ಲೇಟ್ ಆದ್ರೂ ಲೇಟೆಸ್ಟಾಗಿ ಬರುತ್ತಿರುವ ವಿ ರವಿಚಂದ್ರನ್ ಮತ್ತು ಚಂದು ಸೋನಿಯಾ ಅಭಿನಯಿಸುತ್ತಿರುವ ಸಿನಿಮಾ ದಶರಥ. ಟೀಸರ್ ಮೂಲಕವೇ ರವಿಚಂದ್ರನ್ ಅವರ ಬ್ರಹ್ಮ ವಿಷ್ಣು ಮಹೇಶ್ವರ ಸಿನಿಮಾವನ್ನು ನೆನಪಿಸಿರುವ ದಶರಥ ಟ್ರೇಲರ್ ಮೂಲಕ ಅಭಿಮಾನಿಗಳ ಊಹೆಗಳೆಲ್ಲವನ್ನೂ ನಿಜವಾಗಿಸಿದೆ.ರೊಮ್ಯಾಂಟಿಕ್ ಮೂಡ್ ನಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ವಿ ರವಿಚಂದ್ರನ್ ದಶರಥ ಮೂಲಕ ರಗಡ್ ಲುಕ್ ನಲ್ಲಿ ಲಾಯರ್ ಗಿರಿ ತೋರಿಸಲಿದ್ದಾರೆ.

 

ಇನ್ನು ಟ್ರೇಲರ್ ನಲ್ಲಿ ಇವನು ಪ್ರೀತಿಯಿಂದ ಬಂದರೇ ಪ್ರೇಮಲೋಕ ಕಟ್ಟುವವನು, ರಣವೀಳ್ಯ ಕೊಟ್ರೆ ರಣಧೀರ ಆಗುವವನು, ನನ್ನ ಕುಟುಂಬನೇ ನನ್ನ ಪ್ರಪಂಚ. ಅದರ ಮೇಲೆ ಯಾರ ಕಣ್ಣು ಬಿದ್ದರೂ ಸುಟ್ಟು ಹೋಗುತ್ತಾರೆ. ಏಕೆಂದರೆ, ದಶರಥ ಸೂರ್ಯವಂಶದವನು ಎಂಬ ಡೈಲಾಗಿಗೆ ರಣಧೀರನ ಅಭಿಮಾನಿಗಳು ಸುಸ್ತಾಗಿದ್ದಾರೆ. ದಶರಥ ಸಾಮಾಜಿಕ ಕಳಕಳಿಯಿಟ್ಟುಕೊಂಡು ತಯಾರಾಗಿರುವ ಚಿತ್ರವೆಂಬುದು ಈಗಾಗಲೇ ಟೀಸರ್, ಟ್ರೇಲರ್ ಮೂಲಕ ಪ್ರೇಕ್ಷಕರಿಗೆ ಮನದಟ್ಟಾಗಿದ್ದು, ದಶರಥನಿಗಾಗಿ ಅಭಿಮಾನಿಗಳು ವನವಾಸ ಮಾಡಲೂ ಸಿದ್ದರಿದ್ದಾರೆ. ಸದ್ಯದಲ್ಲಿಯೇ ದಶರಥ ಥಿಯೇಟರ್ ಗೆ ಶೋಷಿತ ಹೆಣ್ಣು ಮಕ್ಕಳ ಪ್ರತಿಬಿಂಬವಾಗಿ ಅಬ್ಬರಿಸಲಿದ್ದಾನೆ. ಇನ್ನು ಎಂ.ಎಸ್. ರಮೇಶ್ ನಿರ್ದೇಶಿಸಿರುವ ಈ ಚಿತ್ರವನ್ನು ಅಕ್ಷಯ್ ಮಹೇಶ್ ಕೆ ನಿರ್ಮಾಣ ಮಾಡುತ್ತಿದ್ದಾರೆ.

CG ARUN

ಈ ವಾರ ಸಿಂಗ ತೆರೆಗೆ!

Previous article

ಸೆಕೆಂಡ್ ಮ್ಯಾರೇಜ್ ಗೆ ಅಮಲಾ ರೆಡಿ!

Next article

You may also like

Comments

Leave a reply

Your email address will not be published. Required fields are marked *