ಸೂರಿ ನಿರ್ದೇಶನದಲ್ಲಿ ಶಿವಣ್ಣ ನಟಿಸಿದ್ದ ಟಗರು ಸಿನಿಮಾದಲ್ಲಿ ಡಾನ್ ಅಂಕಲ್ ಪಾತ್ರದಲ್ಲಿ ಗಮನ ಸೆಳೆದಿದ್ದ ಮೈಸೂರಿನ ಕಲಾವಿದ ಸಚ್ಚು ಈಗ ಧರಣಿ ಮಂಡಲಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಸಚ್ಚು ಅಂಡರ್ ವರ್ಲ್ಡ್ ಡಾನ್ ಆಗಿ ಅಬ್ಬರಿಸಲಿದ್ದಾರೆ.
ಒಂದು ಸಿನಿಮಾ ಹಿಟ್ ಆಗುತ್ತಿದ್ದಂತೇ, ಆ ಚಿತ್ರದ ಪ್ರಮುಖ ಕಲಾವಿದರು ಒಂದರ ಹಿಂದೊಂದು ಚಿತ್ರಗಳನ್ನು ಒಪ್ಪಿಕೊಂಡು ಮುಗ್ಗರಿಸೋದು ಚಿತ್ರರಂಗದಲ್ಲಿ ಹಿಂದಿನಿಂದಲೂ ನಡೆದುಕೊಂಡುಬಂದಿರುವ ಅಘೋಷಿತ ಸಂಪ್ರದಾಯ. ಮಾರ್ಕೆಟ್ ಕ್ರಿಯೇಟ್ ಆಯ್ತು ಅನ್ನುತ್ತಿದ್ದಂತೇ ಬಂದ ಬಂದ ಅಡ್ವಾನ್ಸುಗಳನ್ನು ದಬದಬ ತುಂಬಿಕೊಂಡು, ಕಥೆಗಳ ಕಡೆ ಗಮನ ಕೊಡದೆ ಅದೆಷ್ಟು ಜನ ಹೀರೋಗಳು ಮಕಾಡೆ ಮಲಗಿದ್ದಾರೋ…!
ಬಹುಶಃ ಇಂಥವಕ್ಕೆಲ್ಲಾ ಆಸ್ಪದ ಕೊಡಬಾರದು ಅನ್ನೋದು ಈ ಹುಡುಗನ ಪ್ಲಾನಿರಬೇಕು. ಗುಳ್ಟೂ ಎನ್ನುವ ಸಿನಿಮಾ ತೆರೆಗೆ ಬಂದು ಕನ್ನಡೇತರ ಪ್ರೇಕ್ಷಕರನ್ನೂ ಕರೆದು ಥೇಟರಿಗೆ ಕೂರಿಸಿತ್ತು. ಆ ಚಿತ್ರದಲ್ಲಿ ತನ್ನ ಸಹಜ ನಟನೆಯ ಮೂಲಕವೇ ಎಲ್ಲರನ್ನೂ ಮೋಡಿ ಮಾಡಿದ್ದವರು ನವೀನ್ ಶಂಕರ್. ಈಗ ನವೀನ್ ಶಂಕರ್ ಕೆಲವೇ ಕಥೆಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಿದ್ದಾರೆ. ಅದರಲ್ಲಿ ಧರಣಿಮಂಡಲ ಮಧ್ಯದೊಳಗೆ ಪ್ರಮುಖವಾದದ್ದು. ಈ ಚಿತ್ರದ ಕಲಾವಿದರ ಪಟ್ಟಿಯಲ್ಲಿ ಮತ್ತೊಬ್ಬರು ಸೇರಿದ್ದಾರೆ. ಸೂರಿ ನಿರ್ದೇಶನದಲ್ಲಿ ಶಿವಣ್ಣ ನಟಿಸಿದ್ದ ಟಗರು ಸಿನಿಮಾದಲ್ಲಿ ಡಾನ್ ಅಂಕಲ್ ಪಾತ್ರದಲ್ಲಿ ಗಮನ ಸೆಳೆದಿದ್ದ ಮೈಸೂರಿನ ಕಲಾವಿದ ಸಚ್ಚು ಈಗ ಧರಣಿ ಮಂಡಲಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಸಚ್ಚು ಅಂಡರ್ ವರ್ಲ್ಡ್ ಡಾನ್ ಆಗಿ ಅಬ್ಬರಿಸಲಿದ್ದಾರೆ.
ಶ್ರೀಧರ್ ಶಿಕಾರಿಪುರ ನಿರ್ದೇಶಿಸುತ್ತಿರುವ ಧರಣಿ ಮಂಡಲ ಮಧ್ಯದೊಳಗೆ ಚಿತ್ರದಲ್ಲಿ ಒಬ್ಬರಿಗೊಬ್ಬರು ಪರಿಚಯವಿಲ್ಲದ ಒಂದಿಷ್ಟು ಪಾತ್ರಗಳ ನಡುವೆ ನಡೆಯುವ ರೋಚಕ ಕಥಾ ಹಂದರವಿದೆ. ಚಿತ್ರಕತೆಯು ಹೈಪರ್ ಲಿಂಕ್ ಶೈಲಿಯಲ್ಲಿರುತ್ತದೆ. ಕ್ರೈಮ್, ಹಾಸ್ಯ, ದುಃಖ, ಪ್ರೀತಿ ಹೀಗೆ ಎಲ್ಲಾ ತರದ ಭಾವನೆಗಳ ಮೇಲೆ ಸಿನಿಮಾ ಸಾಗಲಿದೆ. ಓಂಕಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ವೀರೇಂದ್ರ ಕಂಚನ್, ಪ್ರಶಾಂತ್ , ರಘು ಕುಂದರ್, ಶೇಷಪ್ಪ ಅವರು ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ನವೀನ ಶಂಕರ್, ಐಶಾನಿ ಶೆಟ್ಟಿ, ಯಶ್ ಶೆಟ್ಟಿ, ಸಿದ್ದು ಮೂಲಿಮನಿ , ಒಂಕಾರ್ , ಪ್ರಕಾಶ್ ತುಮ್ಮಿನಾಡ್ , ನಿತೇಶ್ , ಸುಧಾ ಬೆಳವಾಡಿ, ಶಾಂಭವಿ, ಸಿದ್ದರಾಜ್ ಕಲ್ಯಾಣ್ ಕರ್ ಮುಂತಾದವರು ನಟಿಸಿದ್ದಾರೆ.
ಧರಣಿ ಮಂಡಲ ಮಧ್ಯದೊಳಗೆ ಚಿತ್ರದ ತಂತ್ರಜ್ಞರು :
ನಿರ್ದೇಶಕ : ಶ್ರೀಧರ್ ಶಿಕಾರಿಪುರ
ನಿರ್ಮಾಣ : ಬಾಕ್ಸ್ ಆಫಿಸ್ ಸಿನಿ ಕ್ರಿಯೇಷನ್ಸ್
ಛಾಯಾಗ್ರಹಣ : ಕೀರ್ತನ್ ಪೂಜಾರಿ
ಸಂಗೀತ : ರೋಣದ ಬಕ್ಕೇಶ್ & ಕಾರ್ತಿಕ್ ಚೆನ್ನೊಜಿರಾವ್
ಸಂಕಲನ : ಉಜ್ವಲ್ ಗೌಡ