ಗೀತ ಗೋವಿಂದಂ ನಂತರ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಾಯಕ, ನಾಯಕಿಯಾಗಿ ಅಭಿನಯಿಸಿರುವ ಮತ್ತೊಂದು ಚಿತ್ರ ಡಿಯರ್ ಕಾಮ್ರೆಡ್. ಈ ಚಿತ್ರ ಜುಲೈ 26ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಕನ್ನಡ ಆವತರಣಿಕೆಯೂ ಅದೇ ದಿನ ತೆರೆ ಕಾಣಲಿದೆ. ಅದೇ ಕಾರಣಕ್ಕೆ ಚಿತ್ರದ ಪ್ರೊಮೋಷನ್ಗಾಗಿ ಚಿತ್ರದ ನಾಯಕ, ನಾಯಕಿ ಕಳೆದ ವಾರ ಬೆಂಗಳೂರಿಗೆ ಆಗಮಿಸಿ ಚಿತ್ರದ ಕುರಿತಂತೆ ಹಲವಾರು ವಿಷಯಗಳನ್ನು ಹಂಚಿಕೊಂಡರು. ಈ ಚಿತ್ರವನ್ನು ಕರ್ನಾಟಕದಲ್ಲಿ ಸ್ವಾಗತ್ ಎಂಟರ್ಪ್ರೈಸಸ್ ಬಿಡುಗಡೆ ಮಾಡುತ್ತಿದೆ.
ವಿಜಯ್ ದೇವರಕೊಂಡ ತೆಲುಗಿನ ಸ್ಟಾರ್ ನಟ. ಅವರ ಸ್ಟಾರ್ ವ್ಯಾಲ್ಯೂ ಕರ್ನಾಟಕದ ತನಕವೂ ಮುಟ್ಟಿದೆ. ಬೆಂಗಳೂರಿಗೆ ಆಗಮಿಸಿದ ಚಿತ್ರದ ನಾಯಕ ವಿಜಯ್ ದೇವರಕೊಂಡ, ನಾಯಕಿ ರಶ್ಮಿಕಾ ಮಂದಣ್ಣ ಅವರ ಜೊತೆ ನಿರ್ದೇಶಕ ಭರತ್ ಕಮ್ಮ ಕೂಡಾ ಬಂದಿದ್ದರು. ಚಿತ್ರದಲ್ಲಿರುವ ಲಿಪ್ ಲಾಕ್ ಸೀನ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ನಟ ವಿಜಯ್ ದೇವರಕೊಂಡ ನೀವೆಲ್ಲ ಅದನ್ನೇ ಯಾಕೆ ಹೈಲೈಟ್ ಮಾಡಿ ಕೇಳುತ್ತೀರಿ, ಚಿತ್ರ ವೈಯುಕ್ತಿಕ ಬದುಕಲ್ಲ, ಅದೊಂದು ಕಥೆ, ಈ ಕಥೆಯಲ್ಲಿ ಹೀಗೊಂದು ಸನ್ನಿವೇಶ ಬರುತ್ತದೆ, ಅದು ಚಿತ್ರದಲ್ಲಿ ಸಹಜವಾಗಿಯೇ ಮೂಡಿಬಂದಿದೆ. ಚಿತ್ರ ನೋಡಿದಾಗ ಇಂತಹ ಸನ್ನಿವೇಶಗಳು ಚಿತ್ರದಲ್ಲಿ ಏಕೆ ಬರುತ್ತವೆ ಎಂಬುದು ಅರ್ಥವಾಗುತ್ತದೆ ಎಂದು ವಿವರಿಸಿದರು. ಡಿಯರ್ ಕಾಮ್ರೆಡ್ ಚಿತ್ರದಲ್ಲಿ ವಿಜಯ್ ನಾಯಕ, ರಶ್ಮಿಕಾ ಮಂದಣ್ಣ ನಾಯಕಿ, ನಾಯಕಿ ಇಲ್ಲಿ ಒಬ್ಬ ಕ್ರಿಕೆಟರ್. ಈ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುವಾಗ ಪ್ರೊಫೆಷನಲ್ ಆಟದಲ್ಲಿರುತ್ತಾರೆ. ಅದಕ್ಕಾಗಿ ರಶ್ಮಿಕಾ ಸಿಕ್ಕಾಪಟ್ಟೆ ಪ್ರಾಕ್ಟೀಸ್ ಮಾಡಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಈಗ ನಟ ಯಶ್ಗೂ ಒಳ್ಳೆ ಸ್ನೇಹಿತ.
No Comment! Be the first one.