ಡೆಮೊ ಪೀಸ್ ಅರ್ಜುನ್ ರಾಮು ಅವರಿಗೆ ಬೇರೆಯದ್ದೇ ರೀತಿಯಲ್ಲಿ ಕಮರ್ಷಿಯಲ್ ವ್ಯಾಲ್ಯೂ ತಂದುಕೊಡಲಿದೆ ಅನ್ನೋದಕ್ಕೆ ‘ಡಾರ್ಲಿಂಗ್ ಹಾಡೊಂದು ಉದಾಹರಣೆ ಸಾಕು. ಯಾಕೆಂದರೆ ಸ್ವತಃ ಪುನೀತ್ ರಾಜ್ ಕುಮಾರ್ ಈ ಹಾಡನ್ನು ಅಪಾರವಾಗಿ ಮೆಚ್ಚಿದ್ದಾರೆ!
ಪಂಚತಂತ್ರದ ಹುಡುಗಿ ಸೋನಲ್ ಮಂಟೆರೋ ನಟಿಸುತ್ತಿರುವ ಮತ್ತೊಂದು ಚಿತ್ರ ‘ಡಿಮೊ ಪೀಸ್. ಭ್ರಹ್ಮಗಂಟು ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಭರತ್ ಈ ಚಿತ್ರದ ಮೂಲಕ ನಾಯಕನಟನಾಗಿ ಲಾಂಚ್ ಆಗುತ್ತಿದ್ದಾರೆ. ಇನ್ನೇನು ಬಿಡುಗಡೆಗೆ ತಯಾರಿರುವ ಈ ಚಿತ್ರವನ್ನು ನಿರ್ಮಿಸಿರುವುದು ನಟಿ ಸ್ಪರ್ಶ ರೇಖಾ. ಡೆಮೊ ಪೀಸ್ ಚಿತ್ರದ ಲಿರಿಕಲ್ ವಿಡಿಯೋ ಈಗ ಬಿಡುಗಡೆಯಾಗಿದೆ.
ಸಂಜಿತ್ ಹೆಗ್ಡೆ ಹಾಡಿರುವ, ನಾಗಾರ್ಜುನ ಶರ್ಮ ಬರೆದಿರುವ ‘ಡಾರ್ಲಿಂಗು ನೀನು ಮುಂದೆ ಬಂದೆ… ಗ್ಯಾಪ್ ನಲ್ಲೇ ಹಾಗೆ ಬಿದ್ದು ಹೋದೆ… ಎನ್ನುವ ಹಾಡಿನ ಲಿರಿಕಲ್ ವಿಡಿಯೋವನ್ನು ಚಿತ್ರತಂಡ ಮೊದಲಿಗೆ ಬಿಡುಗಡೆ ಮಾಡಿದೆ. ಪಿ.ಆರ್.ಕೆ. ಯೂ ಟ್ಯೂಬ್ ಚಾನೆಲ್ಲಿನಲ್ಲಿ ರಿಲೀಸಾಗಿರುವ ಈ ಹಾಡು ಕಡಿಮೆ ಅವಧಿಯಲ್ಲಿ ಹೆಚ್ಚು ಟಾಕ್ ಕ್ರಿಯೇಟ್ ಮಾಡಿದೆ. ಹಿಂದೆ ಯೋಗರಾಜ ಭಟ್ಟರ ನಿರ್ದೇಶನದಲ್ಲಿ ಬಂದಿದ್ದ ಪಂಚತಂತ್ರ ಸಿನಿಮಾದಲ್ಲಿ ಇದೇ ಸೋನಲ್ ಮಂಟೆರೋ ಭಾಗಿಯಾಗಿದ್ದ ‘ಶೃಂಗಾರದ ಹೊಂಗೇಮರ ಹೂ ಬಿಟ್ಟಿದೆ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈಗ ‘ಡೆಮೊ ಪೀಸ್ ಸರದಿ. ಡಾರ್ಲಿಂಗ್ ಹಾಡಿಗೆ ಜನ ಗ್ಯಾಪಲ್ಲಿ ಮನಸೋತಿದ್ದಾರೆ!
ಅರ್ಜುನ್ ರಾಮು ಸಂಗೀತ ನೀಡಿರುವ ಈ ಚೆಂದದ ಹಾಡಿಗೆ ಮದನ್ ಹರಿಣಿ ಕೊರಿಯೋಗ್ರಫಿ ಮಾಡಿದ್ದಾರೆ. ಸಂಜಿತ್ ಹೆಗಡೆ ಹಾಡಿರುವ ಶೈಲಿಯೇ ಜನರನ್ನು ಮೋಡಿಮಾಡುವಂತಿದೆ. ಕನ್ನಡ ಚಿತ್ರರಂಗದ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿ ಅನುಭವ ಪಡೆದಿರುವ ವಿವೇಕ್ ನಿರ್ದೇಶನದ ಚೊಚ್ಚಲ ಚಿತ್ರ ‘ಡೆಮೊ ಪೀಸ್. ಬಹುಮುಖ ಪ್ರತಿಭೆ ಚಕ್ರವರ್ತಿ ಚಂದ್ರಚೂಡ್ ಈ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಲಿದ್ದಾರೆ.
ಸದ್ಯಕ್ಕೆ ರಿಲೀಸ್ ಆಗಿರುವ ಒಂದು ಹಾಡು ಎಲ್ಲರನ್ನೂ ಮೆಚ್ಚಿಸಿದೆ. ಇನ್ನು ಉಳಿದಿರುವ ಹಾಡುಗಳು ಬೇರೆ ಬೇರೆ ವೆರೈಟಿಯಲ್ಲಿದೆ ಅನ್ನೋದು ಸಂಗೀತ ನಿರ್ದೇಶಕ ಅರ್ಜುನ್ ರಾಮು ಅಭಿಪ್ರಾಯ. ಅರ್ಜುನ್ ರಾಮು ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಸಂಗೀತ ನೀಡಿ ಹೆಸರು ಮಾಡುತ್ತಿದ್ದಾರೆ. ಹುಲಿರಾಯ ಸಿನಿಮಾಗೆ ಅರ್ಜುನ್ ರಾಮ್ ನೀಡಿದ್ದ ಮ್ಯೂಸಿಕ್ಕು ಜನ ಯಾವತ್ತಿಗೂ ಗುನುಗುವಂತಿದೆ. ಇತ್ತೀಚೆಗಷ್ಟೇ ನನ್ನ ಪ್ರಕಾರ ಚಿತ್ರಕ್ಕೂ ಅರ್ಜುನ್ ರಾಮು ಸಂಗೀತ ನೀಡಿದ್ದರು. ಈಗ ಡೆಮೊ ಪೀಸ್ ಅರ್ಜುನ್ ರಾಮು ಅವರಿಗೆ ಬೇರೆಯದ್ದೇ ರೀತಿಯಲ್ಲಿ ಕಮರ್ಷಿಯಲ್ ವ್ಯಾಲ್ಯೂ ತಂದುಕೊಡಲಿದೆ ಅನ್ನೋದಕ್ಕೆ ‘ಡಾರ್ಲಿಂಗ್ ಹಾಡೊಂದು ಉದಾಹರಣೆ ಸಾಕು. ಯಾಕೆಂದರೆ ಸ್ವತಃ ಪುನೀತ್ ರಾಜ್ ಕುಮಾರ್ ಈ ಹಾಡನ್ನು ಅಪಾರವಾಗಿ ಮೆಚ್ಚಿದ್ದಾರೆ!