ಬಾಲಿವುಡ್ ಡಿಂಪಲ್ ಗರ್ಲ್ ದೀಪಿಕಾ ಪಡುಕೋಣೆ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ ಬಯೋಪಿಕ್ ನಲ್ಲಿ ನಟಿಸುವ ಸಾಧ್ಯತೆ ಇದೆ. ಪಿ.ವಿ. ಸಿಂಧೂ ಜೀವನಾಧಾರಿತ ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಸಿಂಧೂ ಆಗಿ ದೀಪಿಕಾ ಪಡುಕೋಣೆ ನಟಿಸಲಿ ಎಂಬುದು ಬಹು ಭಾಷಾ ನಟ ಸೋನು ಸೂದ್ ಅವರ ಬಯಕೆಯಂತೆ. ಈಗಾಗಲೇ ಫ್ರೀ ಪ್ರೊಡಕ್ಷನ್ ಕೆಲಸ ಮುಗಿದಿದ್ದು, ನಟಿಯ ಹುಡುಕಾಟದಲ್ಲಿ ಚಿತ್ರತಂಡವಿದೆಯಂತೆ. ಇನ್ನು ಸೋನು ಸೂದ್ ಗೋಪಿಚಂದ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯೂ ಇದೆ ಎನ್ನಲಾಗುತ್ತಿದೆ.

“ಕೆಲವೇ ತಿಂಗಳುಗಳಲ್ಲಿ ವಿಶ್ವ ದರ್ಜೆಯ ಬ್ಯಾಡ್ಮಿಂಟನ್ ಆಡಲು ನೀವು ಯಾರಿಗಾದರೂ ಕಲಿಸಲು ಸಾಧ್ಯವಿಲ್ಲ. ಆದರೆ ಪ್ರಧಾನ ಪಾತ್ರಧಾರಿ ಇದನ್ನು ಚೆನ್ನಾಗಿ ಅರಿತುಕೊಳ್ಳಬೇಕಾಗಿದ್ದದ್ದು ಅಗತ್ಯ. ಹಾಗಾಗಿ ಈ ಸವಾಲಿನ ಪಾತ್ರವನ್ನು ನಿರ್ವಹಿಸಲು ದೀಪಿಕಾ ಪಡುಕೋಣೆ ಯಾವಾಗಲೂ ನಮ್ಮ ಮೊದಲ ಆಯ್ಕೆಯಾಗಿದೆ ಮತ್ತು ಅದು ಇಂದಿಗೂ ನಿಜವಾಗಿದೆ ”ಎಂದು ಸೂದ್ ಹೇಳಿದ್ದಾರೆ

CG ARUN

ಧೋನಿ ನಿವೃತ್ತಿ ಕುರಿತಾಗಿ ಲತಾ ಮಂಗೇಶ್ವರ್ ಟ್ವೀಟ್ ವೈರಲ್!

Previous article

ಸದ್ಯದಲ್ಲೇ ರಾಂಧವ ಆಡಿಯೋ ಬಿಡುಗಡೆ!

Next article

You may also like

Comments

Leave a reply

Your email address will not be published. Required fields are marked *

More in cbn