ಉರುಗ್ವೆ ಮೂಲದ ಮಾಜಿ ಬ್ಯೂಟಿ ಕ್ವೀನ್ ಫ್ಯಾಟಿಮಿಹ್ ಡೇವಿಲಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. 2006ರ ಭುವನ ಸುಮದರಿ ಮತ್ತು 2008ರಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಫ್ಯಾಟಿ ಮಿಹ್ ಡೇವಿಲಾ ಮೆಕ್ಸಿಕೋದ ಹೋಟೆಲೊಂದರಲ್ಲಿ ಮೃತಪಟ್ಟಿದ್ದಾರೆ.
ಹೋಟೆಲ್ ಬಾತ್ ರೂಮಿನಲ್ಲಿ ಡೇವಿಲಾ ಸತ್ತು ಬಿದ್ದಿದ್ದಾರೆ. ಸತ್ತು ಬಹಳ ಹೊತ್ತಾದ ಮೇಲೆ ಪೊಲೀಸರಿಗೆ ಬೆಳಗಿನ ಜಾವ ತುರ್ತು ಕರೆ ಮಾಡಲಾಗಿದೆ. ತದ ನಂತರ ತನಿಖೆ ನಡೆಸಿರುವ ಪೊಲೀಸರು ಆ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಆಕೆಗಿನ್ನು 31 ವರ್ಷ ವಯಸ್ಸಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದು ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಅವರದ್ದು ಆತ್ಮಹತ್ಯೆಯೋ ಅಲ್ಲ ಕೊಲೆಯೋ ಎಂದು ತನಿಖೆಯಿಂದ ತಿಳಿಯಬೇಕಷ್ಟೇ..!
No Comment! Be the first one.