ತಾನು ಕಲ್ಪಿಸಿಕೊಂಡ ದೃಶ್ಯ ಹೀಗೇ ಬರಬೇಕು ಎಂದು ಹಠ ಹಿಡಿದ ನಿರ್ದೇಶಕ, ಎಷ್ಟೇ ಕಷ್ಟ ಆದರೂ ಸರಿ ನಿರ್ದೇಶಕನ ಕನಸಿನಂತೆಯೇ ನಟಿಸಬೇಕು ಎಂದು ಪಣ ತೊಟ್ಟ ಕಲಾವಿದೆ – ಈ ಇಬ್ಬರೂ ಒಟ್ಟು ಸೇರಿದರೆ ಏನಾಗಬಹುದು? ಎಂಥಾ ಗುಣಮಟ್ಟದ ಸಿನಿಮಾ ಮೂಡಿಬರಬಹುದು ಅನ್ನೋದಕ್ಕೆ ‘ದೇವಕಿ’ ಅನ್ನೋ ಸಿನಿಮಾ ನಿದರ್ಶನವಾಗಿ ನಿಂತಿದೆ.

ಮಮ್ಮಿ ಸಿನಿಮಾದ ಮೂಲಕ ಕಿರಿಯ ವಯಸ್ಸಿನ ನಿರ್ದೇಶಕ ಎನಿಸಿಕೊಂಡವರು ಲೋಹಿತ್. ವಯಸ್ಸು ಕಿರಿದಾದರೇನು? ನಿರ್ದೇಶಿಸಿದ ಮೊದಲ ಸಿನಿಮಾದಲ್ಲೇ ಪಳಗಿದ ಕಸುಬುದಾರನಂತೆ ಸಿನಿಮಾ ಕಟ್ಟಿಕೊಟ್ಟಿದ್ದವರು ಲೋಹಿತ್. ಈಗ ಲೋಹಿತ್ ನಿರ್ದೇಶನದ ಎರಡನೇ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.

ವಿ಼ಶೇಷವೆಂದರೆ ‘ದೇವಕಿ’ ಪ್ರಿಯಾಂಕಾ ಉಪೇಂದ್ರ ಮತ್ತು ಲೋಹಿತ್ ಕಾಂಬಿನೇಷನ್ನಿನ ಎರಡನೇ ಚಿತ್ರವೂ ಹೌದು. ಆರಂಭದಲ್ಲಿ ಈ ಸಿನಿಮಾಗೆ ಹೌರಾ ಬ್ರಿಡ್ಜ್ ಅನ್ನೋ ಹೆಸರಿತ್ತು. ದೇವಕಿ ಟೈಟಲ್ ಹೆಚ್ಚು ಸೂಕ್ತ ಅನ್ನೋ ಕಾರಣಕ್ಕೆ ಶೀರ್ಷಿಕೆ ಬದಲಿಸಲಾಗಿತ್ತು.
ದೇವಕಿ ಸಿನಿಮಾದ ಪ್ರಮುಖವಾದ್ದೊಂದು ದೃಶ್ಯಕ್ಕೆ ಕಸದ ರಾಶಿಯ ಮಧ್ಯೆ ಪ್ರಿಯಾಂಕಾ ಉಪೇಂದ್ರ ಓಡಾಡುತ್ತಾ ನಟಿಸಬೇಕಿತ್ತು. ಬೇರೆ ಯಾರೇ ನಟಿಯಾಗಿದ್ದರೂ ಕೃತಕವಾದ ತ್ಯಾಜ್ಯ ಬಳಸಿ ಎನ್ನುತ್ತಿದ್ದರೋ ಏನೋ? ಆದರೆ ಪ್ರಿಯಾಂಕಾ ಮೇಡಮ್ಮು ಒಂದಿಷ್ಟೂ ಅಸಹ್ಯ ಪಟ್ಟುಕೊಳ್ಳದೇ, ಕೆಟ್ಟ ದುರ್ವಾಸನೆ ಬೀರುತ್ತಿದ್ದ ರಾಶಿರಾಶಿ ಕಸದ ನಡುವೆ ಪಾತ್ರಪ್ರವೇಶಿಸಿ ಮನೋಜ್ಞವಾಗಿ ಅಭಿನಯಿಸಿದ್ದರು. ಇಷ್ಟು ಶ್ರಮದ ಪ್ರತಿಫಲವೆನ್ನುವಂತೆ ದೃಶ್ಯ ತೀರಾ ನೈಜವಾಗಿ ಮೂಡಿಬಂದಿದೆ. ಸಿನಿಮಾ ಅನ್ನೋದು ಕನಸು ಮತ್ತು ಶ್ರಮ ಸಮಪ್ರಮಾಣದಲ್ಲಿ ಸೇರಿದಾಗ ಮಾತ್ರ ಕಳೆಗಟ್ಟುವಂಥಾದ್ದು. ದೇವಕಿಯಲ್ಲಿ ಅದು ಸಾಧ್ಯವಾಗಿದೆ. ಬರುವ ಜುಲೈ 5ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಮಿಸ್ ಮಾಡದೇ ಹೋಗಿ ನೋಡಿ…

CG ARUN

ರುಸ್ತುಂ ಬಗ್ಗೆ ಶಿವಣ್ಣ ಏನಂದ್ರು ಗೊತ್ತಾ?

Previous article

ಫ್ಯಾನ್ – ಇದು ಅಭಿಮಾನಿಯ ಅಭಿಮಾನದ ಕಥೆ!

Next article

You may also like

Comments

Leave a reply

Your email address will not be published. Required fields are marked *