ಈ ಹುಡುಗ ಏನಾದರೊಂದು ಯಡವಟ್ಟು ಮಾಡಿಕೊಳ್ಳುತ್ತಲೇ ಇರತ್ತೆ. ವಯಸ್ಸಿಗೆ ಮೀರಿದ ಬೆಳವಣಿಗೆ, ಅನುಭವದ ಕೊರತೆ ಆಭಾಸಗಳಿಗೆ ಎಡೆ ಮಾಡಿಕೊಡೋದು ಸಹಜ!

ಶಂಕರ್‌ ರಾಮನ್‌ ನಿರ್ದೇಶನದಲ್ಲಿ ವಾಮನ ಎನ್ನುವ ಸಿನಿಮಾ ಆರಂಭವಾಗಿದೆಯಲ್ಲಾ? ಈ ಚಿತ್ರದ ಚಿತ್ರೀಕರಣ ಬೆಂಗಳೂರಿನ ಯಲಹಂಕ ಬಳಿ ನಡೆಯುತ್ತಿತ್ತು. ಫೈಟಿಂಗ್‌ ಸೀನ್‌ ಆಗಿದ್ದರಿಂದ ಧನ್ವೀರನಿಗೆ ರೋಪ್‌ ಕಟ್ಟಲಾಗಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಕಟ್ಟಿದ್ದ ರೋಪ್‌ ಕಳಚಿಕೊಂಡು ಧನ್ವೀರ್‌ ದೊಪ್ಪಂತಾ ಕೆಳಗೆ ಬಿದ್ದಿದ್ದ. ತಕ್ಷಣ ಹತ್ತಿರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯ್ತು. ತೀರಾ ಗಂಭೀರವಲ್ಲದಿದ್ದರೂ ಕೈ ಬೆರಳುಗಳಿಗೆ ಫ್ಯಾಕ್ಚರ್‌ ಆಗಿದೆ. ತಕ್ಷಣಕ್ಕೆ ಅಂತಾ ನೋವು ಕಾಣಿಸಿಕೊಂಡಿರದ ಕಾರಣ ಸ್ವಲ್ಪ ಹೊತ್ತು ರೆಸ್ಟ್‌ ತೆಗೆದುಕೊಂಡು ಮತ್ತೆ ಶೂಟಿಂಗ್‌ ನಲ್ಲಿ ಪಾಲ್ಗೊಂಡಿದ್ದಾರೆ.

ಜಯತೀರ್ಥ ನಿರ್ದೇಶನದಲ್ಲಿ ಧನ್ವೀರ್‌ ನಟಿಸಲಿರುವ  ಕೈವ ಸಿನಿಮಾದ ಶೂಟಿಂಗ್ ಗೆ ಡೇಟ್ ಫಿಕ್ಸ್ ಆಗಿದೆ. ಹೀಗಾಗಿ ಈ ಚಿತ್ರೀಕರಣಕ್ಕೆ ಯಾವುದೇ ತೊಂದರೆ ಆಗಬಾರದು ಅಂತಾ ಧನ್ವೀರ್ ನೋವಿನಲ್ಲೂ ವಾಮನ ಚಿತ್ರೀಕರಣ ಮುಂದುವರೆಸಿದ್ದಾರೆ. ಈಕ್ವಿನಾಕ್ಸ್ ಗೋಬಲ್ ಎಂಟರ್ ಟೈನ್ಮೆಂಟ್ ಪ್ರೊಡಕ್ಷನ್ ನಡಿ ಚೇತನ್ ಕುಮಾರ್ ವಾಮನ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಶೋಕ್ದಾರ ಧನ್ವೀರ್‌ ಸಾಕಷ್ಟು ಎಚ್ಚರ ವಹಿಸಬೇಕು. ಸಿನಿಮಾ ಅಂದರೆ ಬರಿಯ ಅಭಿನಯ, ಅಭಿಮಾನಿಗಳ ಸೃಷ್ಟಿ ಮಾತ್ರವಲ್ಲ. ಇವೆಲ್ಲವನ್ನೂ ಮೀರಿದ ಜವಾಬ್ದಾರಿ ವಹಿಸಬೇಕು. ಬಹುಶಃ ಈ ಎಲ್ಲಾ ಅನುಭವಗಳು ಧನ್ವೀರನಂತಾ ನಟನನ್ನು ಎಚ್ಚರಿಸೋದು ಖಂಡಿತಾ!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕೆ.ಆರ್.ಜಿ ಸ್ಟುಡಿಯೋಸ್ ಚಿತ್ರದಲ್ಲಿ ಡಾಲಿ ಧನಂಜಯ!

Previous article

ಸೂರಿ, ಯೋಗರಾಜ್ ಭಟ್ ಬಳಿ ಪಳಗಿದ ಪ್ರತಿಭೆ…

Next article

You may also like

Comments

Leave a reply

Your email address will not be published.