ಬಾಲಿವುಡ್ ನ ಸ್ಟಾರ್ ನಟ ಅಕ್ಷಯ್ ಕುಮಾರ್ ನಟನೆಯ ಮಿಷನ್ ಮಂಗಲ್ ಸಿನಿಮಾ ಭಾರತ ಮಟ್ಟಿಗೆ ಬೇಡಿಕೆ ಚಿತ್ರ. ಚಿತ್ರದ ಟ್ರೇಲರ್, ಪೋಸ್ಟರ್ ಈಗಾಗಲೇ ರಿಲೀಸ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಸದ್ಯ ಹೊರಬಿದ್ದ ಸುದ್ದಿಯ ಪ್ರಕಾರ ಮಿಷನ್ ಮಂಗಲ್ ಸಿನಿಮಾದಲ್ಲಿ ಕನ್ನಡ ಬಳಕೆಯಾಗಿದ್ದು, ಬೆಂಗಳೂರಿನ ಆನಂದ್ ರಾವ್ ಸರ್ಕಲ್ ನಲ್ಲಿಯೂ ಚಿತ್ರೀಕರಣ ನಡೆಸಲಾಗಿದೆಯಂತೆ. ಅಲ್ಲದೇ ಹಾಸನದ ಇಸ್ರೋ ಕೇಂದ್ರವನ್ನು ಮರು ಸೃಷ್ಟಿ ಮಾಡಲಾಗಿದೆಯಂತೆ. ಎಲ್ಲಕ್ಕೂ ಮಿಗಿಲಾಗಿ ಈ ಚಿತ್ರದಲ್ಲಿ ಕನ್ನಡದ ಹಿರಿಯ ನಟ ದತ್ತಣ್ಣ ಅಭಿನಯಿಸಿದ್ದಾರೆ. ಈಗಾಗಲೇ ಪೋಸ್ಟರ್ ಗಳಲ್ಲಿಯೂ ದತ್ತಣ‍್ಣ ಕಾಣಿಸಿಕೊಂಡಿದ್ದು, ಬಾಹ್ಯಾಕಾಶ ವಿಜ್ಞಾನಿಯಾಗಿ ಮಿಶನ್ ಮಂಗಲ್ ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಅವರು, ‘ಮಿಷನ್‌ ಮಂಗಲ್‌ ಸಿನಿಮಾದಲ್ಲಿ ಮಂಗಳ ಗ್ರಹಕ್ಕೆ ರಾಕೆಟ್‌ ಉಡಾವಣೆ ಮಾಡುವ ಕಥೆಯನ್ನು ಆಧರಿಸಿದೆ. ಈ ಸಿನಿಮಾದಲ್ಲಿ 8 ಜನ ವಿಜ್ಞಾನಿಗಳ ಪಾತ್ರ ಮುಖ್ಯವಾಗಿದ್ದು, ಅದರಲ್ಲಿ ನಾನು ಒಬ್ಬ ವಿಜ್ಞಾನಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನನ್ನ ಪಾತ್ರದ ಹೆಸರು ಅನಂತ ಅಯ್ಯಂಗಾರ್‌. ಕರ್ನಾಟಕವೇ ಈ ಚಿತ್ರದ ಪ್ರಮುಖ ಮಿಷನ್‌ ಸೆಂಟರ್‌ ಆಗಿರುವುದರಿಂದ ಈ ಚಿತ್ರದಲ್ಲಿ ಕೆಲವು ಸಲ ಕನ್ನಡ ಮಾತನಾಡಿದ್ದೇನೆ. ಈ ಸಿನಿಮಾಗಾಗಿ ಹಾಸನದಲ್ಲಿರುವ ಇಸ್ರೋ ಸೆಂಟರ್‌ನ್ನು ರೀ ಕ್ರಿಯೇಟ್‌ ಮಾಡಲಾಗಿತ್ತು. ಈ ಮೂಲಕ ಹಾಸನ ಬಾಲಿವುಡ್‌ ಸಿನಿಮಾದಲ್ಲಿ ರೀ ಕ್ರಿಯೇಟ್‌ ಆಗಿದೆ ಎನ್ನಬಹುದು’ ಎನ್ನುತ್ತಾರೆ  ದತ್ತಣ್ಣ. ಇದು ಕನ್ನಡಿಗರು ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ. ಕನ್ನಡದ ಕಂಪನ್ನು ಭಾರತದಾದ್ಯಂತ ಹರಡಲು ಹೊರಟಿರುವ ಹಿರಿಯ ನಟ ದತ್ತಣ್ಣ ಅವರಿಗೆ ಎಲ್ಲರೂ ಶುಭಾಶಯಗಳನ್ನು ತಿಳಿಸೋಣ.

CG ARUN

ಮತ್ತೊಮ್ಮೆ ಶುರುವಾಗಲಿದೆ ಕೌನ್ ಬನೇಗಾ ಕರೋಡ್ ಪತಿ!

Previous article

ಪಿ.ವಿ. ಸಿಂಧೂ ಬಯೋಪಿಕ್ ಗೆ ದೀಪಿಕಾ ಪಡುಕೋಣೆ ಆಯ್ಕೆ ಸಾಧ್ಯತೆ!

Next article

You may also like

Comments

Leave a reply

Your email address will not be published. Required fields are marked *