ಧೂಮ್ ಸರಣಿಯ ಸಿನಿಮಾಗಳು ಈಗಾಗಲೇ ಬಹುದೊಡ್ಡ ಯಶಸ್ಸು ಗಳಿಸಿದೆ. ಗಳಿಕೆ, ಉಳಿಕೆಯ ಲೆಕ್ಕಾಚಾರಗಳು ಬಹಳಷ್ಟಿವೆ. ಈ ಹಿಂದೆ 2013ರಲ್ಲಿ ವಿಜಯ್ ಕೃಷ್ಣಾ ಆಚಾರ್ಯ ಧೂಮ್ ಸರಣಿಯ ಮೂರನೇ ಚಿತ್ರವನ್ನು ನಿರ್ದೇಶಿಸಿದ್ದರು. ಆ ಚಿತ್ರ ನಿರೀಕ್ಷೆಗೂ ಮೀರಿದ ಸಕ್ಸಸ್ ಕಂಡಿತ್ತು. ಸದ್ಯ ಧೂಮ್ 4ರ ಬಗ್ಗೆಯೂ ಬಾಲಿವುಡ್ ನಲ್ಲಿ ಬಿಗ್ ಮಾತುಕತೆಗಳು ನಡೆಯುತ್ತಿವೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಇರಲಿದ್ದಾರೆ! ಅಮೀರ್ ಖಾನ್ ಇರಲಿದ್ದಾರೆ! ಶಾರುಖ್ ಖಾನ್ ಇರಲಿದ್ದಾರೆ! ಇತ್ಯಾದಿ ಗುಸು ಗುಸು ನಡೆಯುತ್ತಿದೆ. ಆ ಪೈಕಿ ಈಗ ಶಾರುಖ್ ಹೆಸರು ಅಂತಿಮವಾಗಿದೆ ಎನ್ನಲಾಗುತ್ತಿದೆ.
‘ಫ್ಯಾನ್’, ‘ಜಬ್ ಹ್ಯಾರಿ ಮೆಟ್ ಸೇಜಲ್’, ‘ಜೀರೋ’ ಸಿನಿಮಾಗಳ ಸರಣಿ ಸೋಲಿನಿಂದ ಕಂಗೆಟ್ಟಿರುವ ಶಾರುಖ್, ಮತ್ತೆ ಕಮ್ ಬ್ಯಾಕ್ ಸಿನಿಮಾಕ್ಕಾಗಿ ಹಾತೊರೆಯುತ್ತಿದ್ದು, ಡಾನ್ ಸರಣಿಯ ಸಿನಿಮಾವನ್ನು ಮಾಡಲಿದ್ದಾರೆ ಎಂಬ ಸುದ್ದಿಯೂ ಇತ್ತು. ಅದ್ಯಾಕೋ ಕೈಗೂಡಲೇ ಇಲ್ಲ. ಆನಂತರ ರಾಕೇಶ್ ಶರ್ಮಾ ಬಯೋಪಿಕ್ ಸಾರೇ ಜಹಾಂಸೇ ಅಚ್ಚಾ ಸಿನಿಮಾವನ್ನು ಒಪ್ಪಿಕೊಂಡು ಕಾರಣಾಂತರಗಳಿಂದ ಹಿಂದೆ ಸರಿದರು.ಸತತ ಸೋಲಿನ ರುಚಿ ಕಂಡ ಖಾನ್ ನಟನೆಯನ್ನೇ ಬಿಟ್ಟು ಚಿತ್ರ ನಿರ್ಮಾಣದ ಕಡೆಗೂ ಗಮನಹರಿಸಲು ನಿರ್ಧರಿಸಿದ್ದರು. ಈ ಮಧ್ಯೆ ‘ಧೂಮ್ 4’ ಚಿತ್ರದ ವಿಲನ್ ಪಾತ್ರದಲ್ಲಿ ನಟಿಸುವಂತೆ ಯಶ್ ರಾಜ್ ಫಿಲಂಸ್ ನಿರ್ಮಾಣ ಸಂಸ್ಥೆ ಶಾರುಖ್ಗೆ ಆಫರ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಅಧಿಕೃತ ಘೋಷಣೆ ಬಾಕಿ ಉಳಿದಿದೆಯಂತೆ. ಅದೂ ಸದ್ಯದಲ್ಲೇ ರಿವೀಲ್ ಆಗಲಿದೆ.
No Comment! Be the first one.