ಜಗತ್ತಿನ ಪ್ರಮುಖ ಸಿನಿಮೋತ್ಸವಗಳಲ್ಲಿ ಕಾನ್ ಚಿತ್ರೋತ್ಸವವು ಒಂದು. ಫ್ರಾನ್ಸ್ ನಲ್ಲಿ ಪ್ರತಿ ವರ್ಷ ನಡೆಯುವ ಈ ಚಿತ್ರೋತ್ಸವಕ್ಕೆ ಪ್ರಪಂಚದ ಹಲವಾರು ಸಿನಿ ಪ್ರೇಮಿಗಳು ಪಾಲ್ಗೊಳ್ಳುತ್ತಾರೆ. ಈಗಾಗಲೇ ಕಾನ್ ಫಿಲ್ಮ್ ಫೆಸ್ಟಿವಲ್ ಪ್ರಾರಂಭವಾಗಿದ್ದು ಮೇ 14ರಿಂದ ಮೇ 25ರವರೆಗೆ ನಡೆಯಲಿದೆ.
ಪ್ರತಿಯೊಬ್ಬ ಸಿನಿಮಾ ನಿರ್ದೇಶಕನಿಗೂ ತನ್ನ ಸಿನಿಮಾ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಬೇಕು ಎನ್ನುವ ಕನಸು ಕಂಡಿರುತ್ತಾರೆ. ಆ ಕನಸೀಗ ಕನ್ನಡದ ‘ಡೇವಿಡ್’ ಸಿನಿಮಾ ನಿರ್ದೇಶಕರ ಪಾಲಿಗೆ ನನಸಾಗಿದೆ. ‘ಡೇವಿಡ್’ ಕನ್ನಡದ ಸಿನಿಮಾ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಈಗ ಕಾನ್ ಚಿತ್ರೋತ್ಸವದ ಪರದೆಮೇಲೆ ರಾರಾಜಿಸಲು ಸಜ್ಜಾಗಿದೆ.
ಅಂದಹಾಗೆ ಡೇವಿಡ್ ಸಿನಿಮಾವನ್ನು ಭಾರ್ಗವ್ ಯೋಗಂಭರ್ ನಿರ್ದೇಶನ ಮಾಡಿದ್ದು, ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಡೇವಿಡ್ ಸಿನಿಮಾ ಪ್ರದರ್ಶನವಾಗುತ್ತಿರುವುದು ಇಡೀ ಚಿತ್ರತಂಡದ ಸಂತಸಕ್ಕೆ ಕಾರಣವಾಗಿದೆ. ಡೇವಿಡ್ ನಲ್ಲಿ ಶ್ರೇಯಸ್ ಚಿಂಗ, ಅವಿನಾಶ್ ಯಳಂದೂರು, ರಾಕೇಶ್ ಅಡಿಗ, ಕಾವ್ಯಾ ಶಾ, ರಮೇಶ್ ರಮೇಶ್ ಸೇರಿದಂತೆ ಅನೇಕರು ನಟಿಸಿದ್ದಾರೆ.
No Comment! Be the first one.