ಪ್ರಿಯಾಂಕ ಉಪೇಂದ್ರ ಮತ್ತು ಮಮ್ಮಿ ಖ್ಯಾತಿಯ ಲೋಹಿತ್ ಕಾಂಬಿನೇಷನ್ನಿನ ಹೊಸ ಸಿನಿಮಾ ದೇವಕಿ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ರಿಲೀಸ್ ಗೆ ರೆಡಿಯಾಗಿರುವ ದೇವಕಿ ಜುಲೈ 5ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಚೊಚ್ಚಲ ಬಾರಿಗೆ ಉಪೇಂದ್ರ ಪುತ್ರಿ ಐಶ್ವರ್ಯ ತಾಯಿಯೊಂದಿಗೆ ಅಭಿನಯಿಸಲಿದ್ದಾರೆ. ಚೈಲ್ಡ್ ಟ್ರಾಕಿಂಗ್ ಮಾಫಿಯಾದ ಮೇಲೆ ದೇವಕಿ ಸಿನಿಮಾ ಸಾಗಲಿದೆ.

ಇತ್ತೀಚಿಗಷ್ಟೇ ದೇವಕಿ ಸೆನ್ಸಾರ್ ಕೂಡಾ ಮುಗಿಸಿಕೊಂಡಿದ್ದು ಯಾವುದೇ ಕಟ್ಟು ಮ್ಯೂಟ್ ಇಲ್ಲದೇ ಯು/ಎ ಪ್ರಮಾಣ ಪತ್ರವನ್ನು ಪಡೆದಿದೆ. ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಮತ್ತು ಐಶ್ವರ್ಯಾ ಉಪೇಂದ್ರ ತಾಯಿ ಮಗಳಾಗಿ ನಟಿಸಿದ್ದಾರೆ. ಇನ್ನು ಪೊಲೀಸ್ ಪಾತ್ರದಲ್ಲಿ ಕಿಶೋರ್ ನಟಿಸಿದ್ದಾರೆ. ವೇಣು ಛಾಯಾಗ್ರಹಣ, ಸಿ ರವಿಚಂದ್ರನ್ ಸಂಕಲನ, ನೊಬಿನ್ ಪೌಲ್ ಸಂಗೀತ ಈ ಚಿತ್ರಕ್ಕಿದೆ. ಇತ್ತೀಚಿಗಷ್ಟೇ ದೇವಕಿ ಟ್ರೇಲರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿತ್ತು.

Arun Kumar

ಅಮೀರ್ ಮಗಳು ಇರಾ ಮತ್ತು ಮಿಶಾಲ್ ಡೇಟಿಂಗ್!

Previous article

ಲಾರ್ಡ್ಸ್ ಪಂದ್ಯದಲ್ಲಿ ವಿಜಯಿಯಾದ ಸುದೀಪ್ ಅಂಡ್ ಟೀಮ್!

Next article

You may also like

Comments

Leave a reply

Your email address will not be published. Required fields are marked *