ನಮ್ಮ ಜನ ಹೆಂಗದ್ರೆ ಮದುವೆ ವಯಸ್ಸು ತುಂಬಿದ್ರೆ ಇನ್ನೂ ಮದುವೆಯಾಗಿಲ್ವಾ ಅಂತ ಕಿಂಡಲ್ ಮಾತುಗಳನ್ನಾಡುತ್ತಾರೆ. ಇನ್ನು ಮದುವೆಯಾದರಂತೂ ಮುಗಿಯಿತು. ಮದುವೆಯಾಗಿ 6 ತಿಂಗಳು ಕಳೆಯುವಷ್ಟರಲ್ಲಿ ಏನಾದ್ರೂ ಖುಷಿ ವಿಚಾರ ಅಂತ ಕೇಳೋದಕ್ಕೆ ಪ್ರಾರಂಭಿಸುತ್ತಾರೆ. ಇಲ್ಲ ಅಂತೇನಾದ್ರೂ ಹೇಳಿದ್ರೆ ಮುಗಿಯಿತು.. ಅರೇ.. ಇನ್ನೂ ಮಗುನೇ ಇಲ್ವಂತೆ ಅನ್ನೋ ವಿಚಾರವನ್ನೇ ಬಣ್ಣ ಕಟ್ಟಿ ಸಂಬಂಧಗಳೇ ಹಾಳಾಗಿ ಹೋಗುವಂತೆ ಮಾಡಿಬಿಡುತ್ತಾರೆ. ಹೇಳಿಕೊಳ್ಳುವುದಕ್ಕೆ ಮಾತ್ರ ನಮಗೆ ಸ್ವಾತಂತ್ರ್ಯ ಬಂದಿದೆ. ಮೂಲಭೂತ ಹಕ್ಕುಗಳಿವೆ. ಆದರೆ ಅವ್ಯಾವುದಕ್ಕೂ ತಕ್ಕುದಾದ ಮೌಲ್ಯಗಳೇ ಇಲ್ಲ ಎನ್ನುವಂತೆ ಮಾಡಿಬಿಡುತ್ತಾರೆ.
ದೀಪಿಕಾ ಪಡುಕೋಣೆ ವಿಚಾರದಲ್ಲಿಯೂ ಇದೆ ಆಗಿದ್ದು. ಯಾವುದೇ ಅಧಿಕೃತ ಮಾಹಿತಿಯನ್ನು ಪಡೆಯದೇ ದೀಪಿಕಾ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬಿತ್ತರವಾಗುತ್ತಿತ್ತು. ಜೊತೆಗೆ ದಿಪ್ಪಿ ಹೊಟ್ಟೆ ಉಬ್ಬಿರುವ ಫೋಟೋವೊಂದು ವೈರಲ್ ಆಗಿದೆ. ಆದ್ರೆ ಈ ಸುದ್ದಿಗೆ ಸಿಟ್ಟಾಗಿರುವ ದಿಪ್ಪಿ ಸಂದರ್ಶನವೊಂದರಲ್ಲಿ “ನಾನಿನ್ನೂ ಗರ್ಭಿಣಿಯಾಗಿಲ್ಲ. ಅದು ಯಾವಾಗ ಆಗಬೇಕೋ ಆಗ ಆಗುತ್ತದೆ. ಹಾಗಂತ ಮದುವೆಯಾದವರನ್ನು ಮಕ್ಕಳ ಬಗ್ಗೆ ಕೇಳಿ ಅವರಿಗೆ ಕಿರಿಕಿರಿ ಯಾಕೆ ನೀಡುತ್ತೀರ? ಇದು ದೊಡ್ಡ ತಪ್ಪು. ಅದು ಅವರವರ ವೈಯಕ್ತಿಕ ವಿಚಾರ. ಜೋಡಿಯೊಂದರ ಬಗ್ಗೆ ಆ ರೀತಿ ಒತ್ತಡ ತರುವುದು ತರವಲ್ಲ” ಎಂದಿದ್ದಾರೆ. ಕನ್ನಡದ ಕುವರಿ ದೀಪಿಕಾ ಪಡುಕೋಣೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರನ್ನು ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಮದುವೆಯಾಗಿದ್ದರು. ಸದ್ಯಕ್ಕೆ ದಿಪೀಕಾ ‘ಛಪಕ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
No Comment! Be the first one.