ಅಭಿಮಾನಿಗಳು ತಮಗಿಷ್ಟದ ನಾಯಕ, ನಾಯಕಿ, ವಿಲನ್ನು, ಕಾಮಿಡಿ ಆರ್ಟಿಸ್ಟುಗಳಿಗಾಗಿ ಅಭಿಮಾನಿ ಬಳಗವನ್ನು ಶುರು ಮಾಡುತ್ತಾರೆ. ಆ ಬಳಗದ ಮೂಲಕ ತಮ್ಮಿಂದಾಗುವ ಕೈಲಾದ ಸೇವೆಯನ್ನು ತಮ್ಮ ನೆಚ್ಚಿನ ನಟ-ನಟಿಯರ ಹೆಸರಿನಲ್ಲಿ ತಿಂಗಳಿಗೊಂದರಂತೆ ಮಾಡುತ್ತಲೇ ಇರುತ್ತಾರೆ. ಅಷ್ಟರಮಟ್ಟಿಗೆ ಅಭಿಮಾನಿಗಳು ತೆರೆಯ ಮೇಲೆ ರಂಜಿಸುವ ತನ್ನ ನೆಚ್ಚಿನ ನಟ-ನಟಿಯರನ್ನು ಹೃದಯದಿಂದ ಆರಾಧಿಸುತ್ತಿರುತ್ತಾರೆ. ಪೂಜಿಸುತ್ತಿರುತ್ತಾರೆ. ಕರ್ನಾಟಕದಲ್ಲೂ ಇಂತಹುದೇ ಫ್ಯಾಷನ್ನು ರೂಢಿಸಿಕೊಂಡು ಬಂದಿರುವ ಸಿನಿಮಾ ಪ್ರೇಮಿಗಳು ಡಾ. ರಾಜ್ ಕುಮಾರ್ ಕಾಲದಿಂದ ಹಿಡಿದು ಈಗಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ವರೆವಿಗೂ ಸ್ಟ್ರಿಕ್ಟ್ ಆಗಿ ಫಾಲೋ ಕೂಡಾ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಇವರೆಲ್ಲರಿಗಿಂತಲೂ ಬಹಳ ಡಿಫರೆಂಟಾಗಿ ತನ್ನ ಅಭಿಮಾನವನ್ನು ವ್ಯಕ್ತಪಡಿಸಿದ್ದಾನೆ. ಹೇಗೆ ಗೊತ್ತಾ?

ಸಾಮಾನ್ಯವಾಗಿ ಮದುವೆ ಶುಭಸಮಾರಂಭಗಳಿಗೆ ಪ್ರಿಂಟ್ ಹಾಕಿಸುವ ಪತ್ರಿಕೆಗಳಲ್ಲಿ ಶ್ರೀ ವೆಂಕಟೇಶ್ವರ ಪ್ರಸನ್ನ, ಮಂಜುನಾಥ ಸ್ವಾಮಿ ಪ್ರಸನ್ನ, ಶ್ರೀ ಶಿವಕುಮಾರಸ್ವಾಮೀಜಿಯವರ ಆಶೀರ್ವಾದದೊಂದಿಗೆ ಇತ್ಯಾದಿ ಅವರವರ ಮನೆಯ ದೇವರುಗಳ ಹೆಸರುಗಳನ್ನು ಅಚ್ಚಾಕಿಸಿರುತ್ತಾರೆ. ಇದು ಎಲ್ಲರೂ ಸಾಮಾನ್ಯವಾಗಿ ಕಾಣುವಂತದ್ದೆ. ಆದರೆ ಇಲ್ಲೊಬ್ಬ ಅಭಿಮಾನಿ ಆ ಜಾಗದಲ್ಲಿ ತನ್ನ ನೆಚ್ಚಿನ ನಟ ಹಾಗೂ ಅವರ ಕುಟುಂಬದ ಫೋಟೋವನ್ನು ಹಾಕುವ ಮೂಲಕ ತನ್ನ ಸಿನಿಮಾ ಪ್ರೇಮವನ್ನು ಮೆರೆದಿದ್ದಾನೆ.  ಹೌದು ದಾವಣಗೆರೆಯ ಸಂತೇಬೆನ್ನೂರು ಗ್ರಾಮದ ನಿವಾಸಿ ಅವಿನಾಶ್ ಅವರೇ ಆ ಅಪ್ಪಟ ಡಿ. ಬಾಸ್ ಅಭಿಮಾನಿ. ಅವರ ವಿವಾಹ ಮಹೋತ್ಸವವು ಕಾವ್ಯ ಅವರೊಂದಿಗೆ ಸಂತೇಬೆನ್ನೂರಿನ ಶ್ರೀ ಕಂಠೇಶ್ವರ ಸಮುದಾಯ ಭವನದಲ್ಲಿ ಇದೇ ಜೂನ್ 20ರಂದು ನೆರವೇರಲಿದೆ. 

ವಿಶೇಷವೆಂದರೆ ಅವರ ಲಗ್ನ ಪತ್ರಿಕೆಯಲ್ಲಿ,

ತೂಗುದೀಪ ಪರಿವಾರದ ಆಶೀರ್ವಾದದೊಂದಿಗೆ ಎಂದು ಮುಖ ಪುಟದಲ್ಲಿ ಮುದ್ರಿಸಿ, ತೂಗುದೀಪ್ ಶ್ರೀನಿವಾಸ್, ರೆಬಲ್ ಸ್ಟಾರ್ ಅಂಬರೀಶ್, ದರ್ಶನ್ ತೂಗುದೀಪ್, ದಿನಕರ್ ತೂಗುದೀಪ್ ಹಾಗೂ ದರ್ಶನ್ ಅವರ ಅಕ್ಕನ ಮಗ ಮನೋಜ್ ಅವರ ಪೋಟೋವನ್ನು ಹಾಕಿಸಿದ್ದಾರೆ. ಅಲ್ಲದೇ ಒಳ ಪುಟದಲ್ಲಿ ತಮ್ಮ ಸುಖಾಗಮನ ಬಯಸುವವರು ಕಲಂ ನಲ್ಲಿ ಡಿ ಬ್ರದರ್ಸ್ ಅಂಡ್ ಮನೋಜ್, ತೂಗುದೀಪ ಫ್ಯಾನ್ಸ್ ಕ್ಲಬ್, ಬಾಸ್ ಫ್ಯಾನ್ಸ್ ಕ್ಲಬ್ ಎಂದು ನಮೂದಿಸುವ ಮೂಲಕ ತೂಗುದೀಪ ಕುಟುಂಬದ ಮೇಲೆ ತನ್ನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಕುಟುಂಬದ ಮೇಲೆ ಅವಿನಾಶ್ ಇಟ್ಟಿರುವ ಪ್ರೀತಿಯ ಅಗಾಧತೆ ಈ ಮೂಲಕ ತಿಳಿಯಬಹುದಾಗಿದೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ಅವಿನಾಶ್ ಮತ್ತು ಕಾವ್ಯ ಭಾವಿ ದಂಪತಿಗಳಿಗೆ ಶುಭವಾಗಲಿ.

ಇದೇ ಮೊದಲಲ್ಲ!

ಈ ಹಿಂದೆ ಇಂತಹುದೇ ಅಭಿಮಾನವನ್ನು ಮತ್ತೊಬ್ಬ ಅಭಿಮಾನಿಯೂ ತನ್ನ ವಿವಾಹದ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದರು. ಅಲ್ಲದೇ ತೂಗುದೀಪ ಕುಟುಂಬಕ್ಕೆಂದೇ ಲಗ್ನ ಪತ್ರಿಕೆಯನ್ನು ಮುದ್ರಿಸಿ, ಅವರನ್ನು ವಿಶೇಷವಾಗಿ ಆಹ್ವಾನವನ್ನು ಮಾಡಲಾಗಿತ್ತು. ಯಮುನಾ ಮತ್ತು ರಮೇಶ್ ಬಾಬು ದಂಪತಿಗಳೇ ಆ ಅಪ್ಪಟ ಅಭಿಮಾನಿಗಳು. ಅವರ ವಿವಾಹ ಮಹೋತ್ಸವವು ಕಳೆದ ಮಾರ್ಚ್ 31ಕ್ಕೆ ನೆರವೇರಿತ್ತು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಚಾಣಕ್ಯ ಚಿತ್ರದ ಫಸ್ಟ್ ಲುಕ್ ರಿಲೀಸ್!

Previous article

ರಾಬರ್ಟ್ ಗುಟ್ಟು ರಟ್ಟಾಯ್ತು!

Next article

You may also like

Comments

Leave a reply

Your email address will not be published. Required fields are marked *