ಸದ್ಯ ಭಾರತ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸಲ್ಮಾನ್ ಖಾನ್ ಈಗಾಗಲೇ ತಮ್ಮ ಮುಂದಿನ ಸಿನಿಮಾ ಕಿಕ್ 2 ಎಂಬುದಾಗಿ ಅನೌನ್ಸ್ ಕೂಡ ಆಗಿದೆ. ಈ ಚಿತ್ರಕ್ಕೆ ನಾಯಕಿ ಯಾರೆನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ದೊರಕಿದೆ. ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ನಾಯಕಿಯನ್ನಾಗಿ ಆರಿಸುವ ಮುನ್ನ ಚಿತ್ರತಂಡ ದೀಪಿಕಾ ಪಡುಕೋಣೆಯವರನ್ನು ಸಂಪರ್ಕಿಸಿತಂತೆ. ಆಗ ಸಿನಿಮಾದ ಕಥೆ ಕೇಳಿ ಇದರಲ್ಲಿ ನಾಯಕಿಗೆ ಅಷ್ಟೇನು ಪ್ರಾಧಾನ್ಯತೆ ಇಲ್ಲವೆಂದು ದೀಪಿಕಾ ರಿಜೆಕ್ಟ್ ಕೂಡ ಮಾಡಿದ್ದರಂತೆ. ದೀಪಿಕಾ ಬದಲಿಗೆ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ನಾಯಕಿಯಾಗಿ ಆರಿಸಿಯೂ ಆಗಿತ್ತು. ಆದರೂ ಚಿತ್ರತಂಡ ದೀಪಿಕಾಳನ್ನು ಎರಡನೇ ಬಾರಿಗೆ ಸಂಪರ್ಕಿಸಿದಾಗ ಒಪ್ಪಿಗೆ ಸಿಕ್ಕಿತಂತೆ.
ಕಿಕ್ 2ನಲ್ಲಿ ದೀಪಿಕಾ ಮುಖ್ಯ ಪಾತ್ರವನ್ನೇ ಮಾಡಲಿದ್ದು, ಸಲ್ಮಾನ್ ಖಾನ್ ಚಿತ್ರಗಳಲ್ಲಿರುವ ಇತರ ನಾಯಕಿಯರಂತೆ ಪಾತ್ರವಿರುವುದಿಲ್ಲವಂತೆ. ಸಲ್ಲೂ ಬಹುತೇಕ ಸಿನಿಮಾಗಳಲ್ಲಿ ನಾಯಕಿರುವ ಮರ ಸುತ್ತುವ ಇಲ್ಲವೇ ನಾಯಕನ ಗುಣಗಾನ ಮಾಡುವ ಪಾತ್ರಗಳನ್ನೇ ಮಾಡುತ್ತಿದ್ದಾರೆ. ಅಂತಹುದೇ ಪಾತ್ರಗಳೇನಾದರೂ ಕಂಡು ಬಂದರೆ ನಾನಂತೂ ಸಿನಿಮಾ ಮಾಡಲಾರೆ ಎಂದು ನೇರವಾಗಿಯೇ ಹೇಳಿದ್ದರು. ಇದಾದ ನಂತರವಷ್ಟೇ ಚಿತ್ರತಂಡ ಎಚ್ಚೆತ್ತು ನಾಯಕಿಗೆ ಆದ್ಯತೆ ಇರುವಂತೆ ಕಥೆಯನ್ನು ಬಿಲ್ಡ್ ಮಾಡಿದೆ. ದೀಪಿಕಾ ಪಾತ್ರವನ್ನು ಮತ್ತಷ್ಟು ಪೋಕಸ್ ಮಾಡುವ ಸಲುವಾಗಿ ನಿರ್ದೇಶಕ ಸಾಜಿದ್ ನಾಡಿಯಾವಾಲಾ ಸ್ಕ್ರಿಪ್ಟ್ ಮರು ತಿದ್ದುತ್ತಿದ್ದಾರೆ. ಈ ನಡುವೆ ದೀಪಿಕಾ ಮೇಘನಾ ಗುಲ್ಜಾರ್ ನಿರ್ದೇಶನದ ಚಪಾಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
No Comment! Be the first one.