ಈಗಾಗಲೇ ಸಾಕಷ್ಟು ವಿಚಾರಗಳಿಂದ ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಸುದ್ದಿಯಲ್ಲಿದೆ. ಈ ಮಧ್ಯೆ ಮತ್ತೊಂದು ಸುದ್ದಿಯೂ ಹೊರಬಿದ್ದಿದ್ದು, ಚಿತ್ರದಲ್ಲಿ ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರ ಕಿರಿಯ ಮಗಳ ಜತೆ ಸಲ್ಮಾನ್ ರೊಮ್ಯಾನ್ಸ್ ಮಾಡಲಿದ್ದಾರಂತೆ.

ಯೆಸ್.. ಸಲ್ಮಾನ್‌ ಅವರು ಯುವಕನಾಗಿದ್ದಾಗ ನಡೆಯುವ ಪ್ರೇಮ ಪ್ರಸಂಗದಲ್ಲಿ ಸಾಯಿ ಜೋಡಿಯಾಗಿ ನಟಿಸಲಿದ್ದಾರಂತೆ. ಬಳಿಕ ಮದುವೆಯಾದ ನಂತರದ ಭಾಗದಲ್ಲಿ ‍ಪತ್ನಿ ಪಾತ್ರವನ್ನು ಸೋನಾಕ್ಷಿ ಸಿನ್ಹಾ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಸಲ್ಮಾನ್‌- ಸಾಯಿ ಜೋಡಿಯ ದೃಶ್ಯಗಳ ಚಿತ್ರೀಕರಣ ಈಗಾಗಲೇ ನಡೆಯುತ್ತಿದ್ದು, ಇದರಲ್ಲಿ ರೊಮ್ಯಾಂಟಿಕ್ ಹಾಡು ಕೂಡ ಇರಲಿದೆಯಂತೆ. ದಬಾಂಗ್‌-3, 2020ರ ಡಿಸೆಂಬರ್‌ 20ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಬಳಿಕ ಸಂಜಯ್‌ ಲೀಲಾ ಬನ್ಸಾಲಿ ಅವರ ‘ಇನ್ಶಾ ಅಲ್ಲಾಹ್‌’ ಚಿತ್ರದಲ್ಲಿ ಸಲ್ಮಾನ್‌ ನಟಿಸಲಿದ್ದಾರೆ. ಈ ಹಿಂದೆ ಮಂಜ್ರೇಕರ್‌ ಅವರ ಹಿರಿ ಮಗಳು ಅಶ್ವಮಿ ಅವರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಗಾಳಿ ಸುದ್ದಿ ಹರಡಿತ್ತು.

CG ARUN

ಶೈಲಾಕ್ ನಲ್ಲಿ ಮಮ್ಮುಟ್ಟಿ!

Previous article

ನಭಾ ನಟೇಶ್ ಕೈ ಹಿಡಿದ ಇಸ್ಮಾರ್ಟ್ ಶಂಕರ್!

Next article

You may also like

Comments

Leave a reply

Your email address will not be published. Required fields are marked *