ಈಗಾಗಲೇ ತನ್ನ ವಿಭಿನ್ನ ಮೇಕಿಂಗ್, ಟೀಸರ್ ಮೂಲಕ ಒಂದು ಮಟ್ಟಿನ ಹೈಪ್ ಕ್ರಿಯೇಟ್ ಮಾಡಿರುವ ದೇವತಿ ಸಿನಿಮಾ ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರವನ್ನೇ ಸರಿಗಟ್ಟಿದೆ. ಹೌದು ಐಎಂಡಿಬಿ ಪಟ್ಟಿಯಲ್ಲಿ ಸದ್ಯ ಕನ್ನಡದ ದೇವಕಿ ಸಿನಿಮಾ 2ನಧ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ಆಂಟಿಸಿಪೇಟೆಡ್ ಸಿನಿಮಾಗಳ ಪಟ್ಟಿಯಲ್ಲಿ ದೇವಕಿ ಎರಡನೇ ಸ್ಥಾನದಲ್ಲಿದೆ. ಸಲ್ಮಾನ್ ಖಾನ್ ನಟನೆಯ ಭಾರತ್ 4ನೇ ಸ್ಥಾನದಲ್ಲಿದೆ. ಮೊದಲ ಸ್ಥಾನವನ್ನು ಹೇ ಹೈ ಇಂಡಿಯಾ ಕಬಳಿಸಿದೆ.

ಮಹಿಳಾ ಪ್ರಧಾನ ಸಿನಿಮಾವಾಗಿದ್ದರೂ ದೇವಕಿ ಯಾವ ವಿಚಾರದಲ್ಲಿಯೂ ರಾಜಿಯಾಗುತ್ತಿಲ್ಲ. ಈ ಹಿಂದೆ ಎನ್ ಆರ್ ಐ ಡಿಸ್ಟ್ರಿಬ್ಯೂಷನ್ ಅಗಿ ಸಿನಿಮಾ ಹುಬ್ಬೇರಿಸಿತ್ತು. ಜೊತೆಗೆ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ನಲ್ಲಿ ಟೆಲಿಕಾಸ್ಟ್ ಆದ ಮೊದಲ ಮೇಕಿಂಗ್ ವಿಡಿಯೋ ದೇವಕಿ ಸಿನಿಮಾದಾಗಿತ್ತು. ಅಂದಹಾಗೆ ದೇವಕಿ ಸಿನಿಮಾ ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿದ್ದು, ಫೋಸ್ಟ್ ಪ್ರೊಡಕ್ಷನ್ ಕೆಲಸಗಳು ಸದ್ದಿಲ್ಲದೇ ನಡೆಯುತ್ತಿದೆ. ದೇವಕಿಯಾಗಿ ಪ್ರಿಯಾಂಕ ಉಪೇಂದ್ರ ಅಭಿನಯಿಸುತ್ತಿದ್ದು, ಚೊಚ್ಚಲ ಬಾರಿಗೆ ಉಪೇಂದ್ರ ಪುತ್ರಿ ಐಶ್ವರ್ಯ ಕೂಡ ಪ್ರಿಯಾಂಕ ಜತೆಯಾಗಿರುವುದು ವಿಶೇಷವಾಗಿದೆ. ಮಮ್ಮಿ ಸಿನಿಮಾದ ಬಳಿಕ ನಿರ್ದೇಶಕ ಲೋಹಿತ್ ಹೆಚ್ ಮನು ಅವರು ದೇವಕಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ದೇವಕಿಗೆ ಹೌರಾ ಬ್ರಿಡ್ಜ್ ಎಂದೂ ಹೆಸರಿಡಲಾಗಿತ್ತು. ಕಾರಣಾಂತರಗಳಿಂದ ಹೆಸರು ಬದಲಿಸಲಾಗಿದೆ.

 

 

 

CG ARUN

ಡೋರಿಸ್ ಡೇ ವಿಧಿವಶ!

Previous article

ಕಮಲದ ಕೈ ಹಿಡಿಯಲಿರುವ ಕೀರ್ತಿ ಸುರೇಶ್!

Next article

You may also like

Comments

Leave a reply

Your email address will not be published. Required fields are marked *