ಮಮ್ಮಿ ಸೇವ್ ನಂತರ ಫಾರ್ಮ್ ನಲ್ಲಿರುವ ಪ್ರಿಯಾಂಕ ಉಪೇಂದ್ರ ಅದೇ ಟೀಮಿನ ಜತೆಯಾಗಿ ದೇವಕಿ ಸಿನಿಮಾದಲ್ಲಿ ನಟಿಸುತ್ತಿರುವುದು ಹೊಸ ವಿಚಾರವೇನಲ್ಲ. ಈಗಾಗಲೇ ಟೈಟಲ್ ನಿಂದ ಹಿಡಿದು ಸಾಕಷ್ಟು ವಿಚಾರಗಳಿಗೆ ಸುದ್ದಿಯಲ್ಲಿರುವ ದೇವಕಿ ಸಿನಿಮಾದಲ್ಲಿ ಉಪೇಂದ್ರ ಮಗಳು ಚೊಚ್ಚಲ ಬಾರಿಗೆ ನಟಿಸುತ್ತಿರುವುದು ವಿಶೇಷ. ಹೊಸ ವಿಚಾರ ಏನಂದ್ರೆ ಹಿಂದಿಯ ನವ ನಟನೊಬ್ಬ ದೇವಕಿ ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಡುತ್ತಿದ್ದಾರಂತೆ. ಹೌದು ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಮೂಡಿಬಂದಿದ್ದ ದಿ ಅಟ್ಯಾಕ್ಸ್ 26/11 ಚಿತ್ರದಲ್ಲಿ ಕಸಬ್ ಪಾತ್ರ ಮಾಡಿದ್ದ ಸಂಜೀವ್ ಜೈಸ್ವಾಲ್ ದೇವಕಿ ಚಿತ್ರದಲ್ಲಿ ನಟಿಸಲಿದ್ದಾರೆ. ಕಿರುತೆರೆಯಲ್ಲಿ ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಸಿನಿಯಾನ ಆರಂಭಿಸಿದ್ದ ಸಂಜೀವ್ ಜೈ ಸ್ವಾಲ್ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟರಲ್ಲೊಬ್ಬರಾಗಿದ್ದಾರೆ.
ಚಿತ್ರದಲ್ಲಿ ಉಗ್ರರ ಪೈಕಿ ಸಿಕ್ಕ ಏಕೈಕ ವ್ಯಕ್ತಿ ಅಜ್ಮಲ್ ಕಸಬ್ನ ಪಡಿಯಚ್ಚಂತಿರುವ ಸಂಜೀವ್ ಜೈಸ್ವಾಲ್ ಅಭಿನಯ ಪಿಕ್ಚರ್ ಪರ್ಫೆಕ್ಟ್ ಆಗಿ ಮೂಡಿಬಂದಿತ್ತು. ಅಜ್ಮಲ್ನಲ್ಲಿದ್ದ ಕ್ರೌರ್ಯತೆ, ನಿರ್ದಾಕ್ಷಿಣ್ಯತೆ, ಹೇಡಿತನವನ್ನು ಸಂಜೀವ್ ಜೈಸ್ವಾಲ್ ಅತ್ಯಂತ ಪರಿಣಾಮಕಾರಿಯಾಗಿ ಅಭಿನಯಿಸಿ ನಿರ್ದೇಶಕರಿಂದ ಶಹಬ್ಬಾಸ್ ಗಿರಿಯನ್ನು ಪಡೆದಿದ್ದರು. ಇನ್ನು ದೇವಕಿಯ ಇಡೀ ಕಥೆ ಉತ್ತರಭಾರತದಲ್ಲಿ ನಡೆಯಲಿದ್ದು ಅದೇ ಫೀಲ್ ಕೊಡೋ ನಟನ ಅವಶ್ಯಕತೆಯಿರುವುದರಿಂದ ಸಂಜೀವ್ ಜೈಸ್ವಾಲ್ ಅವರನ್ನು ಸೆಲೆಕ್ಟ್ ಮಾಡಲಾಗಿದೆ ಎನ್ನುತ್ತಾರೆ ದೇವಕಿ ನಿರ್ದೇಶಕ ಲೋಹಿತ್.
No Comment! Be the first one.