ಮೂಲತಃ ಇಂಜಿನಿಯರ್ ಆದ ವೈ.ಬಿ.ಎನ್.ಸ್ವಾಮಿ ಶಿವು ಅಡ್ಡಾ ಮೂಲಕ ಕನ್ನಡ ಸಿನಿಮಾಗಳ ಪ್ರೊಮೋಷನ್ ಮಾಡುತ್ತಲೇ ಚಿತ್ರರಂಗದ ನಂಟು ಬೆಳೆಸಿಕೊಂಡು ಈಗ  ಸಸ್ಪೆನ್ಸ್, ಥ್ರಿಲ್ಲರ್ ಕಥೆಯ ಧೀರನ್  ಮೂಲಕ ಮೊದಲಬಾರಿಗೆ ನಿರ್ದೇಶನ ಮಾಡಿದ್ದಾರೆ. ಜರ್ನಿಯಲ್ಲಿ ನಡೆಯುವ ಕಳ್ಳ ಪೋಲಿಸ್, ಕಳ್ಳ ಕಳ್ಳ ಹಾಗೂ  ಪೋಲಿಸ್ ಪೋಲಿಸ್ ಆಟ, ಹೀಗೆ ೩ ಡೈಮನ್‌ಷನ್‌ನಲ್ಲಿ  ಧೀರನ್ ಕಥೆ ಹೇಳಿರುವ  ನಿರ್ದೇಶಕರು  ಜೊತೆಗೊಂದು ಸುಂದರವಾದ ಲವ್‌ಸ್ಟೋರಿಯನ್ನು ಇಟ್ಟಿದ್ದಾರೆ. ಇತ್ತೀಚೆಗೆ  ಈ ಚಿತ್ರದ ಫಸ್ಟ್ ಲುಕ್ಕನ್ನು ನಿರ್ದೇಶಕ ಸಿಂಪಲ್‌ಸುನಿ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಸುನಿ, ಇಂಗ್ಲೀಷ್‌ನಲ್ಲಿ ಇದನ್ನು ದಿ ರನ್ ಅನ್ನಬಹುದು. ನಿರ್ದೇಶಕ ಸ್ವಾಮಿ ಹಾಗೂ ನಾನು ಮೊದಲಿಂದಲೂ ಗೆಳೆಯರು, ಆಗ ನಾವೆಲ್ಲ ಸೇರಿ ಸಿನಿಮಾಗಳ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿದ್ದೆವು, ಈಗ ಒಂದೊಳ್ಳೇ ಸಿನಿಮಾ ನಿರ್ದೇಶನ ಮಾಡಿದ್ದಾರೆ ಎಂದು ನೆನಪಿಸಿಕೊಂಡರು. ನಂತರ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನದ  ಜೊತೆಗೆ ನಾಯಕನಾಗಿಯೂ ಅಭಿನಯಿಸಿರುವ ಸ್ವಾಮಿ, ಮಾತನಾಡಿ ನನ್ನ ನಿರ್ದೇಶನದ ಮೊದಲ ಚಿತ್ರವಿದು, ಸುನಿ ನನಗೆ ೧೫ ವರ್ಷದ ಗೆಳೆಯ, ಅವರೇ ಬಂದು ಚಿತ್ರದ ಪೋಸ್ಟರ್  ರಿಲೀಸ್ ಮಾಡಿದ್ದು ಖುಷಿಯಾಗಿದೆ.  ಇದು  ಚಿತ್ರಕಥೆಯ ಮೇಲೆ ನಿಂತಿರುವ ಸಿನಿಮಾ, ಚಿತ್ರಕ್ಕೆ ಮಾಸ್ತಿ ಉತ್ತಮ ಡೈಲಾಗ್‌ಗಳನ್ನು ಬರೆದಿದ್ದಾರೆ.  ೫ ಪಾತ್ರಗಳ ಜರ್ನಿ ಮೂಲಕ ಕಥೆ ಆರಂಭವಾಗಿ, ಇದರಲ್ಲಿ ಯಾರು ಗೆಳೆಯರು, ಯಾರು ವಿಲನ್‌ಗಳು ಎಂಬುದೇ ಗೊತ್ತಾಗುವುದಿಲ್ಲ. ಚಿತ್ರ ನೋಡಿದಮೇಲೆ ಜನ ಸಂಗೀತ, ಛಾಯಾಗ್ರಹಣದ ವಿಶೇಷತೆ ಬಗ್ಗೆ ಖಂಡಿತ ಮಾತನಾಡುತ್ತಾರೆ. ಧೀರನ್ ಒಂದೊಳ್ಳೆ ಸಿನಿಮಾ ಆಗೇಆಗುತ್ತದೆ ಎಂಬ ವಿಶ್ವಾಸವಿದೆ. ಅದಕ್ಕೆ ಕಾರಣ ಕನ್ನಡಿಗರು ಉತ್ತಮ ಸಿನಿಮಾಗಳನ್ನು ಗೆಲ್ಲಿಸುತ್ತಲೇ ಬಂದಿದ್ದಾರೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ನಮ್ಮಚಿತ್ರ ಇಷ್ಟವಾಗುತ್ತದೆ. ನಾವು ಹೊಸಬರಾದರೂ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದೇವೆ. ಈಗಾಗಲೇ ಚಿತ್ರದ ಸೆನ್ಸಾರ್ ಮುಗಿದಿದ್ದು, ಸದ್ಯದಲ್ಲೇ  ಪ್ರೇಕ್ಷಕರ ಮುಂದೆ ಬರುತ್ತೇವೆ’ ಎಂದರು.

ನಂತರ  ಮಿಮಿಕ್ರಿ ದಯಾನಂದ್ ಮಾತನಾಡುತ್ತ, ಈ ಸಿನಿಮಾ ಶುರುವಾದಾಗಿನಿಂದಲೂ ಚಿತ್ರತಂಡದ ಜೊತೆ ಇರುವ ನಾನು  ಚಿತ್ರದಲ್ಲಿ ತಾತನಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ಸಾಕಷ್ಟು ಹೊಸ ಕಲಾವಿದರಿದ್ದು, ಹೊಸಬರು ಬೆಳೆದಾಗ ಇಂಡಸ್ಟಿಯೂ ಬೆಳೆಯುತ್ತೆ.  ಜನ ಥಿಯೇಟರಿಗೆ ಬಂದು ನೋಡಿ ಗೆಲ್ಲಿಸಬೇಕು. ಈ ಸಿನಿಮಾ ಹಿಟ್ ಆದ್ರೆ. ಒಂದಿಷ್ಟು ವಿಲನ್ ಹಾಗೂ ಹೀರೋಗಳು ಇಂಡಸ್ಟಿಗೆ ಬರುತ್ತಾರೆ’ ಎಂದು ಹೇಳಿದರು.

ನಂತರ ಛಾಯಾಗ್ರಾಹಕ ಸಂದೀಪ್ ಹೊನ್ನಾಳಿ ಮಾತನಾಡಿ  ಈ ಚಿತ್ರಕ್ಕೆ ಶೇ.೭೦ರಷ್ಟು ರಾತ್ರಿಯಲ್ಲಿ ಹಾಗೂ ಶೇ. ೩೦ರಷ್ಟು ಹಗಲಲ್ಲಿ  ಶೂಟ್ ಮಾಡಿದ್ದೇವೆ ಎಂದರು. ಮಂಗಳೂರು ಮೂಲದ ನಟಿ ಲಕ್ಷಾಶೆಟ್ಟಿ ಈ ಚಿತ್ರದಲ್ಲಿ  ನಾಯಕಿಯಾಗಿ ಕಾಣಿಸಿಕೊಂಡಿದ್ದು, ಇದು ನನ್ನ ೨ನೇ ಚಿತ್ರ. ಕಥೆಯಲ್ಲಿ ಬರುವ ಚಿಕ್ಕ ಲವ್‌ಸ್ಟೋರಿಯಲ್ಲಿ  ನಾನು ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದರು.  ರಘು ಅವರ ಸಂಕಲನ, ಆರ್.ಎಸ್.ಗಣೇಶ್ ನಾರಾಯಣ್ ಅವರ ಸಂಗೀತ ಈ ಚಿತ್ರಕ್ಕಿದೆ. ಬೆಂಗಳೂರು, ಸಕಲೇಶಪುರ, ಕುಂದಾಪುರ, ಮಂಗಳೂರು, ಹಿರಿಯೂರು, ದಾವಣಗೆರೆ, ಮೈಸೂರು ಮುಂತಾದ ಕಡೆ ಚಿತ್ರದ ಶೂಟಿಂಗ್ ನಡೆಸಲಾಗಿದೆ.  ಚಿತ್ರದ ಇತರೆ ತಾರಾಗಣದಲ್ಲಿ  ಭಾಸ್ಕರ್, ಪ್ರಮೋದ್‌ಶೆಟ್ಟಿ, ರಘು ಪಾಂಡೇಶ್ವರ್, ತೇಜಸ್ವಿನಿ ಪ್ರಕಾಶ್, ವಿದ್ಯಾಮೂರ್ತಿ, ವೀಣಾಸುಂದರ್ ಮುಂತಾದವರಿದ್ದಾರೆ. ಈ  ಚಿತ್ರವನ್ನು ಡಯಾಸ್ ಎಂಟರ್‌ಟೈನ್ಮೆಂಟ್ ಅಡಿಯಲ್ಲಿ ಧೀರನ್ ಸಿನಿ ಸರ್ವೀಸಸ್ ಬ್ಯಾನರ್ ಮೂಲಕ ನಿರ್ಮಿಸಲಾಗಿದೆ. ಚಿತ್ರದ ಹಾಡುಗಳನ್ನು ಚೇತನ್‌ಕುಮಾರ್, ಸಿಂಪಲ್‌ಸುನಿ, ಸ್ವಾಮಿ ಬರೆದಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕಾಶ್ಮೀರ್ ಫೈಲ್ಸ್ ಅಲ್ಲ, ಇದು ದೇಸಿ ಫೈಲ್ಸ್..!

Previous article

ವಿಶೃತ್ ವಿಸ್ತೃತ ಜಗತ್ತು…

Next article

You may also like

Comments

Leave a reply

Your email address will not be published. Required fields are marked *