ಸೆಲೆಬ್ರೆಟಿಗಳು ಏನ್ ಮಾಡಿದ್ರೂ ನೋಡುಗರಿಗದು ಎಲೆ ಅಡಿಕೆಯೇ. ಕೆಮ್ಮಿದರೂ ಸುದ್ದಿ, ಪಾರ್ಟಿ ಮಾಡಿದರೂ ಸುದ್ದಿ, ಬಿಕಿನಿ ತೊಟ್ಟರೂ ಸುದ್ದಿ, ಬಿಟ್ಟರೂ ಸುದ್ದಿ. ಅಷ್ಟರಮಟ್ಟಿಗೆ ಸೆಲೆಬ್ರೆಟಿಗಳ ವೈಯಕ್ತಿಕ ಬದುಕು ಮೂರಾಬಟ್ಟೆಯಾಗಿರುತ್ತದೆ. ಇನ್ನು ಮದುವೆ ಆದಮೇಲೆ ನಟಿ ಮಣಿಯರಿಗೆ ಅವಕಾಶಗಳು ದಿನೇ ದಿನೇ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಅದೂ ನಿಜವೂ ಆಗಿತ್ತು. ಆದರೆ ದೀಪಿಕಾ ಪಡುಕೋಣೆ ವಿಚಾರದಲ್ಲಿ ಆ ಮಾತು ಸತ್ಯಕ್ಕೆ ದೂರವಾಗಿದೆ. ಯಾಕಂದ್ರೆ ಬಾಲಿವುಡ್ ಬಹು ಬೇಡಿಕೆ ನಟಿಯಾಗಿರುವ ದೀಪಿಕಾಗೆ ಮದುವೆ ಆದ ಮೇಲೆ ಭಿನ್ನ ಭಿನ್ನ ಪಾತ್ರಗಳು ಅರಸಿ ಬರುತ್ತಲೇ ಇವೆ.
https://www.instagram.com/p/Bwer0wljepE/?utm_source=ig_web_copy_link
ಇದೀಗ ದೀಪಿಕಾ ಆಸಿಡ್ ದಾಳಿಗೆ ಒಳಗಾದ ಲಕ್ಷ್ಮಿ ಅಗರ್ ವಾಲ್ ಪಾತ್ರದಲ್ಲಿ ನಟಿಸುತ್ತಿರುವ ಚಪ್ಪಾಕ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಜತೆಗೆ ಬಾರಿ ಹೈಪ್, ಚರ್ಚೆಗೆ ಕಾರಣವಾಗಿರುವುದು ವಿಶೇಷ. ಈ ಮಧ್ಯೆ ಚಿತ್ರದಲ್ಲಿ ದೀಪಿಕಾರ ಲಿಪ್ ಲಾಕ್ ದೃಶ್ಯ ಸೋರಿಕೆಯಾಗಿರುವ ವಿಚಾರ ಬೆಳಕಿಗೆ ಬಂದಿರುವುದಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ವಿಪರೀತ ಸದ್ದು ಮಾಡುತ್ತಿದೆ.
ದೆಹಲಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ನಟ ವಿಕ್ರಾಂತ್ ಮ್ಯಾಸ್ಸೆಯೊಂದಿಗೆ ದೀಪಿಕಾರ ಲಿಪ್ ಲಾಕ್ ದೃಶ್ಯದ ತುಣುಕು ಸೋರಿಕೆಯಾಗಿದೆ. ಕಟ್ಟಡದ ಛಾವಣಿ ಮೇಲೆ ಕೂತು ನಟ ಮ್ಯಾಸ್ಸೆ, ದೀಪಿಕಾಗೆ ಚುಂಬಿಸುತ್ತಿರುವ ದೃಶ್ಯ ಸೆರೆಯಾಗಿದೆ.ಇದು ಸಿನಿಮಾಕ್ಕಾಗಿ ಸೆರೆಹಿಡಿದ ದೃಶ್ಯವಾಗಿದ್ದರೂ ಸಹ ದೀಪಿಕಾ ಅವರು ಯಾರೊಂದಿಗೋ ಲಿಪ್ ಲಾಕ್ ಮಾಡುತ್ತಿದ್ದಾರೆ ಎಂದೂ ನಕಾರಾತ್ಮಕವಾಗಿ ಅವರ ಚಾರಿತ್ರ್ಯ ಹರಣವನ್ನು ಮಾಡಲಾಗುತ್ತಿದೆ ಎನ್ನಲಾಗುತ್ತಿದ್ದರೂ, ಚಪ್ಪಾಕ್ ಚಿತ್ರತಂಡದವರೇ ಈ ರೀತಿ ಪ್ರಚಾರದ ಗಿಮಿಕ್ ಮಾಡಲೆತ್ನಿಸುತ್ತಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಯಾವುದು ನಿಜವೋ! ಯಾವುದು ಸುಳ್ಳೋ! ಭಗವಂತನೇ ಗೊತ್ತು.