ್ಯವಿಲ್ಲ. ಅವರ ಮೇಲೂ ರಾಜಕೀಯದ ವಿರೋಧಿ ಪಾಳೆಯದವರು ನಾನಾ ರೀತಿಯಲ್ಲಿ ಪ್ರಹಾರ ನಡೆಸುತ್ತಿದ್ದಾರೆ. ದರ್ಶನ್ ಅದನ್ನೆಲ್ಲ ಮುಗುಳುನಗೆಯೊಂದಿಗೇ ಸ್ವೀಕರಿಸುತ್ತಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ರೊಚ್ಚಿಗೆದ್ದಿದ್ದಾರೆ.
ಈ ವಿಚಾರವಾಗಿ ರಾಜಕೀಯ ಸಮರಕ್ಕೆ ಅಭಿಮಾನಿಗಳೂ ಎಂಟ್ರಿ ಕೊಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯಂತೂ ಈ ವಾರ್ ಚಾಲ್ತಿಗೆ ಬಂದಿದೆ. ಇದರಿಂದ ಎಚ್ಚೆತ್ತಿರುವ ದರ್ಶನ್ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ರಾಜಕೀಯದಲ್ಲಿ ಆರೋಪ ಪತ್ಯಾರೋಪ ಮಾಮೂಲು. ನಾನು ಇದಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ. ಅಭಿಮಾನಿಗಳೆಲ್ಲ ಯಾರು ಏನೇ ಅಂದರೂ ಅದಕ್ಕೆ ಪ್ರತಿಕ್ರಿಯಿಸಬೇಡಿ. ಪೋಸ್ಟುಗಳನ್ನು ಹಾಕಬೇಡಿ. ಶಾಂತ ರೀತಿಯಿಂದ ವರ್ತಿಸಿ ಅಂತ ಕಿವಿಮಾತು ಹೇಳಿದ್ದಾರೆ.
No Comment! Be the first one.